ಲೋಕದರ್ಶನ
ವರದಿ
ಬೆಳಗಾವಿ 11: ರಾಜ್ಯ
ಸರಕಾರವು ಪಿಎಲ್ಡಿ ಬ್ಯಾಂಕಿನ ರೈತರ ಸುಸ್ತಿ ಸಾಲ
ಮನ್ನಾ ಮಾಡುವಂತೆ ಒತ್ತಾಯಿಸಿ, ಬೆಳಗಾವಿ ಜಿಲ್ಲಾ ಪ್ರಾಥಮಿಕ ಸಹಕಾರಿ
ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕುಗಳ ವತಿಯಿಂದ ಗುರುವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲಾ
ಧಿಕಾರಿಗಳ ಆವರಣದಲ್ಲಿ ಕೆಲಹೊತ್ತು ಪ್ರತಿಭಟಿಸಿ ಅವರು. ರಾಜ್ಯ ಸರಕಾರವು ಇತ್ತೀಚಿಗೆ ರೈತರಿಗೆ ಸಹಕಾರ ಸಂಘಗಳಲ್ಲಿನ
ಹಾಗೂ ವಾಣಿಜ್ಯ ಬ್ಯಾಂಕುಗಳ
ಬೆಳೆ ಸಾಲ ಮನ್ನಾ ಮಾಡಿದೆ
ಆದರೆ ಪಿಎಲ್ಡಿ ಬ್ಯಾಂಕಿನ ರೈತನ ಸಾಲ ಮನ್ನಾ ಮಾಡದೇ
ಅನ್ಯಾಯ ಮಡುತ್ತಿದೆ. ಕನಿಷ್ಠ 70% ರಷ್ಟು ಸಾಲ ವಸೂಲಾತಿ ಯಾದಲ್ಲಿ
ರೈತರಿಗೆ ಹೊಸ ಸಾಲ ನೀಡುವಂತೆ
ಅನುಕೂಲವಾಗುತ್ತದೆ. ಅದ್ಯಾವುದನ್ನು ಮಾಡದೇ, ನಮ್ಮ ಬ್ಯಾಂಕಿನಿಂದ ಸಾಲ
ಪಡೆದ ರೈತರನ್ನು ಇಟ್ಟಕ್ಕಿಗೆ ಸಿಲುಕ್ಕಿಸಿದೆ ಎಂದು ಆಪಾಸಿದರು.
ಪಿಎಲ್ಡಿ
ಬ್ಯಾಂಕಿನಿಂದ ರೈತರಿಗೆ ಸುಸ್ತಿ ಸಾಲ ಈಗಾಗಲೇ 500 ಕೋಟಿ
ನೀಡಲಾಗಿದೆ. ಸಾಲಮೈತ್ರಿ ಸರಕಾರ ರೈತರ ಸಾಲದ ಬಡಿಯದನ್ನಾದರೂ
ಮನ್ನಾ ಮಾಡಿದರೆ ನಮಗೆ ಅರ್ಧದಷ್ಟು ಕೆಲಸ
ಮಾಡುವಂತೆ ಪರಿಹಾರ ನೀಡುತ್ತೆವೆ. ಎಲ್ಲ ಬ್ಯಾಂಕುಗಳ ಸಾಲ
ಮನ್ನಾವಾಗಿ ಮರು ಸಾಲವನ್ನು ರೈತರು
ತೆಗುದುಕೊಳ್ಳುತ್ತಿದ್ದಾರೆ.
ಅಷ್ಟಾದರೂ ಗಮನದಲ್ಲಿ ಇಟ್ಟುಕೊಂಡು ರಾಜ್ಯ ಸರಕಾರ ನಮ್ಮ ಪಿಎಲ್ಡಿ
ಬ್ಯಾಂಕಿನ ರೈತರ ಸುಸ್ತಿ ಸಾಲ
ಮನ್ನಾ ಮಾಡಬೇಕು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಚಯ್ಯ ಹಿರೇಮಠ, ಬಸವರಾಜ ಹುಣಸಾಳ, ಜಗದೀಶ ಶೀಂಡ್ರಿ, ಸಿದ್ದಗೌಡ ಪಾಟೀಲ ಹಾಗೂ ಉಪಸ್ಥಿತಿತರಿದ್ದು.