ಲೋಕದರ್ಶನ ವರದಿ
ಮೂಡಲಗಿ 19: ಕಡೋಲಿ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿರುವ ಘಟನೆಯ ಕುರಿತು ಮೂಡಲಗಿ ತಹಶಿಲ್ದಾರ ಇವರ ಮುಖಾಂತರ ಬಸವರಾಜ ಬೋಮ್ಮಾಯಿ ಗೃಹ ಸಚಿವರಿಗೆ ಮೂಡಲಗಿ ತಾಲೂಕಾ ಶ್ರೀ ಹಡಪದ ಅಪ್ಪಣ್ಣ ಸಮಾಜದವರ ವತಿಯಿಂದ ಮನವಿ ಸಲ್ಲಿಸಲಾಯಿತು.
ಈಗಾಗಲೇ ಅತ್ಯಾಚಾರ ಎಂಬುವುದು ದೇಶಕ್ಕೆ ಒಂದು ಮಾರಿಯಾಗಿದ್ದು ಇಂತಹ ದಿನಮಾನದಲ್ಲಿ ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ಆರು ವರ್ಷದ ಬಾಲಕಿಯ ಮೇಲೆ ಕ್ರೋರವಾಗಿ ಅತ್ಯಾಚಾರವೆಸಗಿದ್ದು. ಅಸಹ್ಯಕರ ಸಂಗತಿ ಈಗಾಗಲೇ ತೆಲಂಗಾನದಲ್ಲಿ ಪಶು ವೈದೈರಾದ ಪ್ರಿಯಾಂಕರವರ ಪ್ರಕರಣವನ್ನು ಮರೆಯುವಷ್ಠರಲ್ಲಿ ಮತ್ತೋಂದು ನೋವು ನಮಗೆ ಆಗಿದೆ ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರ ಕಠಿಣ ಶಿಕ್ಷೆ ಘೋಷಣೆ ಇದ್ದರು ಇಂತಹ ಪಾಪಿಗಳಿಗೆ ಇನ್ನೂ ಎಚ್ಚರಿಕೆ ಬರುತ್ತಿಲ್ಲಾ ಮಹನೀಯ ದಯಾಳುಗಳಾದ ತಾವು ಪ್ರಿಯಾಂವರವ ಪ್ರಕರಣವನ್ನು ಆಧಾರವಾಗಿ ಇಟ್ಟುಕೊಂಡು ಕಡೋಲಿ ಗ್ರಾಮದಲ್ಲಿ ನಡೆದ ಅತ್ಯಾಚಾರವನ್ನು ಗಣನೆಗೆ ತೆಗೆದುಕೊಂಡು ಅತ್ಯಾಚಾರ ಮಾಡಿದ ಪಾಪಿಗೆ ಕಠೋರ ಶಿಕ್ಷೇ ನೀಡಿ ಮತ್ತು ಅನುಕಂಪವನ್ನು ನೋಡದೆ ಅತನಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಸಂಘದಿಂದ ಹಾಗೂ ಸಾರ್ವಜನಿಕರಿಂದ ಈ ಮನವಿಯಲ್ಲಿ ಆಗ್ರಹಿಸದರು. ಶಿವಬಸು ಸುಣಧೋಳಿ, ಶಿವಭೋಧ ಉದಗಟ್ಟಿ, ಶ್ರೀಕಾಂತ ನಾವಿ, ಸದಾಶಿವ ಕಟ್ಟಿಮನಿ, ಕಾಂತಗೌಡ ನಾವಿ, ಶಿವಾನಂದ ಮಂಟೂರ, ಉಮೇಶ ಹಡಪದ, ಶಿವಬಸು ಕೋರೆನ್ನವರ, ಸುಭಾಷ ರೈನಾಪೂರ ಹಾಗೂ ಮುಂತಾದವವರು ಭಾಗವಹಿಸಿದರು.