ವಿಜಯಪುರ 07: ಜೀವನೋಪಾಯಕ್ಕಾಗಿ ತನ್ನಷ್ಟಕ್ಕೆ ತಾನಾಗಿ ದುಡಿದು ಯಾರಿಗೂ ತೊಂದರೆ ಕೊಡದ ಶ್ರೀಮಂತ ಚವ್ಹಾಣ ಇವರಿಗೆ ಬರಟಗಿ ತಾಂಡಾ ಗ್ರಾಮ ಪಂಚಾಯಿತಿ ವಾಟರ್ ಮ್ಯಾನ ರಮೇಶ ನೀಲು ರಾಠೋಡ ಇವರಿಂದ ಜೀವ ಬೆದರಿಕೆ ಇರುವುದರಿಂದ ತಕ್ಷಣ ಶ್ರೀಮಂತ ಚವ್ಹಾನ ಹಾಗೂ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಿ ಅತೀಕ್ರಮಣ ಮಾಡಿರು ಜಾಗೆಯನ್ನು ಬಿಡಬೇಕೆಂದು ಒತ್ತಾಯಿಸಿ ಹಂಚನಾಳ ತಾಂಡಾದ ನಿವಾಸಿಗಳಿಂದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಮನವಿ ಸಲ್ಲಿಸಲಾಯಿತು.
ತಿಕೋಟಾ ತಾಲೂಕಿನ ಬಬಲೇಶ್ವರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಂಚನಾಳ ಎಲ್ ಟಿ 2 ರಲ್ಲಿ ಸರ್ಕಾರಿ ಸಮುದಾಯ ಭವನವನ್ನು ಮಾಜಿ ಗ್ರಾಮ ಪಂಚಾಯತ ಸದಸ್ಯ ನೀಲು ದೇವಲು ರಾಠೋಡ ಹಾಗೂ ಅವರ ಮಗನಾದ ರಮೇಶ ನೀಲು ರಾಠೋಡ ಇವರು ಬರಟಗಿ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ವಾಟರ್ ಮ್ಯಾನ್ ಆಗಿರುತ್ತಾರೆ ಮತ್ತು ಇವರ ಇಬ್ಬರು ಮಕ್ಕಳು ಸೇರಿ ಸಮುದಾಯ ಭವನವನ್ನು ಅತಿಕ್ರಮಣ ಮಾಡಿಕೊಂಡಿದ್ದು ಅದನ್ನು ಪೋಲೀಸ ಸಹಾಯಕ ಆಯುಕ್ತರು (ಆಙಖಕ ಗ್ರಾಮೀಣ ಉಪವಿಭಾಗ) ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (ಅ ಇ ಓ) ಜಿಲ್ಲಾ ಪಂಚಾಯತ ವಿಜಯಪುರ ಇವರಿಗೆ ದೂರು ಕೊಟ್ಟಾಗ ಅದನ್ನು ಅವರು ತೆರುವುಗೊಳಿಸಿರುತ್ತಾರೆ.
ಆದರೆ ಅವರು ಇನ್ನೂ ಸಂಪೂರ್ಣವಾಗಿ ತೆರುವು ಗೊಳಿಸದೆ ಇದ್ದಾಗ ಸಾರ್ವಜನಿಕರು ಕೇಳಲು ಹೋದಾಗ ಗ್ರಾಮದ ಶ್ರೀಮಂತ ಶಿವಲಾಲ ಚವ್ಹಾಣ ಇವರ ಮೇಲೆ ನೀಲು ದೇವಲು ರಾಠೋಡ ಕುಟುಂಬದವರೆಲ್ಲರು ಸೇರಿ ಮಾರಣಾಂತಿಕವಾಗಿ ಹಲ್ಲೆ ಯತ್ನಿಸಿರುತ್ತಾರೆ. ಸದರಿ ಜಾಗೆ ತೆರುವುಗೊಳಿಸಿರುವ ಕೋಪದಿಂದಾಗಿ ಶ್ರೀಮಂತ ಮತ್ತು ಶ್ರೀಮಂತ ಶಿವಲಾಲ ಚವ್ಹಾಣ ಕುಟುಂಬದವರಿಗೆ ಜೀವ ಬೆದರಿಕೆ ಹಾಕಿ ಹೋಗಿದ್ದಾರೆ. ಹೀಗಾಗಿ ಈಗಾಗಲೆ ಅವರ ಮೇಲೆ ಗ್ರಾಮೀಣ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಮಾಜಿ ಅಧ್ಯಕ್ಷ ಅವರ ಕುಟುಂಬವು ಗ್ರಾಮದ ನಿವಾಸಿ ಶ್ರೀಮಂತ ಚವ್ಹಾಣ ಅವರಿಗೆ ಜೀವ ಬೆದರಿಕೆಯೊಡ್ಡುತ್ತಿದ್ದಾರೆ. ತಕ್ಷಣ ಅಧಿಕಾರಿಗಳು ಇವರ ಮೇಲೆ ಸೂಕ್ತ ಕ್ರಮ ಜರುಗಿಸಿ ಶ್ರೀಮಂತನಿಗು ಮತ್ತು ನನ್ನ ಕುಟುಂಬದ ಎಲ್ಲ ಸದಸ್ಯರಿಗೆ ಸೂಕ್ತ ಕಾನೂನಾತ್ಮಕವಾಗಿ ರಕ್ಷಣೆ ನೀಡಬೇಕು ಹಾಗೂ ಅವರು ಅತೀಕ್ರಮಣ ಮಾಡಿಕೊಂಡಿರು ಜಾಗೆಯನ್ನು ತಕ್ಷಣ ತೆರವುಗೊಳಿಸಬೇಕು. ಸದರಿ ವಿಷಯದ ಕುರಿತು ಸಂಬಂದ ಪಟ್ಟ ಅದಿಕಾರಿಗಳಿಗು ಸಾಕಷ್ಟು ಭಾರಿ ಮನವಿ ಸಲ್ಲಿಸಲಾಗಿದೆ. ತಕ್ಷಣ ಸರ್ಕಾರ ಅಧಿಕಾರಿಗಳು ಎಚ್ಚೆತ್ತುಕೊಂಡು ಅತೀಕ್ರಮಣ ಮಾಡಿದ ಸಮುದಾಯ ಭವನದ ಜಾಗೆಯನ್ನು ತೆರವು ಗೊಳಿಸಬೇಕೆಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ.
ಒಂದು ವೇಳೆ ಸರ್ಕಾರದ ಸಮುದಾಯ ಭವನವನ್ನು ತೆರವುಗೊಳಿಸದಿದ್ದರೆ ಉಗ್ರಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಬರಟಗಿ ತಾಂಡಾದ ನಿವಾಸಿಗಳಾದ ರಾಜು ರಾಠೋಡ, ಪಂಕಜ ಚವ್ಹಾಣ, ಕೃಷ್ಣಾ ಚವ್ಹಾಣ, ಶಂಕರ ಚವ್ಹಾಣ, ಪವನ ಚವ್ಹಾಣ ಮುಂತಾದವರು ಇದ್ದರು.