ಜಹುರಬಾಶಾ ಕಲೆಗಾರಗೆ ಪಿಎಚ್‌ಡಿ ಪದವಿ

ಜಹುರಬಾಶಾ ಕಲೆಗಾರಗೆ ಪಿಎಚ್‌ಡಿ ಪದವಿ PhD degree for Jahurabasha Kalegara

ಲೋಕದರ್ಶನ ವರದಿ 

ಬೆಳಗಾವಿ 06: ಕಿತ್ತೂರು ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯವು ಜಹುರಬಾಶಾ ಕಲೆಗಾರ  ಅವರು ರಾಜ್ಯಶಾಸ್ತ್ರ ವಿಭಾಗಕ್ಕೆ ಸಲ್ಲಿಸಿದ “ಭಾರತ ಸ್ವಾತಂತ್ರ್ಯ ಹೊರಾಟದಲ್ಲಿ ಬೆಳಗಾವಿ ಜಿಲ್ಲೆಯ ಪಾತ್ರ : ಸಂಗೊಳ್ಳಿ ರಾಯಣ್ಣ ಮತ್ತು ಮಾಹಾದೇವಪ್ಪ ಪಟ್ಟಣ ಕುರಿತು ಅಧ್ಯಯನ” ಎಂಬ ಮಹಾಪ್ರಬಂದಕ್ಕೆ ಪಿಎಚ್ ಡಿ ಪದವಿ ನೀಡಿದೆ. ಇವರಿಗೆ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ  ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಡಿ.ಜಿ. ಹನುಮಂತಪ್ಪ ಅವರು ಮಾರ್ಗದರ್ಶನ ನೀಡಿದ್ದಾರೆ.