ರಾಮದುರ್ಗ 01: ಕವಿತೆಗಳು ಓದುಗನಿಗೆ ರಸಾಗ್ರಹ ಉಂಟು ಮಾಡಬೇಕಾದಲ್ಲಿ ಯುವ ಕವಿಗಳು ಸಹಜ ಅಲಂಕಾರಗಳನ್ನು ಬಳಕೆ ಮಾಡಿಕೊಂಡು ಕಾವ್ಯಸೌಂದರ್ಯ ಹೆಚ್ಚಾಗುವಂತೆ ಕವಿತೆ ಬರೆಯಲು ಸತತ ಅಭ್ಯಾಸದ ಅಗತ್ಯವಿದೆ ಎಂದು ಹಿರಿಯ ಸಾಹಿತಿ ಎಸ್.ಎನ್. ಮಂಗೊಂಡ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಸಿ.ಎಸ್ ಬೆಂಬಳಗಿ ಮಹಾವಿದ್ಯಾಲಯದಲ್ಲಿ ಬೆಳಗಾವಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಘಟಕ ಹಾಗೂ ಮಹಾವಿದ್ಯಾಲಯದ ಸಾಹಿತ್ಯಿಕ ಸಂಘದ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ ಕವಿಗೋಷ್ಠಿ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಕೃತಿಯಲ್ಲಿನ ಒಂದೊಂದು ವಿಷಯವೂ ಕಾವ್ಯವಾಗಬಲ್ಲದು. ಕವಿಯಾದವನು ಅಂತರದೃಷ್ಠಿಯಿಂದ ಪರಿಸರವನ್ನು ಅವಲೋಕಿಸಿ ಸಮರ್ಥವಾಗಿ ಅಭಿವ್ಯಕ್ತಿಗೊಳಿಸುವುದು ಕಲೆಯಾಗಿದೆ. ಅದು ತನ್ನ ಕಾವ್ಯದಲ್ಲಿ ಮೂಡಿ ಬರಲು ಕನ್ನಡ ಮೇರು ಸಾಹಿತ್ಯಿಕ ಕೃತಿಗಳ ಅಧ್ಯಯನ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕ ಶ್ರೀಶೈಲ ಕರಿಶಂಕರಿ ಮಾತನಾಡಿ, ಕಲಾವಿದರು, ಕವಿಗಳಿಗೆ ಹಿಂದೆ ರಾಜಾಶ್ರಯವಿತ್ತು. ಇಂದು ಸಾಹಿತ್ಯ ಲೋಕಕ್ಕೆ ಪ್ರೋತ್ಸಾಹವನ್ನು ಸರಕಾರ ನೀಡುತ್ತಿದೆ ಎಂದು ತಿಳಿಸಿ, ಇಲಾಖೆಯ ವಿವಿಧ ಯೋಜನೆಗಳ ಬಗೆಗೆ ಮಾಹಿತಿ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರೊ. ಎಸ್.ಎಸ್ ಕೊಡತೆ, ಬರವಣಿಗೆಗೆ ಪರಿಶ್ರಮ ಅಪೇಕ್ಷಣೀಯವಾಗಿದೆ. ವಿದ್ಯಾಥರ್ಿಗಳು ಅತಿಯಾದ ಮೊಬೈಲ ಬಳಕೆಯಿಂದ ದೂರವಿದ್ದು, ಅಧ್ಯಯನದ ಕಡೆಗೆ ಗಮನ ಹರಿಸಬೇಕೆಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ತಾಲೂಕಾಧ್ಯಕ್ಷ ಪಾಂಡುರಂಗ ಜಟಗನ್ನವರ, ಕಾವ್ಯ ರಚನೆ ಒಂದು ಕಲೆಯಾಗಿದ್ದು, ಗೊತ್ತಿರುವ ಪದ ಸಮೂಹವನ್ನು ರಸತ್ತಾಗಿ ಸಾಲುಗಳಲ್ಲಿ ಜೋಡಿಸಿ, ಅರ್ಥಗಭರ್ಿತ ಅಭಿವ್ಯಕ್ತಿ ನೀಡುವ ಕೌಶಲವನ್ನು ಯುವ ಕವಿಗಳು ಬೆಳೆಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡ ಎಸ್.ಎನ್. ಮಂಗೊಂಡ ಅವರ ಕವನ ತರಂಗ ಕವನ ಸಂಕಲನವನ್ನು ಪ್ರೊ. ಎಸ್.ಎಂ. ಸಕ್ರಿ ಪರಿಚಯಿಸಿದರು. ಕವಿಗೋಷ್ಠಿಯಲ್ಲಿ ತಾಲೂಕಿನ ಸುಮಾರು 34 ಕವಿಗಳು ಭಾಗವಹಿಸಿ ಕಾವ್ಯ ವಾಚನ ಮಾಡಿದರು.
ಮಹಾವಿದ್ಯಾಲಯದ ಜಿಮಖಾನಾ ಉಪಾಧ್ಯಕ್ಷೆ ಡಾ. ರಾಜಶ್ರೀ ಗುದಗನವರ, ಹೊನವಾಡ ಕಾಲೇಜಿನ ಪ್ರಾಚಾರ್ಯ ಪ್ರೊ. ಎಸ್. ಜಿ. ಲಕ್ಕುಂಡಿಮಠ ಸೇರಿದಂತೆ ಇತರರಿದ್ದರು.
ಕಸಾಪ ಕಾರ್ಯದಶರ್ಿ ಈರಣ್ಣಾ ಬುಡ್ಡಾಗೋಳ ಸ್ವಾಗತಿಸಿದರು. ಶಿವಾನಂದ ಕರಗನ್ನವರ ಕಾರ್ಯಕ್ರಮ ನಿರೂಪಿಸಿದರು. ಡಾ. ಎಸ್.ಬಿ. ಸಂಗಮ ವಂದಿಸಿದರು.