ಲೋಕದರ್ಶನ ವರದಿ
ಮಹಾಲಿಂಗಪುರ: ಸರಕಾರದ ಯೋಜನೆಗಳು ನಿಮ್ಮ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿವೆ.ಹಾಗೇ ನೀವು ಕೂಡಾ ವಿದ್ಯಾಭ್ಯಾಸದ ಬಗ್ಗೆ ಯೊಜನೆಗಳನ್ನು ಹಾಕಿಕೊಂಡು ಅಭಿವೃದ್ಧಿಹೊಂದಿರಿ ಎಂದು ಶಾಸಕ ಸಿದ್ದು ಸವದಿ ಕರೆನೀಡಿದರು.
ಸಮೀಪದ ಢವಳೇಶ್ವರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ 8 ನೇ ತರಗತಿಯ ವಿದ್ಯಾಥರ್ಿಗಳಿಗೆ ಉಚಿತ ಸೈಕಲ್ ವಿತರಿಸಿ ಮಾತನಾಡುತ್ತಿದ್ದ ಅವರು ಮನಿಮ್ಮ ಕೆಲಸದ ಶಿಸ್ತು ಹಾಗೂ ಶೃದ್ಧೆ ಗುರುವಿನ ಮಾರ್ಗದರ್ಶನವಿದ್ದರೆ ನಿಮ್ಮ ಗುರಿಯನ್ನು ಸುಲಭವಾಗಿ ತಲುಪಬಹುದು. ಪ್ರತಿಯೊಬ್ಬರು ಒಂದೊಂದು ಗಿಡ ನೆಟ್ಟು ಪರಿಸರ ರಕ್ಷಿಸಿರಿ ಹಾಗೂ ಸ್ವಚ್ಛತೆಗಾಗಿ ಶೌಚಾಲಯ ಬಳಸಿರೆಂದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಇದ್ದಂತಹ ವಿದ್ಯಾಥರ್ಿಗಳ ಬಗ್ಗೆ ಕಾಳಜಿಯೇ ಈ ಉಚಿತ ಸೈಕಲ್ ವಿತರಣಾ ಯೋಜನೆಯೆಂದರು. ಜಿ.ಪಂ.ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಎಸ್ಡಿಎಮ್ಸಿ ಅಧ್ಯಕ್ಷ ಪರಪ್ಪ ಪಟ್ಟಣಶೆಟ್ಟಿ, ಶ್ರೀಶೈಲ ಪಟ್ಟಣಶೆಟ್ಟಿ, ಬನಪ್ಪಗೌಡ ಪಾಟೀಲ, ಎಸ್.ಎಮ್.ಪಾಟೀಲ, ಅಶೋಕ ಹವಾಲ್ದಾರ, ಚಂದ್ರು ಕೌಜಲಗಿ, ಕಲ್ಲಪ್ಪ ಸಂಗನ್ನವರ, ಮಾರುತಿ ಹವಾಲ್ದಾರ, ಸಂಗಮೇಶ ಪಟ್ಟೇದ, ಶಾಂತವ್ವಾ ಕಡಬಲ್ಲವರ, ಗೋಪಾಲ ಮಾಂಗ, ಭೀಮಶಿ ಮೇತ್ರಿ, ಗೂಳಪ್ಪ ಹನಗಮಡಿ, ಸಿದ್ದಪ್ಪ ಪಟ್ಟಣಶೆಟ್ಟಿ, ನಾಗವ್ವ ಲಕ್ಕನಗೋಳ, ದಯಾನಂದ ಪಟ್ಟೇದ, ಮುಖೋಪಾಧ್ಯಾಯ ಎಚ್.ಎಸ್.ಭಜಂತ್ರಿ ಮುಂತಾದವರು ಉಪಸ್ಥಿತರಿದ್ದರು.