ಲೋಕದರ್ಶನ ವರದಿ
ಹುಕ್ಕೇರಿ: ಕೇವಲ ಗಾಂಧಿ ಜಯಂತಿ ದಿವಸ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬಿದಿಗೆ ಬರದೆ ಎಲ್ಲಾ ಸಂಧರ್ಬದಲ್ಲಿಯೂ ಜನರಿಗೆ ಅರಿವು ಮುಡಿಸಿದರೆ ನಮ್ಮ ದೇಶದವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡಬಹುದು ಎಂದು ಹಿರೇಮಠದ ಚಂದ್ರಶೇಖರ ಶೀವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಬುಧವಾರ ಗಾಂಧಿ ಜಯಂತಿ ಪ್ರಯುಕ್ರ ಹೀರೆಮಠದಿಂದ ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನದ ನೆತೃತ್ವ ವಹಿಸಿ ಅವರು ಮಾತನಾಡಿದರು.
ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಮಾರಕವಾಗಿದೆ. ಪ್ಲಾಸ್ಟಿಕ್ ಬಳಕೆಯಿಂಹ ಮನುಷ್ಯನ ಆರೊಗ್ಯದ ಮೇಲೂ ಪರಿಣಾಮವನ್ನು ಬಿರುತ್ತಿದೆ. ಬಹಳಷ್ಟು ಸಂಕಲ್ಪಗಳು ಕಾರ್ಯರೂಪಕ್ಕೆ ಬಂದಿರುವದಿಲ್ಲ. ಕಳೆದ ವರ್ಷ ನವೆಂಬರನಲ್ಲಿ ಹಿರೇಮಠದಿಂದ ಬೆಳಗಾವಿಯಲ್ಲಿ ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನವನ್ನು ಆರಂಭಿಸಿ ಸುಮಾರು ಎರಡು ಲಕ್ಷ ಬಟ್ಟೆ ಚಿಲಗಳನ್ನು ವಿತಾರಿಸಿ ಅರಿವು ಮುಡಿಸಲಾಗಿತ್ತು. ಅದನ್ನ ಮುಂದು ವರಿಸಿಕೊಂಡು ಹೋರಟ್ಟಿದ್ದೆವೆ.
ದೇಶದ ಪ್ರದಾನಿ ನರೇಂದ್ರ ಮೋದಿಯವರು ಪ್ಲಾಸ್ಟಿಕ್ ಮುಕ್ತ ಭಾರತ ಮಾಡಲಿಕ್ಕೆ ಅಧಿಕೃತ ಆದೇಶ ಹೋರಡಿಸಿರುವುದು ಹೆಮ್ಮೆಯ ಸಂಗತಿ. ನೀವು ಮಾಡಿದ ಕಸವನ್ನು ಅಲ್ಲಿ ಇಲ್ಲಿ ಎಸಡಯುವ ಬದಲು ನಿಮಾಗಾಗಿಯೇ ಇರುವ ಪುರಸಭೆ, ನಗರಸಭೆ ಹಾಗೂ ಗ್ರಾಮ ಪಂಚಾಯತಿ ಇವುಗಳ ಜೋತೆ ಸ್ಪಂದಿಸಿ ಕಸವನ್ನು ವ್ಯವಸ್ತಿತ ರೀತಿಯಲ್ಲಿ ವಿಲೇವಾರಿ ಮಾಡಲು ಸಾರ್ವಜನಿಕರು ಮುಂದಾಗಬೇಕು ಎಂದು ಅವರು ಹೇಳಿದರು.
ಇದೇ ಸಂಧರ್ಬದಲ್ಲಿ ತಹಶೀಲ್ದಾರ್ ರೇಷ್ಮಾ ತಾಳಿಕೋಟಿ ಮಾತನಾಡಿ, ಪ್ಲಾಸ್ಟಿಕ್ ಬಳಕೆಯನ್ನು ಜನರು ಸ್ವ ಇಚ್ಛೆಯಿಂದ ಬೀಡಬೇಕು. ಹಿರೇಮಠದ ಶ್ರೀಗಳು ಎಲ್ಲ ಜನರಲ್ಲಿ ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ನಾವು ತಾಲೂಕಾಡಳಿದ ವತಿಯಿಂದ ಪ್ಲಾಸ್ಟಿಕ್ ಬಳಕೆ ಮಾಡದಂತೆ ಜಾಗೃತಿ ಮೂಡಿಸಿ ಈ ಪ್ಲಾಸ್ಟಿಕ್ ಮಯಕ್ತ ಭಾರತ ಅಭಿಯಾನಕ್ಕೆ ಎಲ್ಲರು ಕೈ ಜೋಡಿಸಬೇಕು ಎಂದು ಹೇಳಿದರು.
ಈ ವೇಳೆ ಸ್ವತಃ ಶ್ರೀಗಳೆ ರಸ್ತೆ ಪಕ್ಕ ಬಿದ್ದ ನಿರುಪಯುಕ್ತ ಪಸ್ತುಗಳು ಕಸವನ್ನು ತಮ್ಮ ಕೈಯಿಂದಲೇ ಎತ್ತುವ ಮೂಲಕ ಎಲ್ಲರಿಗೂ ಮಾದರಿಯಾದರು. ಮತ್ತು ಈ ವೇಳೆ ಎಲ್ಲ ದೇವಸ್ತಾನಗಳಿಗೆ ಸ್ಟಿಲ್ ಡಸ್ಟಬಿನ್ ನೀಡಿ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಬಳಸದಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಹಿರೇಮಠದ ಗಳು, ಭಕ್ತರು, ತಾಲೂಕು ಆಡಳತ ಅಧಿಕಾರಿಗಳು, ಪುರಸಭೆ ಅಧಿಕಾರಿಗಳು ಹಾಗೂ ಪೌರಕಾಮರ್ಿಕರು ಕಾಲ್ನಡಿಗೆಯಲ್ಲಿ ಪೇಟೆ ಮಾರ್ಗವಾಗಿ ಎಲ್ಲ ಅಂಗಡಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ಪರಿಣಾಮದ ಬಗ್ಗೆ ಜಾಗೃತಿ ಮುಡಿಸಿದರು.