ಅಹಮದಾಬಾದ್ (ಗುಜರಾತ್), ಜ ೧೭,ಅಹಮದಾಬಾದ್-ಮುಂಬೈ ತೇಜಸ್ ಎಕ್ಸ್‌ಪ್ರೆಸ್ ರೈಲಿಗೆ ಕೇಂದ್ರ ರೈಲ್ವೆ ರಾಜ್ಯ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಬೆಳಿಗ್ಗೆ ಹಸಿರು ನಿಶಾನೆ ತೋರಿಸಿದರು.ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ತೇಜಸ್ ರೈಲಿನಲ್ಲಿ ೭೩೬ ಮಂದಿ ಪ್ರಯಾಣಿಸಬಹುದು. ಅಹಮದಾಬಾದ್-ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ವಾರದಲ್ಲಿ ಆರು ದಿನ ಸಂಚರಿಸುವ ಈ ರೈಲನ್ನು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರೊಂದಿಗೆ ಉದ್ಘಾಟಿಸಿದರು. ಈ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಐ ಆರ್ ಸಿ ಟಿಸಿ ಉಚಿತವಾಗಿ ೨೫ ಲಕ್ಷ ರೂಪಾಯಿ ವಿಮಾ ಸೌಲಭ್ಯ ಕಲ್ಪಿಸಲಿದೆ. ರೈಲು ಒಂದು ಗಂಟೆ ವಿಳಂಬವಾದರೆ ೧೦೦ ರೂಪಾಯಿ, ಎರಡು ಗಂಟೆಗೂ ಹೆಚ್ಚು ಕಾಲ ವಿಳಂಬ ವಾದರೆ ಪ್ರಯಾಣಿಕರಿಗೆ ೨೫೦ ರೂ ನಷ್ಟ ಪರಿಹಾರವನ್ನು ನೀಡಲಿದೆ. ಪ್ರತಿಯೊಬ್ಬ ಪ್ರಯಾಣಿಕರಿಗೆ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಬಾಟಲ್ ಪೂರೈಸುವ ಜತೆಗೆ, ಪ್ರತಿ ಬೋಗಿಯಲ್ಲಿ ಆರ್ವೊ ವಾಟರ್ ಫಿಲ್ಟರ್ ಅಳವಡಿಸಲಾಗಿದೆ.