ಲೋಕದರ್ಶನ ವರದಿ
ಯರಗಟ್ಟಿ 19: ಮಾನ್ಯ ಅಬಕಾರಿ ಉಪ ಅಧಿಕ್ಷರು ರಾಮದುರ್ಗ ನೇತ್ರತ್ವದಲ್ಲಿ ಸವದತ್ತಿ ವಲಯ ಅಬಕಾರಿ ನಿರೀಕ್ಷಕರು, ಉಪ ನಿರೀಕ್ಷಕರು ಖಚಿತ ಮಾಹಿತಿ ಪಡೆದು ಕಳ್ಳಬಟ್ಟಿ ಸರಾಯಿ ಮಾರುತ್ತಿದ್ದ ಸವದತ್ತಿ ತಾಲೂಕಿನ ಬಡ್ಲಿ ತಾಂಡಾದ ಪಾರ್ವತಿ ರಮೇಶ ಲಮಾಣಿ ಆರೋಪಿಯನ್ನು ಅ.18 ರಂದು ದಾಳಿ ಮಾಡಿದಾಗ ಸುಮಾರು ನಾಲ್ಕು ಲೀಟರ್ ಕಳ್ಳಬಟ್ಟಿ ಸರಾಯಿ ಸಿಕ್ಕದೆ ಹಾಗೂ ಅ.19 ರಂದು ಮತ್ತೆ ದಾಳಿ ಮಾಡಿದಾಗ ಅದೇ ಗ್ರಾಮದ ರಾಮಪ್ಪ ದುರಗಪ್ಪ ಪೂಜಾರಿ ಎಂಬಾತನಲ್ಲಿ ಎರಡು ಲೀಟರ್ ಕಳ್ಳಬಟ್ಟಿ ಸರಾಯಿ ಮಾರಾಟ ಮಾಡಲು ಸಂಗ್ರಹಿಸಿಟ್ಟಾಗ ಸಿಕ್ಕಿದ್ದು ಪ್ರಕರಣವನ್ನು ದಾಖಲಿಸಿಕೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ನಿರೀಕ್ಷಕ ರವಿ.ಎಮ್.ಮರಿಗೌಡರ, ಉಪ ನಿರೀಕ್ಷಕ ಆರ್.ಜಿ.ಆರೆನ್ನವರ, ಸಿಬ್ಬಂದಿಗಳಾದ ಸಂತೋಷ ಸಂಜೀವಪ್ಪನವರ, ಬಿ.ಬಿ.ಸುಣಗಾರ, ಎಸ್.ಜಿ.ತಳವಾರ, ಕಿರಣ ತೆರದಾಳ, ಅಬಕಾರಿ ರಕ್ಷಕಿಯರಾದ ಎಸ್.ಡಿ.ಕಮಲಾಪೂರ, ಪ್ರಿಯಂಕಾ ಗಲಬಿ ಪ್ರಕರಣ ಬೇದಿಸಿದ್ದಾರೆ.