ಲೋಕದರ್ಶನ ವರದಿ
ಬೈಲಹೊಂಗಲ 03: ಇಡೀ ಜಗತ್ತಿನ ಮನುಕುಲಕ್ಕೆ ಆಸರೆಯಾಗಿರುವ ಭೂಮಿ ಉಳಿಯಬೇಕು. ಭೂಮಿ ಉಳಿಯಬೇಕೆಂದರೆ ಪ್ರತಿಯೊಬ್ಬರೂ ಗಿಡ ಮರಗಳನ್ನು ಬೆಳೆಸುವ ಸಂಕಲ್ಪ ತೊಡಬೇಕು. ಅವುಗಳನ್ನು ಕುಟುಂಬ ಸದಸ್ಯರಂತೆ ಪೋಷಿಸಿ ಪ್ರೀತಿಸಬೇಕು ಎಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೈಲಹೊಂಗಲ ತಾಲೂಕು ಕೃಷಿ ಮೇಲ್ವಿಚಾರಕ ನಾಗೇಶ ಬೆಣ್ಣಿ ಹೇಳಿದರು.
ಅವರು ತಾಲೂಕಿನ ದೊಡವಾಡ ಗ್ರಾಮದ ವೀರಭದ್ರೇಶ್ವರ ಗುರುಕುಲ ಪ್ರೌಢಶಾಲೆಯ ಆವರಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಪರಿಸರವನ್ನು ನಾವು ಪ್ರೀತಿಸಿದರೆ ಪರಿಸರ ನಮ್ಮನ್ನು ಪ್ರೀತಿಸುತ್ತದೆ. ಶಾಲಾ ಮಕ್ಕಳು ಈಗಿನಿಂದಲೇ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗ್ರಾಮದ ಸಾರ್ವಜನಿಕ ಖಾಲಿ ಜಾಗಗಳಲ್ಲಿ ಗಿಡಗಳನ್ನು ನೆಟ್ಟು ಸಂರಕ್ಷಿಸಬೇಕು ಎಂದರು.
ಮುಖ್ಯ ಶಿಕ್ಷಕಿ ಬಿ.ಆರ್.ಹುತಮಲ್ಲನವರ, ಶಿಕ್ಷಕರಾದ ಕೆ.ಬಿ.ಕಡೆಮನಿ, ಆರ್,ವೈ.ಜೇಡರ, ಪಿ.ಎನ್.ಗಸ್ತಿ, ಆರ್.ಎಸ್.ನದಾಫ, ಶಿಕ್ಷಕಿಯರಾದ ಎಲ್.ಬಿ.ಮುರಡಿಮಠ, ಯು.ಎಸ್.ಹೂಗಾರ, ಗ್ರಾಮಾಭಿವೃದ್ಧಿ ಸಂಘದ ವಲಯ ಮೇಲ್ವಿಚಾರಕಿ ವಿಜಯಲಕ್ಷ್ಮೀ ಆರ್.ಸಿ, ಗಂಗವ್ವ ಉಜನಿಮಠ, ರತ್ನಾ ಕರೀಕಟ್ಟಿ, ನೇತ್ರಾ ಉದ್ದಾನಶೆಟ್ಟಿ,ಸವಿತಾ ಮೆನಸಿನಕಾಯಿ, ಶಶಿಕಲಾ ಕಲಬಾವಿ ಹಾಗೂ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.