ಮಂಗಳೂರು : ನಿನ್ನೆ ಮಂಗಳವಾರ ಮಧ್ಯ ರಾತ್ರಿ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಹಾರಬೇಕಿದ್ದ ಸ್ಪೈಸ್ ಜೆಟ್ ವಿಮಾನದ ಪೈಲಟ್ಗೆ ಆರೋಗ್ಯ ಸಮಸ್ಯೆ ಉಂಟಾದ ಕಾರಣ ಈ ವಿಮಾನದ ವೇಳಾ ಪಟ್ಟಿಯನ್ನು ಪರಿಷ್ಕರಿಸಲಾಗಿದ್ದು ಈಗಿನ್ನು ಅದು ಇಂದು ಬುಧವಾರ ಸಂಜೆ 5 ಗಂಟೆಗೆ ದುಬೈಗೆ ಹಾರಲಿದೆ ಎಂದು ಮೂಲಗಳು ತಿಳಿಸಿವೆ.
ಅನನುಕೂಲತೆಗೆ ಗುರಿಯಾದ 188 ಮಂದಿ ಪ್ರಯಾಣಿಕರಿಗೆ ಸಮೀಪದ ಹೊಟೇಲುಗಳಲ್ಲಿ ವಾಸ್ತವ್ಯ ಕಲ್ಪಿಸಲಾಯಿತೆಂದು ಮೂಲಗಳು ತಿಳಿಸಿವೆ.
ವಿಮಾನ ಹಾರಾಟದಲ್ಲಿನ ವಿಳಂಬವನ್ನು ಮಾಧ್ಯಮಕ್ಕೆ ದೃಢೀಕರಿಸಿರುವ ವಿಮಾನ ನಿಲ್ದಾಣದ ನಿದರ್ೆಶಕ ವಿವಿ ರಾವ್ ಅವರು, ಅಸ್ವಸ್ಥ ಪೈಲಟ್ನ ವೈದ್ಯಕೀಯ ಪರೀಕ್ಷೆಗಳು ಪಾಸಾದ ಬಳಿಕ ಇಂದು ಬುಧವಾರ ಸಂಜೆ 5 ಗಂಟೆಗೆ ವಿಮಾನವು ದುಬೈಗೆ ಹಾರಲಿದೆ ಎಂದು
ತಿಳಿಸಿದ್ದಾರೆ.