ನಾಳೆಯಿಂದ ಚಾರ್ ಧಾಮ್ ಯಾತ್ರೆಗೆ ಅನುಮತಿ: ಅನ್ಯ ರಾಜ್ಯವರಿಗಿಲ್ಲ ಅವಕಾಶ

ಡೆಹರಾಡೂನ್, ಜೂ 30 ; ದೇಶದ ಧಾರ್ಮಿಕ ಸಮುದಾಯ ಕಾತರದಿಂದ ಕಾಯುತ್ತಿರುವ ಚಾರ್ ‌ಧಾಮ್ ಯಾತ್ರೆಗೆ ಉತ್ತರ ಖಂಡ ಸರ್ಕಾರ ಅನುಮತಿ ನೀಡಿದೆ. ಉತ್ತರ ಖಂಡ ಜನತೆ ಮಾತ್ರ  ಈ ಪವಿತ್ರ ಯಾತ್ರೆಯಲ್ಲಿ ಭಾಗಿಯಾಗಬಹುದಾಗಿದ್ದು, ಅನ್ಯ ರಾಜ್ಯದವರಿಗೆ ಅವಕಾಶ ಕಲ್ಪಿಸಿಲ್ಲ.ನಾಳೆಯಿಂದ ರಾಜ್ಯದ ಜನತೆಗೆ ಬದರಿನಾಥ್, ಕೇದಾರ್ ನಾಥ್, ಯಮುನೋತ್ರಿ ಮತ್ತು ಗಂಗೋತ್ರಿ ಧಾರ್ಮಿಕ ಯಾತ್ರೆ ಕೈಗೊಳ್ಳಬಹುದಾಗಿದೆ. ಕೊರೋನಾ ಸೋಂಕು ನಿಯಂತ್ರಣ ಉದ್ದೇಶದಿಂದ ಉತ್ತರಖಂಡ ಸರ್ಕಾರ ಹೊಸದಾಗಿ ಮಾರ್ಗ ಸೂಚಿ ಬಿಡುಗಡೆ ಮಾಡಿದ್ದು, ಉತ್ತರ ಖಂಡ ರಾಜ್ಯದ ಜನತೆ ಪ್ರವಾಸ ಕೈಗೊಳ್ಳಬಹುದಾಗಿದೆ. ಧಾರ್ಮಿಕ ಯಾತ್ರೆಗಾಗಿ  ಇ ಪಾಸ್ ವಿತರಣೆ ಮಾಡಲಾಗುತ್ತಿದೆ. ದರ್ಶನಕ್ಕೆ ಮಾತ್ರ ಅವಕಾಶ ನೀಡುತ್ತಿದ್ದು, ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ ಎಂದು ಹೇಳಿದೆ.