ಗಿಡ ಮರಗಳು ಮನುಕುಲಕ್ಕೆ ಪರೋಪಕಾರ ವಸ್ತುಗಳು: ಗುರು ಸಿದ್ದೇಶ್ವರ ಸ್ವಾಮೀಜಿ
Plants and trees are benevolent objects for mankind
ಯಮಕನಮರಡಿ, 14 : ಮನುಷ್ಯನ ಬದುಕಿಗೆ ಗಿಡಮರಗಳು ಗಾಳಿ ನೆರಳು ಪಕ್ಷಿ ಪ್ರಾಣಿಗಳಿಗೆ ವಾಸಿಸಲು ಸ್ಥಳಾವಕಾಶ ನೀಡುವುದರ ಜೊತೆಗೆ ತನ್ನಷ್ಟಕ್ಕೆ ತಾನು ಬೆಳೆದು ನಮಗೆಲ್ಲ ತಿನ್ನಲು ಹಣ್ಣುಗಳನ್ನು ಕೊಡುತ್ತವೆ ಅಲ್ಲದೇ ಪರಿಸರವನ್ನು ಸ್ವಚ್ಛವಾಗಿ ಇಡಲು ಮರಗಳು ಸಹಕಾರಿ ಆಗುತ್ತದೆ ನಾವು ನಮ್ಮ ಬದುಕಿಗಾಗಿ ನಮ್ಮ ಪರಿಸರ ಉದ್ದಕ್ಕೂ ಗಿಡಮರಗಳನ್ನು ಬೆಳೆಸಿ ಉತ್ತಮ ಪರಿಸರ ರೂಪಿಸಲು ಮುಂದಾಗ ಬೇಕೆಂದು ಹತ್ತರಗಿ ಕಾರಿಮಠದ ಪೂಜ್ಯರಾದ ಗುರು ಸಿದ್ದೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ದಿನಾಂಕ 13 ರಂದು ಸ್ಥಳೀಯ ಪತ್ರಕರ್ತರ ಬಳಗ ಆಯೋಜಿಸಲಾಗಿದ್ದ ಪರಿಸರ ದಿನಾಚರಣೆಯ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು ಇದೇ ಸಂದರ್ಭದಲ್ಲಿ ಶ್ರೀಮಠದ ಅವರಣದಲ್ಲಿ ಹಣ್ಣು ಹಂಪಲ ನೆರಳು ನೀಡುವ ಬೇವಿನ ಮರಗಳನ್ನು ನೀಡಲಾಯಿತು ನಂತರ ಸಮೀಪದ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸಿ.ಆರ್ ಸೀಗಿಹೊಳಿ ಮತ್ತು ದಡ್ಡಿ ವಲಯ ಡಿ ಆರ್ ಎಫ್ ಪ್ರಭು ತಂಗಡಿ ಮತ್ತು ಅವರ ಸಿಬ್ಬಂದಿಗಳು ಉಪಚುತರಿದ್ದರು ಪತ್ರಕರ್ತರ ಬಳಗದವರಾದ ಗೋಪಾಲ್ ಚಪ್ಪನಿ ಭೀಮಪ್ಪ ಕೋತಿಕರ್ ಎಎಂ ಕರ್ನಾಚಿ ಸಂಜು ಮುಷ್ಟಿಗಿ ಶ್ರೀಶೈಲ ಪಿಟಗಿ, ಕಲ್ಲಪ್ಪ ರಾಮ ನಾಯಕ್ ಪ್ರಭು ಕೋತ್ ಉಪಸ್ಥಿತರಿದ್ದು ಇಂದಿರಾನಗರ ಕನ್ನಡ ಶಾಲೆಯ ಹಿರಿಯ ಶಿಕ್ಷಕರು ಸ್ವಾಗತಿಸಿ ದರು ನಂತರ ಕಿರಿಯ ಶಿಕ್ಷ ಕಿಯರು ಪ್ರಾಸ್ತಾವಿಕವಾಗಿ ಮಾತನಾಡಿದರು ನಂತರ ಪತ್ರಕರ್ತರ ಬಳಗದವರಿಂದ ಅತಿಥಿಗಳಿಗೆ ಅಧಿಕಾರಿಗಳಿಗೆ ಸನ್ಮಾನಿಸಲಾಯಿತು.
ಹಿರಿಯ ಶಿಕ್ಷಕರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು ಎಲ್ಲರೂ ಪರಿಸರ ಉಳಿಸೋಣ ಹಸುರಾದ ನಾಡನ್ನು ಬೆಳೆಸೋಣ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಪೆನ್ನು ನೋಟು ಬುಕ್ಕ ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜು ಉಪನ್ಯಾಸಕರಾದ ನೀಲಕಂಠ ಭೂ ಮನವರ ಉಪಸ್ಥಿತರಿದ್ದು ಮಾತನಾಡಿದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 