ಛಾಯಾಚಿತ್ರ ಪ್ರದರ್ಶನಕ್ಕೆ ಶಾಸಕರಾದ ಸಿ.ಎಂ.ಉದಾಸಿ ಚಾಲನೆ

ಹಾವೇರಿ: ಫೆ.15: ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಲಾದ ಸಕರ್ಾರದ ಅಭಿವೃದ್ಧಿ ಕಾರ್ಯಕ್ರಮಗಳ  ನೂರು ದಿನಗಳ ಸಾಧನೆ ಬಿಂಬಿಸುವ ಛಾಯಾಚಿತ್ರಗಳ ಪ್ರದರ್ಶನಕ್ಕೆ ಹಾನಗಲ್ ನಗರದ ಬಸ್ ನಿಲ್ದಾಣದಲ್ಲಿ ಶನಿವಾರ ಶಾಸಕರಾದ ಸಿ.ಎಂ.ಉದಾಸಿ ಅವರು ಚಾಲನೆ ನೀಡಿದರು.

ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಮಾತ್ರ ವಾತರ್ಾ ಇಲಾಖೆ ಈವರೆಗೆ ಸಕರ್ಾರದ ಅಭಿವೃದ್ಧಿ ಕಾರ್ಯಗಳ ಛಾಯಾಚಿತ್ರ ಪ್ರದರ್ಶನಗಳನ್ನು ಆಯೋಜಿಸಿ ಸಕರ್ಾರದ ಯೋಜನೆಗಳ ಬಗ್ಗೆ ಹಾಗೂ ಸಾಧನೆಗಳ ಬಗ್ಗೆ ಸಾರ್ವಜನಿಕರ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಸುತ್ತ ಬಂದಿತ್ತು. ಮೊಟ್ಟಮೊದಲಬಾರಿಗೆ ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಸಕರ್ಾರ ಗ್ರಾಮೀಣ ಜನರಿಗೂ ಯೋಜನೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ತಾಲೂಕಾ ಮಟ್ಟದಿಂದ ವಸ್ತುಪ್ರದರ್ಶನವನ್ನು ಆರಂಭಿಸಿದ್ದು ಜಿಲ್ಲೆಯಲ್ಲಿ ಮೊಟ್ಟಮೊದಲಬಾರಿಗೆ ಹಾನಗಲ್ ತಾಲೂಕಿನಿಂದ ಆರಂಭಗೊಂಡ ವಸ್ತುಪ್ರರ್ಶನಕ್ಕೆ ಇಲ್ಲಿನ  ವಾಯವ್ಯ ಕನರ್ಾಟಕ ರಸ್ತೆ ಸಾರಿಗೆ ಸಂಸ್ಥೆಯ  ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿ ಸಕರ್ಾರದ 100 ದಿನಗಳ ಸಾಧನೆಯ ಕೈಪಿಡಿಯನ್ನು ಬಿಡುಗಡೆಗೊಳಿಸಿದರು.

ಅತ್ಯಂತ ಆಕರ್ಷಕವಾದ ಐತಿಹಾಸಿಕ ಪರಂಪರೆಯನ್ನು ಬಿಂಬಿಸುವ ವಿನ್ಯಾಸದ ಚೌಕಟ್ಟಿನಲ್ಲಿ ಸಕರ್ಾರದ ಸಾರ್ವಜನಿಕ ಸ್ಪಂದನೆ ಕುರಿತಂತೆ ನೂರಾರು ಕಾರ್ಯಕ್ರಮಗಳು ಸಾರ್ವಜನಿಕರಿಗೆ ಮಾಹಿತಿಯ ಜೊತೆಗೆ ಯೋಜನೆಯ ಫಲಾನುಭವಿಗಳಾಗಲು ಸ್ಪೂತರ್ಿ ನೀಡುತ್ತದೆ. ಪ್ರವಾಹ ಸಂತ್ರಸ್ತರ ನೋವಿಗೆ ಮಿಡಿದ ಸಕರ್ಾರ ಎಂಬ ತಲೆಬರಹದಡಿ ರಾಜ್ಯದಂತ ಕಳೆದ ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ಮಾಹೆಯಲ್ಲಿ ಸಂಭವಿಸಿದ ಅತಿವೃಷ್ಟಿ ಹಾಗೂ ನೆರೆ ಹಾವಳಿ ಸಂದರ್ಭದಲ್ಲಿ ಸಂತ್ರಸ್ತರಿಗೆ ಸಕರ್ಾರ ಸ್ಪಂದಿಸಿದ ರೀತಿ, ನೀಡಿದ ನೆರವುಗಳ ಕುರಿತಂತೆ ಬಿಂಬಿತವಾದ ಛಾಯಾಚಿತ್ರಗಳು ಹಾಗೂ ಮಾಹಿತಿ ಸಕರ್ಾರದ ಮಾನವೀಯ ಕಳಕಳಿಯನ್ನು ಪ್ರತಿಬಿಂಬಿಸುತ್ತದೆ. ದಿನ ನೂರಾದರು ಸಾಧನೆ ನೂರಾರು ಎಂಬಂತೆ ಸಕರ್ಾರ ಘೋಷಿಸಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ನೇಕಾರರ ಸಾಲಮನ್ನಾ, ಮೀನುಗಾರರ ಸಾಲ ಮನ್ನಾ, ಸಪ್ತಪದಿ ಸಾಮೂಹಿಕ ವಿವಾಹ ಯೋಜನೆ, ಸಹಜ ಕೃಷಿ, ಮಾಹಿತಿ ತಂತ್ರಜ್ಞಾ, ಬೆಂಗಳೂರು ಸಬಬ್ರಮನ್ ಯೋಜನೆ, ದಾವೋಸ್ನಲ್ಲಿ ನಡೆದ ವಿಶ್ವ ಆಥರ್ಿಕ ವೇದಿಕೆಯ ಕಾರ್ಯಕ್ರಮದ ಪ್ರತಿಫಲ ಸೇರಿದಂತೆ ಹಲವು ಮಾಹಿತಿಗಳು ಜನರಿಗೆ ಒಂದೇ ಸೂರಿನಡಿ ವಾತರ್ಾ ಇಲಾಖೆ ಬಿಂಬಿಸಿದೆ. ಮಾಹಿತಿ ಮಳಿಗೆಯಲ್ಲಿ ಒಮ್ಮೆ ಸುತ್ತು ಹಾಕಿದರೆ ಕನರ್ಾಟಕ ಸಕರ್ಾರದ ಅಭಿವೃದ್ಧಿ ನಡಿಗೆಯ ಸಮಗ್ರ ಚಿತ್ರಣ ಕಾಣಬಹುದಾಗಿದೆ. ಈ ಮಾಹಿತಿಯನ್ನು ಅತ್ಯಂತ ಆಕರ್ಷಕ ಫಲಕಗಳಲ್ಲಿ ಜೋಡಿಸುವ ಜೊತೆಗೆ ಓದುಲು ಬಾರದ ಜನತೆಗೆ ವಿಡಿಯೋ ಮೂಲಕವೂ ಮಾಹಿತಿಯ ಪ್ರಸಾರ ಮಾಡುವ ವ್ಯವಸ್ಥೆ ಮಾಡಿರುವುದು ಗಮನಾರ್ಹವಾಗಿದೆ. ಸಾರ್ವಜನಿಕರಿಗೆ ಸಕರ್ಾರದ ಯೋಜನೆಗಳ ಕೈಪಿಡಿಯ ಉಚಿತ ವಿತರಣೆ ಮತ್ತೊಂದು ವಿಶೇಷವಾಗಿದೆ. 

ಶನಿವಾರ ಆರಂಭಗೊಂಡಿರುವ ಮಾಹಿತಿಯ ವಸ್ತುಪ್ರದರ್ಶನ ಸೋಮವಾರದ ಸಂಜೆವರೆಗೆ ಮುಂದುವರೆಯಲಿದ್ದು, ಮೊದಲದಿನ ಆಕರ್ಷಣೆಯಾಗಿ  ಜನನಿ ಜಾನಪದ ಕಲಾ ತಂಡದಿಂದ  ಹಾಗೂ ಜೈ ಹನುಮಾನ ಜಾನಪದ ಕಲಾತಂಡಗಳು ಸಾಮಾಜಿಕ ಜಾಗೃತಿ ಹಾಗೂ ಸಕರ್ಾರದ ಅಭಿವೃದ್ಧಿ ಕಾರ್ಯಗಳ ಕುರಿತಂತೆ ಪ್ರದಶರ್ಿಸಿದ ಬೀದಿನಾಟಕ ಹಾಗೂ ಜಾನಪದ ಹಾಡುಗಳು ಸಾರ್ವತ್ರಿಕ ಪ್ರಶಂಸೆಗೆ ಒಳಗಾಯಿತು.

ತಾಲೂಕಾ ಹಂತದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಳ್ಳುತ್ತಿರುವ ಛಾಯಾಚಿತ್ರ ಪ್ರದರ್ಶನಕ್ಕೆ ಸಾರ್ವಜನಿಕರು, ವಿದ್ಯಾಥರ್ಿಗಳು ಮುಗಿಬಿದ್ದು ಸೆಲ್ಫಿ ಫೋಟೋ ತೆಗೆದಿಕೊಳ್ಳುತ್ತಿದ್ದು ಎಲ್ಲರ ಗಮನ ಸೆಳೆಯಿತು. 

ಕಾರ್ಯಕ್ರಮದಲ್ಲಿ  ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಿಲ್ಲಾ ವಾತರ್ಾಧಿಕಾರಿ ಡಾ.ಬಿ.ಆರ್.ರಂಗನಾಥ್, ವಾಯವ್ಯ ಸಾರಿಗೆ  ಸಂಸ್ಥೆಯ ಹಾನಗಲ್ ಘಟಕದ  ನಿಯಂತ್ರಣಾಧಿಕಾರಿ ಅಕರ್ಾಚಾರಿ,  ತಹಶೀಲ್ದಾರ ಪಿ.ಎಸ್.ಯರೇಶಿಮಿ, ತಾಲೂಕು ಪಂಚಾಯತಿ ಕಾರ್ಯನಿವರ್ಾಹಣಾಧಿಕಾರಿ ಚನ್ನಪ್ಪ ರಾಯಣ್ಣನವರ, ಪಿ.ಎಸ್.ಐ. ಡಿ.ಎನ್. ಮಂಜುನಾಥ್ ಇತರರು ಭಾಗವಹಿಸಿದ್ದರು.