ಹಾವೇರಿ: ಮಕ್ಕಳ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಆಹಾರ ಕ್ರಮ ಪ್ರಮುಖವಾಗಿದ್ದು, ತಾಯಿಯೇ ಮೊದಲ ಗುರುವಾಗಿ ಆಹಾರ ಪದ್ಧತಿಯ ಕ್ರಮ ತಿಳಿಸುವುದು ಅವಶ್ಯಕವಾಗಿದೆಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರಾದ ಎಸ್.ಎಚ್. ರೇಣುಕಾದೇವಿ ಹೇಳಿದರು.
ನಗರದ ತಾಲೂಕಾ ಪಂಚಾಯತ ಸಭಾಭವನದಲ್ಲಿ ಶುಕ್ರವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನ್ಯಾಯವಾದಿಗಳ ಸಂಘ, ಅಭಿಯೋಜನಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ರಾಷ್ಟ್ರೀಯ ಪೌಷ್ಠಿಕ ಸಪ್ತಾಹ ಕುರಿತ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿಗೆ ಫಿಜಾ ಬರ್ಗರ್ ಗಳಂತ ಖಾದ್ಯ ತಿನಿಸುಗಳತ್ತ ಮಕ್ಕಳು ಹೆಚ್ಚು ಚಿತ್ತ ಹರಿಸಿದ್ದಾರೆ. ಇದರಿಂದ ಅತೀ ಚಿಕ್ಕ ವಯಸ್ಸಿನಲ್ಲೇ ಶುಗರ್ ಕ್ಯಾನ್ಸರ್ ಹೃದಯಸಂಬಂಧಿ ಸೇರಿದಂತೆ ವಿವಿಧ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಆರೋಗ್ಯಕರ ಕುಟುಂಬ ಸಮಾಜ ನಿಮರ್ಾಣಕ್ಕೆ ಪೌಷ್ಠಿಕಾಂಶವುಳ್ಳ ಆಹಾರ ಜೀವನಕ್ರಮಕ್ಕೆ ಪ್ರತಿಯೊಬ್ಬ ತಾಯಂದಿರು ಮುಂದಾಗಬೇಕು. ವಿಟಮಿನ್ಗಳು ಇರುವಂತಹ ಆಹಾರ ಪದಾರ್ಥಗಳನ್ನು ತಿಂದರೆ ನಮ್ಮ ದೇಹದಲ್ಲಿ ಯಾವ ರೋಗವು ಕಾಣಿಸಿಕೊಳ್ಳುವುದಿಲ್ಲ. ಮೊಳಕೆಕಾಳು, ಹಣ್ಣು-ತರಕಾರಿ, ಸೊಪ್ಪು, ಸಿಹಿ ಪದಾರ್ಥ, ನಾರಿನಾಂಶದ ತರಕಾರಿಗಳನ್ನು ತಿನ್ನುವುದರಿಂದ ಕೆಲವು ಕಾಯಿಲೆಗಳಿಂದ ದೂರವಿರಬಹುದು ಎಂದು ಹೇಳಿದರು.
ಮಕ್ಕಳನ್ನು ಮೊಬೈಲ್ನಿಂದ ದೂರವಿಡಿ. ಮೊಬೈಲ್ನಿಂದ ಮಕ್ಕಳ ಕಣ್ಣುಗಳ ಮೇಲೆ ದುಷ್ಪರಿಣಾಮಗಳು ಬೀರುತ್ತವೆ.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಜಿಲ್ಲಾ ನ್ಯಾಯವಾದಿಗಳ ಸಂಘದ ಕಾರ್ಯದಶರ್ಿ ಪಿ.ಎಂ. ಬೆನ್ನೂರು ಮಾತನಾಡಿದರು. ಜಿಲ್ಲಾ ಆಹಾರ ತಜ್ಞರಾದ ಡಾ.ಪಿ.ಆರ್.ಹಾವನೂರ ಅವರು ರಾಷ್ಟ್ರೀಯ ಪೌಷ್ಟಿಕ ಸಪ್ತಾಹ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪೆನೆಲ್ ವಕೀಲರಾ ರಾಜೇಶ್ವರಿ ಚಕ್ಕಲೇರ ಅವರು ಮಹಿಳೆಯರಿಗಾಗಿ ಕಾನೂನುಗಳು ವಿಷಯದ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದರ್ೇಶಕರು ರಾಮಕೃಷ್ಣ ಪಡಗಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿಗಳಾ ಕೆ.ಶ್ರೀವಿದ್ಯಾ, ತಾಲೂಕಾ ಪಂಚಾಯತ್ ಕಾರ್ಯನಿವರ್ಾಹಕ ಅಧಿಕಾರಿ ಅನ್ನಪೂರ್ಣ ಮುದಕಮ್ಮನವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜೇಂದ್ರ ದೊಡ್ಡಮನಿ, ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ನಾಗರಾಜ ನಾಯಕ ಹಾಗೂ ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.