ಕಾವ್ಯ, ಕಥಾ ಕಾದಂಬರಿ ಪ್ರಶಸ್ತಿ ಪ್ರದಾನ, ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ

ಬೆಳಗಾವಿ: ಅಖಿಲ ಭಾರತ ಮಟ್ಟದ ಮಾನ್ಯತೆ ಸಿಗುವಂತಾಗಲು ಇಂಗ್ಲಿಷಿಗೆ ಕನ್ನಡ ಅನುವಾದವಾಗಬೇಕು. ಶ್ರೇಷ್ಠ ಕೃತಿಗಳು ಇಂಗ್ಲಿಷ್ನಲ್ಲಿ ಇಲ್ಲ ಎನ್ನುವ ಕಾರಣಕ್ಕೆ ಮಂಕುತಿಮ್ಮನ ಕಗ್ಗಕ್ಕೆ ಜ್ಞಾನಪೀಠ ಪ್ರಶಸ್ತಿ ಸಿಗಲಿಲ್ಲ. ಮಹತ್ವದ ಕೃತಿಗಳನ್ನು ಇಂಗ್ಲಿಷ್ಗೆ ಅನುವಾದಿಸುವ ಕೆಲಸ ಕಾರ್ಯವಾಗಬೇಕಿದೆ ಎಂದು ಡಾ. ಎಚ್.ಎಸ್. ವೆಂಕಟೇಶಮೂತರ್ಿ ಹೇಳಿದರು.

  ನಗರದ ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಪ್ರತಿಷ್ಠಾನ ಸಬಾಭವನದಲ್ಲಿ  ರವಿವಾರ 08 ರಂದು ಆಯೋಜಿಸಲಾಗಿದ್ದ, ಡಾ. ಬೆಟಗೇರಿ ಕೃಷ್ಣಶರ್ಮ ಯುವ ಕಾವ್ಯ, ಕಥಾ ಕಾದಂಬರಿ ಪ್ರಶಸ್ತಿ ಪ್ರದಾನ, ವಿಚಾರ ಸಂಕೀರಣ ಮತ್ತು ಪುಸ್ತಕ ಲೋಕಾರ್ಪಣೆ  ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ,

ಇದೇ ರೀತಿ, ಆನಂದ ಕಂದರಿಗೂ ಆಗಿದೆ. ಇಂಗ್ಲಿಷ್ ಕನ್ನಡದ ಪ್ರತಿಷ್ಠೆ ಮೇಲೆತ್ತಲು ಮಹತ್ವದ ಸಾಧನವಾಗಿದೆ. ಕನ್ನಡ ಇಂಗ್ಲಿಷ್ ಮೇಲೆ ಸವಾರಿ ಮಾಡುವ ಪಲ್ಲಕ್ಕಿ ಆಗಬೇಕು. ಆಗ ಗಾಂಧೀಜಿ ಕನಸಿನ ಸ್ವದೇಶಿ ರಾಜ್ಯ ಸ್ಥಾಪನೆಯಾಗುತ್ತದೆ. 

ಆಧುನಿಕ ಭಾರತಕ್ಕೆ ಆನಂದಕಂದರ ಕೊಡುಗೆ ಏನು ಎನ್ನುವುದನ್ನು ಇಡೀ ಜಗತ್ತಿಗೆ ತಿಳಿಸಬೇಕಾಗಿದೆ. ಹೀಗಾಗಿ ಅವರ ರಚನೆಗಳನ್ನು ಸಮರ್ಥವಾಗಿ ಇಂಗ್ಲಿಷ್ಗೆ ಅನುವಾದ ಮಾಡಬೇಕು.ಇಳಿವಯಸ್ಸಿನಲ್ಲಿ ಉತ್ಸಾಹ ಇರುವುದಿಲ್ಲ. ಸಾಹಿತ್ಯದ ಮಾತೃಶಕ್ತಿಯಾದ ನೆನಪು ಅಥವಾ ಸ್ಮರಣೆ ಕಡಿಮೆಯಾಗುತ್ತಾ ಹೋಗುತ್ತದೆ. ಆಗ ಸೃಜನಶೀಲ ಶಕ್ತಿಯೂ ಕಡಿಮೆಯಾಗುತ್ತದೆ. ಕವಿಗೆ ಇಂದ್ರಿಯಗಳು ಚುರುಕಾದಾಗ ಕವಿತೆಗಳಲ್ಲಿ ತೇಜಸ್ಸು ಅರಳು ಸಾಧ್ಯ.

ಕನ್ನಡದ ಕ್ರಿಯಾಶಕ್ತಿ ನಾಶವಾಗಿಲ್ಲ ಹಾಗೂ ಆತ್ಮಶಕ್ತಿ ಇನ್ನೂ ಇದೆ ಎನ್ನುವುದನ್ನು ಯುವ ಬರಹಗಾರರು ನಿರೂಪಿಸುತ್ತಿದ್ದಾರೆ. ವ್ಯಾಸ, ವಾಲ್ಮೀಕಿ, ಕುಮಾರವ್ಯಾಸರ ಶಕ್ತಿ ಕಡಿಮೆಯಾಗಿದೆಯೇ ಎನ್ನುವಾಗ ತರುಣ, ತರುಣಿಯರನ್ನು ನೋಡಿದರೆ ಆಶಾಭಾವ ಮೂಡುತ್ತದೆ. ಹೀಗಾಗಿ, ಯುವಜನರನ್ನು ಪ್ರೋತ್ಸಾಹಿಸಬೇಕು. ಹೀಗಾಗಿ ನಿಜವಾದ ಗಟ್ಟಿ ಕಾಳುಗಳನ್ನು ಗುರುತಿಸುವ ಕೆಲಸವನ್ನು ಅಕಾಡೆಮಿಗಳು, ಟ್ರಸ್ಟ್ಗಳು, ಪ್ರತಿಷ್ಠಾನಗಳು ಗುರುತಿಸಬೇಕು ಎಂದು ಸಲಹೆ ನೀಡಿದರು.ವಯಸ್ಸು ದೇಹಕ್ಕೆ ಮಾತ್ರ ಮನಸಿಗಲ್ಲ. ಶಿಷ್ಯರು ಶಿಕ್ಷಕರಿಗೆ ಬೋದಸುವ ಕಾಲ ಸನ್ನಿಹಿತವಾಗಿದೆ. ಸಂಗೀತ ಕೆಳದ ಬದುಕು ಯಾತಕ್ಕೆ ಬೇಕು ಎಂದವರು ಬೇಂದ್ರೆಯವರು.

     ಡಾ. ಸಿ ನಾಗಣ್ಣ ಮಾತನಾಡಿ, ಆನಂದ ಕಂದರ ಕಾವ್ಯ ಸಮಾಜ, ನಾಡಿನ ಸಂಸ್ಕತಿಯ ಹಿರಿಮೆಗೆ ಸಾಕ್ಷಿ. ಕಾಲ ಕಾಲಕ್ಕೂ ಕನ್ನಡವನ್ನು ಹಿಮ್ಮೆಟಿಸುವ ಕೆಲಸವಾಗುತ್ತಿದೆ. ಯುವ ಬರಗಾರದಿಂದ ಕನ್ನಡಕ್ಕೆ ಮತ್ತೇ ತೇಜಸ್ ಬಂದಿದೆ. ಶ್ರೇಷ್ಠ ಕೃತಿಗಳು ದೇಶ ವಿದೇಶದಲ್ಲಿ ಮಿಂಚಬೇಕಾದರೆ. ಇಂಗ್ಲಿಷಗೆ ಅನುವಾದವಾಗಬೇಕಿದೆ ಎಂದರು.

  ಈ ಸಂದರ್ಭದಲ್ಲಿ ಡಾ. ಸಿ.ಕೆ. ನಾವಲಗಿ, ವಿದ್ಯಾವತಿ ಭಂಜತ್ರಿ ಸ್ವಾಗತಿಸಿದರು. ಪ್ರೋ.ಶಶಿಧರ, ಚೆನ್ನಪ್ಪ ಅಂಗಡಿ, ಪ್ರೋ ಮಲ್ಲಿಕಾಜರ್ುನ ಹಿರೇಮಠ, ಡಾ. ಬಾಳಾ ಸಾಹೇಬ ಲೋಕಾಪುರ, ಪ್ರೋ ರಾಘವೇಂದ್ರ, ಡಾ. ಸರಜೂಕಾಟ್ಕರ್ ನಿರೂಪಿಸಿದರು. ಆಶಾ ಕಡಪಟ್ಟಿ ವಂದಿಸಿದರು. ಬಿಇಡ್ ಕಾಲೇಜ ವಿದ್ಯಾಥರ್ಿನಿಯರು ಹಾಗೂ ಇತರರು ಇದ್ದರು. ಲಿಂಗಾಯತ ವಧು-ವರ-ಪಾಲಕರ ಸಮಾವೇಶ

ಬೆಳಗಾವಿ , 8: 58ಕ್ಕೂ ಲಿಂಗಾಯತ ವಧು-ವರ-ಪಾಲಕರ ಸಮಾವೇಶ ಭಾನುವಾರ ನಡೆಯಿತು. ರಾಜ್ಯಸಭಾ ಸದಸ್ಯರೂ, ಕೆಎಲ್ಇ ಸಂಸ್ಥೆಯ ಕಾಯರ್ಾಧ್ಯಕ್ಷರೂ ಆಗಿರುವ ಡಾ.ಪ್ರಭಾಕರ ಕೋರೆ ಸಮಾವೇಶವನ್ನು ಉದ್ಘಾಟಿಸಿದರು. 

ಒಳ ಪಂಗಡಗಳನ್ನು ಮರೆತು ಸಂಬಂಧಗಳನ್ನು ಬೆಳೆಸಿದರೆ ಶರಣ ಧರ್ಮದ ಆಶಯ ಈಡೇರುತ್ತದೆ ಎಂದು ಕೋರೆ ಹೇಳಿದರು. ಅಂಗದ ಮೇಲೆ ಲಿಂಗವ ಧರಿಸಿದವರನ್ನೆಲ್ಲ ಕೂಡಲಸಂಗಮನೆಂಬೆ ಎನ್ನುವ ಮಾತನ್ನು ಕ್ರಿಯೆಗಿಳಿಸಿದರೆ ನಮ್ಮ ಸಮಾದಲ್ಲಿ ಐಕ್ಯತೆ ಮೂಡುತ್ತದೆ ಎಂದೂ ಅವರು ಹೇಳಿದರು. 

ಕಾರಂಜಿಮಠದ ಗುರುಸಿದ್ಧ ಸ್ವಾಮಿಗಳು ಮಾತನಾಡಿ, ವಧು-ವರ ಪಾಲಕರು ಅಧಿಕಾರ, ಅಂತಸ್ತು ನೋಡದೆ ಸಂಸ್ಕಾರ, ಸಂಸ್ಕೃತಿ, ಆರೋಗ್ಯ, ನೀಡಿ ಸಲಕ್ಷಣಗಳಿಗೆ ಆದ್ಯತೆ ಸಂಬಂಧ ಬೆಳೆಸಲು ಮುಂದಾಗಬೇಕು 

ಎಂದರು. 

ಸಿದ್ದನಗೌಡ ಪಾಟೀಲ, ಬಿ.ವಿ.ಕಟ್ಟಿ, ಪ್ರಕಾಶ ಬಾಳೆಕುಂದ್ರಿ, ಎಂ.ಬಿ.ಜಿರಲಿ, ಗುರುದೇವಿ ಹುಲೆಪ್ಪನವರಮಠ, ಭಾರತಿ ಮಠದ, ವಿಜಯಾ ಪುಟ್ಟಿ, ವಿದ್ಯಾ ಸವದಿ, ಜಯಾ ಜಾಲಿಹಾಳ, ಆಶಾ ಪಾಟೀಲ, ಸುಧಾ ಪಾಟೀಲ, ಗುರುರಾಜ ಹುಣಶಿಮರದ ಮೊದಲಾದವರು ವೇದಿಕೆಯಲ್ಲಿದ್ದರು. 

ಎಫ್.ವಿ.ಮಾನ್ವಿ ಸ್ವಾಗತಿಸಿದರು. ರತ್ನಪ್ರಭಾ ಬೆಲ್ಲದ ಪ್ರಸ್ತಾವಿಕ ಮಾತನಾಡಿದರು. ಆಶಾ ಯಮಕನಮರಡಿ ಕಾರ್ಯಕ್ರಮ ನಿರೂಪಿಸಿದರು. ಜಯಶೀಲಾ ಬ್ಯಾಕೋಡ ವಂದಿಸಿದರು. 

ಕೆಎಲ್ಇ ಸಂಸ್ಥೆಯ ವೀರಶೈವ ಲಿಂಗಾಯತ ವಧು-ವರ ಅನ್ವೇಷಣಾ ಕೇಂದ್ರ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ ಆಶ್ರಯದಲ್ಲಿ ಸಮಾವೇಶ ನಡೆಯಿತು.