ಪೊಲೀಸ್ ಕರ್ತವ್ಯದಲ್ಲಿ ದೈಹಿಕ ಹಾಗೂ ಮಾನಸಿಕ ದೃಢತೆ ಅವಶ್ಯ: ಶಾಸಕರಾದ ನೆಹರು ಓಲೇಕಾರ

ಹಾವೇರಿ: ಕ್ರೀಡೆಗಳಲ್ಲಿ ಸೋಲು ಗೆಲುವು ಸಾಮಾನ್ಯ. ಯಾರೇ ಸೋತರೂ, ಗೆದ್ದರೂ ಕೂಡಾ ಒಮ್ಮನಿಸ್ಸಿಂದ ಸ್ವೀಕರಿಸಬೇಕು. ಪೊಲೀಸ್ ಕರ್ತವ್ಯದಲ್ಲಿ ದೈಹಿಕ ಹಾಗೂ ಮಾನಸಿಕ ದೃಢತೆ ಅವಶ್ಯ ಎಂದು ಶಾಸಕರಾದ ನೆಹರು ಓಲೇಕಾರ ಅವರು ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಮುಕ್ತಾಯ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಿ ಅವರು ಮಾತನಾಡಿದರು. ಕ್ರೀಡಾಕೂಟಗಳು ಕೇವಲ ಕ್ರೀಡೆಗೆ ಮಾತ್ರ ಸೀಮಿತವಾಗಿರಬೇಕು. ಕ್ರೀಡೆಗಳಳಲ್ಲಿ ಯಾರೂ ದ್ವೇಷಗಳನ್ನು ಇಟ್ಟುಕೊಳ್ಳಬಾರದು. ಭಾಗವಹಿಸುವ ಅವಕಾಶಗಳು ಸಿಕ್ಕಾಗ ಅವುಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಪೋಲಿಸ್ ಇಲಾಖೆಯಲ್ಲಿ ಪ್ರತಿದಿನವೂ ದೈಹಿಕ ಶ್ರಮವಿರುತ್ತದೆ. ಬಹಳ ಕೂತುಹಲದಿಂದ ನಡೆದ ಹಗ್ಗಜಗ್ಗಾಟವನ್ನು ನೋಡಿದರೆ ಕ್ರೀಡಾಪಟುಗಳಲ್ಲಿ ಸಮಬಲ ಶಕ್ತಿಯಿದೆ ಎಂಬುದು ತಿಳಿಯುತ್ತದೆ ಇಂತಹ ಕ್ರೀಡಾಕೂಟಕ್ಕೆ ಸಾರ್ವಜನಿಕರನ್ನು ಕರೆ ತನ್ನಿ ಎಂದರು. ಇದೇ ಸಂದರ್ಭದಲ್ಲಿ ಕ್ರೀಡಾ ಸ್ಫಧಾಗಳ ಪಥ ಸಂಚಲನ ಜರುಗಿತು. ಕ್ರೀಡಾಕೂಟದ ಧ್ವಜ ಅವರೋಹಣ ಹಾಗೂ ಧ್ವಜ ಸಮರ್ಪಣೆ ಮಾಡಲಾಯಿತು. ರಾಣೆಬೆನ್ನೂರಿನ ನಾಗರಿಕ ಪೊಲೀಸ್ ತಂಡ ಹಾಗೂ ಜಿಲ್ಲಾ ಸಶಸ್ತ್ರ ಪೊಲೀಸ್ ತಂಡಗಳ ನಡುವೆ ಹಗ್ಗಜಗ್ಗಾಟ ಹಾಗೂ ಅತಿಥಿಗಳಿಗೆ ಬಾಂಬಿಂಗ್ ದ ಸಿಟಿ ಸ್ಫಧಾಗಳು ನಡೆದವು. ವಾರ್ಷಿಕ ಕ್ರೀಡಾಕೂಟದ ವಿವಿಧ ಸ್ಫಧಾಗಳಲ್ಲಿ ವಿಜೇತರಾದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪೋಲಿಸ್ ಅಧೀಕ್ಷಕರಾದ ಕೆ.ಜಿ.ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಲ್ಲಿಕರ್ಜುನ್ ಬಾಲದಂಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಈರಣ್ಣ ಸಂಗೂರ, ಮಾಜಿ ಸಚಿವ ಆರ್.ಶಂಕರ್, ಡಿವೈಎಸ್ಪಿ ವಿಜಯಕುಮಾರ, ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷ ಮುಸ್ಸಫ್ ಕರ್ಜಗಿ, ಜಿ.ಪಂ.ಸದಸ್ಯರು ಹಾಗೂ ಪೊಲೀಸ್ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.