ದುಶಂತ ಓಲೇಕಾರ ಗೆ ಪಿಎಚ್ ಡಿ ಪ್ರಧಾನ

ಲೋಕದರ್ಶನ ವರದಿ

ರಾಣೇಬೆನ್ನೂರು: ಸ್ಥಳೀಯ ದುಶಂತ ಮಂಜುನಾಥ ಓಲೇಕಾರ ಅವರು ಫಿಕ್ಷನ್ ಆ್ಯಸ್ ಎ ನಿಯೋ-ಸ್ಲೇವ್ ನೆರೆಟಿವ್ ಇನ್ ಕ್ಯಾರಿಲ್ ಎಂಬ ಸ್ನಾತಕೋತ್ತರ ಪದವಿಯ ವಿಷಯ ಕುರಿತು ಇಂಗ್ಲೀಷ್ನಲ್ಲಿ ಮಂಡಿಸಿದ ಸಂಶೋಧನೆಗೆ ಧಾರವಾಡ ಕನರ್ಾಟಕ ಕಲಾ ಮಹಾವಿದ್ಯಾಲಯವು ದುಶಂತರಿಗೆ ಡಾ. ಆಪ್ ಫಿಲಾಸಪಿ (ಪಿಎಚ್ಡಿ) ಪದವಿ ನೀಡಿ ಗೌರವಿಸಿದೆ. 

ದುಶಂತ್ ಅವರಿಗೆ ಇಂಗ್ಲೀಷ್ ವಿಭಾಗದ ಸಹ ಪ್ರಾಧ್ಯಾಪಕ ಡಾ. ಪಿ.ಎಸ್.ಸುಬ್ರಮಣ್ಯ ಭಟ್ ಅವರು ಮಾರ್ಗದರ್ಶನ ನೀಡಿದ್ದರು. ಪ್ರಸ್ತುತ ದುಶಂತ ಕನರ್ಾಟಕ ವಿಶ್ವವಿದ್ಯಾಲಯದ ಕಲಾ ಮಹಾವಿದ್ಯಾಲಯದಲ್ಲಿ ಇಂಗ್ಲೀಷ್ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದುಶಂತ ಅವರು ಯುವ ನ್ಯಾಯವಾಧಿ ಮಂಜುನಾಥ ಓಲೇಕಾರ ಅವರ ಪುತ್ರರಾಗಿದ್ದಾರೆ.