ಲೋಕದರ್ಶನ ವರದಿ
ಕೊಪ್ಪಳ 06: ಯೋಜನೆಗಳು ಅರ್ಹರಿಗೆ ದೊರೆಯುವಂತಾಗಬೇಕು ಎಂದು ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ಅವರು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಹಮ್ಮಿಕೊಂಡಿದ್ದ 8ನೇ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆಯ ಕಾರ್ಯಕ್ರಮದಲ್ಲಿ ಸೈಕಲ್ ವಿತರಣೆ ಮಾಡಿ ಮಾತನಾಡುತ್ತ,ಸಕರ್ಾರವು ಶೈಕ್ಷಣಿಕ ಪ್ರಗತಿಗಾಗಿ ಅನೇಕ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ.ಅಂತಹ ಯೋಜನೆಗಳ ಬಗ್ಗೆ ಸರಿಯಾದ ರೀತಿಯ ಜಾಗೃತಿ ಮೂಡಿಸುವ ಕಾರ್ಯ ಮಾಡುವುದರ ಜೊತೆಯಲ್ಲಿ ಅರ್ಹರಿಗೆ ಯೋಜನೆಯ ಲಾಭ ಸಿಗುವಂತಾಗಬೇಕಿದೆ.ಶೈಕ್ಷಣಿಕ ಪ್ರಗತಿಗಾಗಿ ಸರಕಾರವು ಜಾರಿಗೆ ಮಾಡಿರುವ ಕಾರ್ಯಕ್ರಮಗಳನ್ನು ಶಿಕ್ಷಕರು ತಮ್ಮ ತರಗತಿ ಕೊಠಡಿಯಲ್ಲಿ ಸಮರ್ಪಕವಾದ ರೀತಿಯಲ್ಲಿ ಅನುಷ್ಟಾನ ಮಾಡಬೇಕು. 10ನೇ ತರಗತಿಯ ಫಲಿತಾಂಶದ ಸುಧಾರಣೆಗಾಗಿ ಇಲಾಖೆಯು ಅನೇಕ ರೀತಿಯ ತರಬೇತಿಯ ಕಾರ್ಯಗಾರವನ್ನು ಶಿಕ್ಷಕರಿಗೆ ಆಯೋಜನೆಯನ್ನು ಮಾಡುವುದರ ಮೂಲಕ ರಾಜ್ಯದಲ್ಲಿ ಪ್ರಥಮ ಸ್ಥಾನ ನಮ್ಮ ಜಿಲ್ಲೆಯುವ ಪಡೆಯುವ ಹಾಗೇ ಪ್ರತಿಯೊಬ್ಬ ಶಿಕ್ಷಕರು ಹೆಚ್ಚಿನ ಶ್ರಮವಹಿಸಿ ಕಾರ್ಯನಿರ್ವಹಿಸಬೇಕಿದೆ.ಅದರ ಜೊತೆಯಲ್ಲಿ ವಿದ್ಯಾಥರ್ಿಗಳ ಪಾಲಕರು ಕೂಡಾ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಪರೀಕ್ಷೆ ಮಾಡುವುರ ಜೊತೆಯಲ್ಲಿ ಅವನ ಕಲಿಕೆಗೆ ಪ್ರೋತ್ಸಾಹ ನೀಡಿದಾಗ ಮಾತ್ರ ಅವನು ಶೈಕ್ಷಣಿಕವಾಗಿ ಮುಂದೆಬರಲು ಸಾಧ್ಯವಾಗುತ್ತದೆ.ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಕರಲ್ಲಿ ಕಡ್ಡಾಯ ವರ್ಗಾವಣೆ ಸೇರಿದಂತೆ ಅನೇಕ ರೀತಿಯ ಸಮಸ್ಯೆಗಳು ಇವೆ.ಅಂತಹ ಸಮಸ್ಯೆಗಳು ನನ್ನ ಗಮನಕ್ಕೆ ಬಂದಿದ್ದು,ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ತಾಲೂಕ ಪಂಚಾಯತಿಯ ಅಧ್ಯಕ್ಷರಾದ ಬಾಲಚಂದ್ರನ್ ಮಾತನಾಡಿ, ಶೈಕ್ಷಣಿಕ ಕ್ಷೇತ್ರವು ಪ್ರಗತಿಯತ್ತ ಸಾಗಬೇಕಾದರೇ ಶಿಕ್ಷಕರಿಗೆ ನೀಡಲಾಗಿರುವ ಅನ್ಯ ಕಾರ್ಯಗಳಿಂದ ಮುಕ್ತಿ ನೀಡಬೇಕಿದೆ.ಪಾಠ ಬೋಧನೆಕ್ಕಿಂತ ಹೆಚ್ಚಾಗಿ ಶಿಕ್ಷಕರನ್ನು ಬೇರೆ ಕಾರ್ಯದಲ್ಲಿ ತೊಡಗಿಸುತ್ತಿರುವುದರಿಂದ ಶಿಕ್ಷಕರು ಹೆಚ್ಚು ಬೋಧನೆಯ ಕಾರ್ಯದಲ್ಲಿ ತೊಡಗಲು ಸಾಧ್ಯವಾಗುತ್ತಿಲ್ಲ.ಆದ್ದರಿಂದ ಅನ್ಯ ಕಾರ್ಯಗಳಿಗೆ ಶಿಕ್ಷಕರನ್ನು ಬಳಿಸಿಕೊಳ್ಳದೇ ಶೈಕ್ಷಣಿಕ ಚಟುವಟಿಕೆಯಲ್ಲಿ ಹೆಚ್ಚು ತೊಡಗುಂತೆ ಮಾಡಬೇಕು ಅಂಗಾದ ಮಾತ್ರ ಶೈಕ್ಷಣಿಕ ಕ್ಷೇತ್ರದಲ್ಲಿ ಬದಲಾವಣೆಯನ್ನು ಕಾಣಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ನಮ್ಮ ಶಾಲೆಯ ಕಟ್ಟಡವು ಬಹಳ ದುರಸ್ಥಿಯಲ್ಲಿ ಇದ್ದ ಕಾರಣ ಕಳೆದ ವರ್ಷ 100 ವಿದ್ಯಾರ್ಥಿಗಳು ಬೇರೆ ಶಾಲೆಗೆ ದಾಖಲಾಗಿರುವುದರಿಂದ ಶಾಲಾ ದಾಖಲಾತಿಯು ಕಡಿಮೆಯಾಗಿದೆ.ಆದ್ದರಿಂದ ತಮ್ಮ ಅನುಧಾನದಲ್ಲಿ ನಮ್ಮ ಶಾಲೆಯ ಕಟ್ಟಡದ ದುರಸ್ಥಿ ಮಾಡಿಸಿಕೊಡುವಂತೆ ಮನವಿ ಮಾಡಿದರು. ಈ ಸಮಯದಲ್ಲಿ ಶಿಕ್ಷಕರಾದ ಗುರುರಾಜ ಕಟ್ಟಿ, ಆಬೀದ್ಹುಸೇನ ಅತ್ತಾರ,ಶ್ರೀನಿವಾಸರಾವ ಕುಲಕರ್ಣಿ , ಅಂಬಕ್ಕ ಜಂತ್ಲಿ, ಸುನಂಧಾಬಾಯಿ, ಶಂಕ್ರಮ್ಮ ಬಂಗಾರಶೆಟ್ಟರ, ವಿಜಯಾಹಿರೇಮಠ, ಮೋಹಿನ ಪಾಷಾಬೀ, ವಿಜಯಲಕ್ಷ್ಮೀ, ರತ್ನಾ, ಗಂಗಮ್ಮ ತೋಟದ, ಗೌಸೀಯಾಬೇಗಂ, ದಿವ್ಯ ಬಿ.ಎಂ ಮುಂತಾದವರು ಹಾಜರಿದ್ದರು.