ಕೊಪ್ಪಳ: ಕೊಪ್ಪಳ ತಾಲೂಕಿನ ಹಂದ್ರಾಳ್ ಗ್ರಾಮದಲ್ಲಿ ಈರುಳ್ಳಿಯಲ್ಲಿ ಸಸ್ಯ ಸಂರಕ್ಷಣೆ ಹೊರಾಂಗಣ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.ಕೊಪ್ಪಳ ಕೃಷಿ ವಿಸ್ತರಣಾ ಕೇಂದ್ರದಿಂದ ತಾಲೂಕಿನ ಹಂದ್ರಾಳ್ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದು, ಈರುಳ್ಳಿಯಲ್ಲಿ ಸಸ್ಯ ಸಂರಕ್ಷಣೆ ಹೊರಾಂಗಣ ತರಬೇತಿ ಕುರಿತು ಡಾ. ಬದರಿಪ್ರಸಾದ್ ಪಿ.ಆರ್ ರವರು ಈರುಳ್ಳಿ ಬೆಳೆಗೆ ಬರುವ ಗಡ್ಡೆ ಕೊಳೆ ರೋಗ, ನುಶಿ ಭಾದೆ ಹಾಗೂ ಎಲೆ ತಿನ್ನುವ ಕೀಟದ ಕುರಿತು ರೋಗದ ಮತ್ತು ಕೀಟದ ಭಾದೆಯ ಲಕ್ಷಣ ಹಾಗೂ ನಿಯಂತ್ರಣ ಕುರಿತು ಸಮಗ್ರ ಮಾಹಿತಿ ನೀಡಿದರು.
ಈರುಳ್ಳಿ ಕೇಂದ್ರದ ತೋಟಗಾರಿಕೆ ತಜ್ಞ ಪ್ರದೀಪ ಬಿರಾದಾರ ಮಾತನಾಡಿ, ಪೀಡೆ ನಿಯಂತ್ರಣದಲ್ಲಿ ಪೋಷಕಾಂಶಗಳ ಪಾತ್ರದ ಮಾಹಿತಿ ಜೊತೆಗೆ ತರಕಾರಿ ಸ್ಪೆಷಲ್ ಬಳಕೆ ಹಾಗೂ ಸಿಂಪರಣಾ ವಿಧಾನದ ಬಗ್ಗೆ ನೂತನ ತಳಿಗಳ ಲಭ್ಯತೆ, ಬೇಸಾಯ ಕ್ರಮಗಳು ಹಾಗೂ ಸಂಗ್ರಹಣೆ ಕುರಿತು ರೈತರೊಂದಿಗೆ ಚಚರ್ೆ ನಡೆಸಿ ರೈತರಿಗೆ ಹೊಲದಲ್ಲಿಯೇ ವಿವಿಧ ಬಾದೆಯ ಲಕ್ಷಣಗಳನ್ನು ತೋರಿಸಿದರು. ಪ್ರಗತಿಪರ ರೈತರಾದ ಶಂಕ್ರಪ್ಪ ದೇವರಮನಿ, ಗ್ಯಾನಪ್ಪ, ಚಿನ್ನಪ್ಪ, ಪಕೀರಪ್ಪ, ಶಿವಪ್ಪ, ಈರಣ್ಣ ಹಾಗೂ ಅಶೋಕ ಸೇರಿದಂತೆ ಸುಮಾರು 50 ಅಧಿಕ ರೈತರು ಭಾಗವಹಿಸಿದ್ದರು.