ರೈಲ್ವೆಮೆಲ್ಸೇತುವೆ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಕೆ

ಲೋಕದರ್ಶನವರದಿ

ರಾಣೇಬೆನ್ನೂರು:ನಗರದ ದೇವರಗುಡ್ಡ ರಸ್ತೆಯ ಹತ್ತಿರ ನಿರ್ಮಾಣ  ಮಾಡುತ್ತಿರುವ ರೈಲ್ವೇ ಕೆಳಸೇತುವೆ ಬದಲು  ಮೆಲ್ಸೇತುವೆ ನಿರ್ಮಾಣ  ಮಾಡಬೇಕೆಂದು ಒತ್ತಾಯಿಸಿ ಸ್ಥಳೀಯ ರೈಲ್ವೇ ಮೆಲ್ಸೇತುವೆ ನಿರ್ಮಾಣ  ಹೋರಾಟ ಸಮಿತಿಯ ಪದಾಧಿಕಾರಿಗಳು ಮತ್ತು ವಿವಿಧ ಸಂಘಟನೆಯ ಕಾರ್ಯಕರ್ತರು ಮತ್ತು ವಿವಿಧ ಮಠಾಧೀಶರ ಸಮ್ಮುಖದಲ್ಲಿ ಇಲ್ಲಿನ ದೇವರಗುಡ್ಡ ರಸ್ತೆಯ ರೈಲ್ವೇ ಗೇಟ ಬಳಿ ಸೋಮವಾರ ಹಮ್ಮಿಕೊಂಡಿದ್ದ  ರೈಲು ತಡೆ ಚಳವಳಿಯನ್ನು ಸಂಸದರ ಹಾಗೂ ರೈಲ್ವೆ ಅಧಿಕಾರಿಗಳ ಲಿಖಿತ ಭರವಸೆಯ ಮೇರೆಗೆ ಹೋರಾಟಗಾರರು ಪ್ರತಿಭಟನೆಯನ್ನು  ತಾತ್ಕಾಲಿಕವಾಗಿ ಮುಂದೂಡಿದರು.

      ರವಿವಾರ ಮುಂಜಾನೆ ಘಟನಾ ಸ್ಥಳಕ್ಕೆ ಬೇಟಿ ನೀಡಿದ ಸಂಸದ ಶಿವಕುಮಾರ ಉದಾಸಿ ಹಾಗೂ ರೈಲ್ವೆ ಹಿರಿಯ ಅಧಿಕಾರಿಗಳಾದ ದೇವೇಂದ್ರ ಗುಪ್ತಾ, ರಮೇಶ, ವೇಣುಗೋಪಾಲ ಮತ್ತಿತರರು 3 ತಿಂಗಳೊಳಗಾಗಿ ಕಾಮಗಾರಿ ಕೈಗೊಳ್ಳುವುದಾಗಿ ಲಿಖಿತ ರೂಪದ ಭರವಸೆ ನೀಡಿದ್ದರಿಂದ ಹೋರಾಟಗಾರರು ಪ್ರತಿಭಟನೆ ವಾಪಸ್ ಪಡೆದರು. ಗುರುಬಸವ ಸ್ವಾಮಿಗಳು,  ಸಮಿತಿ ಅಧ್ಯಕ್ಷ ರವಿಂದ್ರಗೌಡ ಪಾಟೀಲ, ಪ್ರಧಾನ ಕಾರ್ಯದಶರ್ಿ ರಾಜಣ್ಣ ಮೋಟಗಿ, ಗದಿಗಪ್ಪ ಹೊಟ್ಟಿಗೌಡ್ರ, ಪ್ರಭುಸ್ವಾಮಿ ಕರ್ಜಗಿಮಠ, ಡಾ.ಬಸವರಾಜ ಕೇಲಗಾರ, ಮಲ್ಲಣ್ಣ ಅಂಗಡಿ, ಮಂಜುನಾಥ ಗೌಡಶಿವಣ್ಣನವರ, ಬಸಣ್ಣ ನೆಲೋಗಲ್, ಬಸವರಾಜ ಪಾಟೀಲ, ಬಸಣ್ಣ ಕೊಪ್ಪದ, ಉಮೇಶ ಹೊನ್ನಾಳ್ಳಿ, ಜಗದೀಶ ಕೆರೂಡಿ, ಹಾಲಪ್ಪ ಕುಲಕಣರ್ಿ, ಹರಿಹರಗೌಡ ಪಾಟೀಲ, ಪ್ರಕಾಶ ಪೂಜಾರ, ಮಲ್ಲಪ್ಪ ಮೇಲ್ಮಾಳಗಿ, ಎಸ್.ಡಿ ಹಿರೇಮಠ ಸೇರಿದಂತೆ ಮತ್ತಿತತರು ಇದ್ದರು.