ಲೋಕದರ್ಶನ ವರದಿ
ಶಿರಹಟ್ಟಿ 19: ಸ್ಥಳೀಯ ಸಿಸಿ ನೂರಶೆಟ್ಟರ ವಿದ್ಯಾ ಪ್ರಸಾರ ಸಂಸ್ಥೆಯಲ್ಲಿ ಅದಮ್ಯ ಚೇತನ ವತಿಯಿಂದ ಗಿಡ ನೆಡುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಸಿಸಿ ನೂರಶೆಟ್ಟರ ವಿದ್ಯಾ ಪ್ರಸಾರ ಸಂಸ್ಥೆಯ ಅಧ್ಯಕ್ಷ ಚಂದ್ರಕಾಂತ .ಸಿ. ನೂರಶೆಟ್ಟರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಅತಿಥಿಗಳಾಗಿ ಆಗಮಿಸಿದ ವೀಣಾ ಅಠವಲೇ ಅವರು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪ್ರಾಸ್ತಾವಿಕ ನುಡಿಗಳನ್ನು ಮತ್ತು ಅದಮ್ಯ ಚೇತನ ಕಾರ್ಯಕ್ರಮ ಬೆಳೆದು ಬಂದ ರೀತಿ ಹಾಗೂ ಅದರ ಅಡಿಯಲ್ಲಿ ಹಮ್ಮಿಕೊಂಡಂತಹ ವಿವಿಧ ಕಾರ್ಯಗಳ ಕುರಿತು ತಿಳಿಸಿದರು ಹಾಗೂ ನಿತ್ಯಜೀವನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿ ಬಟ್ಟೆಯ ಚೀಲಗಳನ್ನು ಬಳಸುವದರ ಮೂಲಕ ಪರಿಸರವನ್ನು ಸಂರಕ್ಷಿಬೇಕು ಹಾಗೂ ಒಬ್ಬ ಮನುಷ್ಯನಿಗೆ 7 ಗಿಡಗಳ ಅವಶ್ಯಕತೆ ಇದೆ, ಈ ಕಾರ್ಯವನ್ನು ನೆರವೇರಿಸುವ ಮಹತ್ಕಾರ್ಯ ವಿದ್ಯಾಥರ್ಿದೆಸೆಯಿಂದಲೇ ಪ್ರಾರಂಭವಾಗಬೇಕೆಂದು ಸಲಹೆ ನೀಡಿದರು.
ನಂತರ ನಿವೃತ್ತ ಪ್ರಾಚಾರ್ಯ ಸೌದಿವ ಸಂತ ಇವರು ಅದ್ಯಮ ಚೇತನ ಕಾರ್ಯಕ್ರಮಗಳ ಕುರಿತು ತಿಳಿಸಿಕೊಟ್ಟರು ಹಾಗೂ ಜ್ಞಾನಪೀಠ ಪುರಸ್ಕೃತರಾದ ದ.ರಾ ಬೇಂದ್ರೆಯವರರಿಂದ ರಚಿತವಾದ ಕವನ ಸಂಕಲನದ ಕೆಲವು ಪದ್ಯಗಳನ್ನು ಮಕ್ಕಳೊಂದಿಗೆ ಹಂಚಿಕೊಂಡರು ಹಾಗೂ ಬೇಂದ್ರೆಯವರ ಸಾಹಿತ್ಯದ ಚಿತ್ರಣವನ್ನು ಮೂಡಿಸಿದರು.
ಕಾರ್ಯಕ್ರಮದಲ್ಲಿ ಸಿ.ಸಿ.ನೂರಶೆಟ್ಟರ ವಿದ್ಯಾಥರ್ಿಗಳಿಗೆ ಪರಿಸರ ಸಂರಕ್ಷಣೆಯನ್ನು ಹಾಗೂ ಕವಿಗಳ ಜೀವನದ ಒಳ್ಳೆಯ ಆದರ್ಶಗಳನ್ನು ಅಳವಡಿಸಿಕೊಳ್ಳಿ ಎಂದು ಸಲಹೆಯನ್ನು ನೀಡಿದರು.
ವಂದನಾರ್ಪಣೆ ಕಾರ್ಯಕ್ರಮವನ್ನು ಶಾಲೆಯ ಸಹಶಿಕ್ಷಕಿ ವ್ಹಿ.ಬಿ ಅಕ್ಕೂರ ನಿರೂಪಿಸಿದರು, ನಂತರ ಶಾಲೆಯ ಆವರಣದಲ್ಲಿ ಹಸಿರು ಅದಮ್ಯ ಚೇತನದ ಸಂಸ್ಥೆಯ ಸರ್ವಸದಸ್ಯರಿಂದ ಹಾಗೂ ಸಂಸ್ಥೆಯ ಅಧ್ಯಕ್ಷ, ಶಿಕ್ಷಣದ ಶೈಕ್ಷಣಿಕ ಸಲಹೆಗಾರ ವಿಜಯ ಕುಲಕಣರ್ಿ ಹಾಗೂ ಶಾಲೆಯ ಮೂಖ್ಯೋಪಾಧ್ಯಾಯರು ಹಾಗೂ 9 & 10 ನೇ ತರಗತಿಯ ವಿದ್ಯಾಥರ್ಿ ವಿದ್ಯಾಥರ್ಿನಿಯರು ಸಹಯೋಗದೊಂದಿಗೆ ಸಸಿ ನೆಡುವ ಕಾರ್ಯಕ್ರಮವನ್ನು ನೆರೆವೇರಿಸಿಕೊಡಲಾಯಿತು. ಲಕ್ಷ್ಮಣರಾವ ಓಕ್, ವೀಣಾ ಅಠವಲೇ, ರಾಧಿಕಾ ಓಕ್ , ಲಕ್ಷ್ಮೀ ಪರಬತ ವಿಜಯಲಕ್ಷ್ಮೀ ಸುನೀಜೀ ನರೇಂದ್ರ, ಲಲಿತಾ ನೂರಶೆಟ್ಟರ, ವಿಜಯ್ ಕುಲಕಣರ್ಿ, ಎಸ್.ಎಪ್,ಸಿ ಆಂಗ್ಲ ಮಾದ್ಯಮ ಶಾಲೆಯ ಮೂಖ್ಯೋಪಾಧ್ಯಾಯ ಸಂತೋಷಕುಮಾರ ಎಸ್.ಜಿ ಮುಂತಾದವರು ಉಪಸ್ಥಿತರಿದ್ದರು.