ಕ್ರೀಡೆಯಿಂದ ದೈಹಿಕವಾಗಿ, ಮಾನಸಿಕವಾಗಿ ಸದೃಢ

ಕ್ರೀಡೆಯಿಂದ ದೈಹಿಕವಾಗಿ, ಮಾನಸಿಕವಾಗಿ ಸದೃಢ



ಲೋಕದರ್ಶನ ವರದಿ

ಮುಧೋಳ 03: ಕ್ರೀಡೆ ದೈಹಿಕವಾಗಿ ಮತ್ತು ಮಾನಸಿಕವಾಗಿ ವ್ಯಕ್ತಿಯನ್ನು ಸಧೃಡಗೊಳಿಸುತ್ತದೆ ಮಾತ್ರವಲ್ಲ, ಕ್ರೀಡಾಸಕ್ತಿಯನ್ನು ಬೆಳೆಸಿಕೊಂಡರೆ ದುಶ್ಚಟಗಳಿಂದ ದೂರವಿರಬಹುದು ಎಂದು ಟೈಗರ್ ಬಾಯ್ಸ್ ಕ್ರಿಕೆಟ್ ಕ್ಲಬ್ನ ಅಧ್ಯಕ್ಷ ಪ್ರಹ್ಲಾದ ಕುಮಕಾಲೆ ತಿಳಿಸಿದರು. 

   ಟೈಗರ್ ಬಾಯ್ಸ್ ಕ್ರಿಕೆಟ್ ಕ್ಲಬ್ ಹಾಗೂ ಅಕ್ವಾಲಿಂಕ್ ಶುದ್ಧಕುಡಿಯುವ ನೀರಿನ ಘಟಕದ ಸಹಯೋಗದಲ್ಲಿ ನಗರದ ರನ್ನ ಕ್ರೀಡಾಂಗಣದಲ್ಲಿ ಬುಧವಾರ ಪ್ರಾರಂಭವಾದ ತಾಲ್ಲೂಕು ಮಟ್ಟದ ಕ್ರಿಕೆಟ್ ಪಂದ್ಯಾವಳಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ತಾಲ್ಲೂಕಿನ ವಿವಿಧ ಗ್ರಾಮಗಳಿಂದ 20 ತಂಡಗಳು ಆಗಮಿಸಿದ್ದು, 10 ಓವರ್ಗಳ ಪಂದ್ಯಗಳನ್ನು ಆಡಿಸಲಾಗುತ್ತಿದು, ಪ್ರತಿ ಆಟಗಳಲ್ಲಿ ಉತ್ತಮ ಕ್ರೀಡಾಪಟುಗಳನ್ನು ಗುರುತಿಸಲಾಗುವದು ಮತ್ತು ಉತ್ತಮ ಬ್ಯಾಟ್ಸಮನ್,ಉತ್ತಮ ಬೌಲರ್, ಉತ್ತಮ ಕೀಪರ್, ಉತ್ತಮ ಫೀಲ್ಡಿಂಗ್ ಗೆ ಗುರುತಿಸಿ ಬಹುಮಾನನೀಡ ಲಾಗುವದು. ಜೊತೆಗೆ ಇಡೀ ಪಂದ್ಯಾವಳಿಗಳಲ್ಲಿ ಕೂಡಾ ಅತ್ಯುತ್ತಮ ಆಟಗಾರರನ್ನು ಗುರುತಿಸಿ ಬಹುಮಾನ ನೀಡಲಾಗುವದು ಎಂದು ಸಂಘಟಕ ಪ್ರಹ್ಲಾದ ಕುಮಕಾಳೆ ತಿಳಿಸಿದರು. 

   ವಕೀಲರ ಸಂಘದ ಅಧ್ಯಕ್ಷ ಸುರೇಶ ಮಾಸರಡ್ಡಿ ಮಾತನಾಡಿ ಕ್ರೀಡಾ ಮನೋಭಾವನೆಯನ್ನು ಯುವಕರಲ್ಲಿ ಜಾಗೃತಗೊಳಿಸುವದು ಅಗತ್ಯ ವಾಗಿದೆ. ಅದು ಶಾಲಾ ಕಾಲೇಜುಗಳ ಮಟ್ಟದಲ್ಲಿ ಅಲ್ಲಿನ ದೈಹಿಕ ಶಿಕ್ಷಕರಿಂದಮಾತ್ರ ಸಾಧ್ಯವಾಗಿದ್ದ, ಮಕ್ಕಳಿಗೆ ಬರೀ ಡಾಕ್ಟರ್, ಇಂಜಿನಿಯರಿಂಗ್  ಮಾಡಿ ಎಂದು ಪ್ರಚೋದಿಸುವ ಬದಲು ಅವರ ಆಸಕ್ತಿಗನುಸಾರವಾಗಿ ಅವರಿಗೆ ತರಬೇತಿ ನೀಡಬೇಕು. ಅದು ವಿದ್ಯಾಥರ್ಿ ಮಟ್ಟದಲ್ಲಿ ಮಾತ್ರಸಾಧ್ಯ ವೆಂದು ತಿಳಿಸಿದರು. 

     ಪ್ರಾಯೋಜಕ ಹಾಗೂ ಅಕ್ವಾಲಿಂಕ್ ಶುದ್ಧ ನೀರಿನ ಘಟಕದ ಉದ್ಯಮಿ ಶಿವಾನಂದ ಡಂಗಿ ಮಾತನಾಡಿದರು. 

    ಬುಧವಾರ ನಡೆದ ಆಟಗಳಲ್ಲಿ ಮುಧೋಳದ ಸ್ಟಾರ್ ಕ್ರಿಕೇಟ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ತೆಗೆದುಕೊಂಡರೆ, ಮೂನ್ ಸ್ಟಾರ್ ಕ್ರಿಕೇಟ್ ಕ್ಲಬ್ ಮುಧೋಳ ಅವರು ಬೌಲಿಂಗ್ ಆಯ್ದಕೊಂಡು ಆಟವಾಡಿದರು. ಸ್ಟಾರ್ಸ ತಂಡ 23 ರನ್ಗಳಿಂದ ಜಯಗಳಿಸಿತು. ಮೂನ್ ಸ್ಟಾರ್ ಹಾಗೂ ಬಿಯರ್ಸ ತಂಡಗಳ ಮಧ್ಯೆ ನಡೆದ ಆಟದಲ್ಲಿ ಮೂನ್ ಸ್ಟಾರ್ ತಂಡ 7 ರನ್ಗಳ ಅಂತರದಿಂದ ಜಯಗಳಿಸಿದೆ.  

    ಈ ಸಂದರ್ಭದಲ್ಲಿ ಕಲ್ಲೊಳ್ಳೆಪ್ಪ ಬಂಡಿವಡ್ಡರ, ಕಲ್ಮೇಶ ಗೋಸಾರ, ಶಿವು ನ್ಯಾಮಗೌಡ, ಪ್ರಶಾಂತ ಕಾಳೆ, ಅಪ್ಪಾಸಾಹೇಬ ಪವಾರ, ಪ್ರವೀಣ ನಿಗಡೆ,ಸತೀಶ ಕಾಳೆ, ಹಣಮಂತ ಜಮಖಂಡಿ, ಸಿದ್ದಾರ್ಥ ಘಾರಗೆ, ತೌಶಿಪ್ ಬಿಸ್ತಿ ಉಪಸ್ಥಿತರಿದ್ದರು.