ಬೆಟಗೇರಿ: ಪ್ರತಿಯೊಬ್ಬರೂ ಸಸಿ ನೆಟ್ಟು, ಪೋಷಣೆ, ಪಾಲನೆ ಮಾಡಿ

ಲೋಕದರ್ಶನ ವರದಿ

ಬೆಟಗೇರಿ 27: ಪ್ರತಿಯೊಬ್ಬರೂ ಒಂದೊಂದು ಸಸಿ ನೆಟ್ಟು, ಪೋಷಣೆ, ಪಾಲನೆ ಮಾಡಿ ಗಿಡಗಳಾಗಿ ಬೆಳಸಬೇಕು ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಚೈತನ್ಯ ಗ್ರುಪ್ಸ್ನ ಕನ್ನಡ ಮತ್ತು ಆಂಗ್ಲ ಮಾಧ್ಯಮ ವಸತಿ ಶಾಲೆಯ ಆಡಳಿತಾಧಿಕಾರಿ ಚಂದ್ರು ಹಾಲೊಳ್ಳಿ ಹೇಳಿದರು.

     ಗ್ರಾಮದ ಚೈತನ್ಯ ವಸತಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗುರುವಾರ ಜೂ.27 ರಂದು ಆಯೋಜಿಸಿದ ಸಸಿ ನೇಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. 

     ಸ್ಥಳೀಯ ಚೈತನ್ಯ ಗ್ರುಪ್ಸ್ನ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ದೇವಕಿ ಗೌಡ ಮಾತನಾಡಿ, ಮನುಷ್ಯನಿಗೆ ಪರಿಸರದಿಂದಾಗುವ ಪ್ರಯೋಜನಗಳ ಕುರಿತು ಹೇಳಿದ ಬಳಿಕ ಶಾಲಾ ಆವರಣದಲ್ಲಿ ಸಸಿ ನೆಟ್ಟು, ನೀರು ಹಾಕಲಾಯಿತು. 

      ಇಲ್ಲಿಯ ಚೈತನ್ಯ ಗ್ರುಪ್ಸ್ನ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಸಂಜು ಮೆಳವಂಕಿ, ಶಿವಾನಂದ ಪಟ್ಟಿಹಾಳ, ಹೇಮಾ ಕಲಾದಗಿ, ಗೀತಾ ನಾಯ್ಕ, ಸುಮಿತ್ರಾ ಮಾದರ, ಎನ್.ಎ.ಮಿಜರ್ಾನಾಯ್ಕ, ಪೂಜಾ ಪರಿಟ, ನಬಿಸಾಬ ನದಾಫ್, ಗಜಾನನ ಮುರಗೋಡ, ಮಹಾದೇವ ಖಿಲಾರಿ, ಚೆನ್ನಪ್ಪ ಗೌಡರ, ಶಿವು ಕಾಜಗಾರ, ಶ್ರೀಶೈಲ ದಂಡಿನ, ಉಭಯ ಮಾಧ್ಯಮ ಶಾಲೆಗಳ ಶಿಕ್ಷಕರು, ಸಿಬ್ಬಂದಿ, ವಿದ್ಯಾಥರ್ಿಗಳು ಇದ್ದರು.