ನವದೆಹಲಿ, ಎ 10, ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿದ್ದು ದ್ದು ಪರಿಣಾಮ ತೈಲ ಬೇಡಿಕೆಯು ಭಾರೀ ಪ್ರಮಾಣದಲ್ಲಿ ಕುಸಿತವಾಗಿದ್ದರೂ ಸತತ 25ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಇಳಿದಿಲ್ಲ 21 ದಿನಗಳ ಲಾಕ್ಡೌನ್ ಇಂದಾಗಿ ಇದೆ ತಿಂಗಳು ತೈಲ ಬೇಡಿಕೆಯು ಸುಮಾರು ಶೇಕಡ 66 ಕುಸಿದಿದೆ. ಇದರಿಂದಾಗಿ ತೈಲ ಕಂಪನಿಗಳು ಸೇರಿದಂತೆ ವಿಶ್ವದಾದ್ಯಂತ ತೈಲ ಉತ್ಪಾದಕರು ಲಕ್ಷಾಂತರ ಕೋಟಿ ನಷ್ಟಕ್ಕೂ ಗುರಿಯಾಗಿದ್ದಾರೆ.ಇಷ್ಟಾದರೂ ದೇಶದಲ್ಲಿ, ರಾಜ್ಯದಲ್ಲಿ ತೈಲ ಬೆಲೆ ಇಳಿಕೆಯಾಗಿಲ್ಲ. ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳದಲ್ಲಿ ವ್ಯಾಟ್ ಹೆಚ್ಚಳ ಮಾಡಿದ ಪರಿಣಾಮ ದರಗಳು 1 ರಿಂದ 1.5 ರುಪಾಯಿಯಷ್ಟು ಹೆಚ್ಚಾಗಿದೆ. ಲಾಕ್ಡೌನ್ ಹಿನ್ನೆಲೆ ಅಗತ್ಯ ಸೇವೆಗಳ ವಿಭಾಗಕ್ಕೆ ಸೇರಿರುವವರು ಮಾತ್ರ ಹೆಚ್ಚು ಇಂಧನವನ್ನು ಖರೀದಿಸುತ್ತಿದ್ದಾರೆ. ಹೀಗಾಗಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೇಡಿಕೆಯುಶೇ 66 ರಷ್ಟು ಕುಸಿದಿದೆ. ಲಾಕ್ಡೌನ್ ತೆರವುಗೊಂಡ ಬಳಿಕ ಮತ್ತು ಸಾರ್ವಜನಿಕ ಸಾರಿಗೆ ಪುನರಾರಂಭಿಸಿದಾಗ ಬೇಡಿಕೆ ಹೆಚ್ಚಾಗಲಿದೆ ಎಂದೂ ನಿರೀಕ್ಷಿಸಲಾಗಿದೆ.