ತೈಲ ಬೆಲೆ ಏರಿಕೆ ಖಂಡಿಸಿ ಮನವಿ

ಲೋಕದರ್ಶನ ವರದಿ

ಮೂಡಲಗಿ 10: ದಿನದಿಂದ ದಿನಕ್ಕೆ ತೈಲ ಬೆಲೆ ಏರಿಕೆ ಖಂಡಿಸಿ ಮತ್ತು ಕೊರೊನಾ ತಡೆಗಟ್ಟುವ ಉಪಕರಣಗಳಾದ ಪಿಪಿಇ ಕಿಟ್ಟ, ವೆಂಟಿಲೆಟರ, ಮಾಸ್ಕ್, ಸ್ಯಾನಿಟೈಜರ್ ಖರೀದಿಯಲ್ಲಿ ರಾಜ್ಯ ಸರಕಾರ  ಮೂಲ ಬೆಲೆಗಿಂತ ಹತ್ತು  ಪಟ್ಟು ಹೆಚ್ಚಿನ ಬೆಲೆಯಲ್ಲಿ ಖರೀದಿಸಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಜಿಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ  ಶಂಕರ ಮಾಡಲಗಿ ಆಕ್ರೋಶ ವ್ಯಕ್ತಪಡಿಸಿದರು.  

ಬುಧವಾರದಂದು ಅರಭಾಂವಿ ಮತಕ್ಷೇತ್ರದ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಕೊವಿಡ್ -19 ಅಸಮರ್ಪಕ ನಿರ್ವಹಣೆ ಮತ್ತು ರೈತರಿಗೆ ಪರಿಹಾರ ಧನ ವಿತರಿಸುವಲ್ಲಿ ಸಕರ್ಾರ  ವಿಫಲವಾಗಿದೆ ಎಂದು ಖಂಡಿಸಿ ಪ್ರತಿಭಟಿಸಿ ಮೂಡಲಗಿ ತಹಶೀಲ್ದಾರ ದಿಲಶಾದ್ ಮಾಹಾತ ಮೂಲಕ ರಾಜ್ಯ ಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಕೊರೊನಾ ಸೋಂಕಿತರಿಗೆ ಸರಿಯಾದ ರೀತಿಯಲ್ಲಿ ಅಂಬ್ಯುಲೆನ್ಸ್ ಮತ್ತು ಕ್ವಾರಂಟೈನ್ ಸೇವೆ ಸಿಗುತ್ತಿಲ್ಲ ಎಂದವರು ಕೊರೊನಾ ತಡೆಗಟ್ಟುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿ ಜನರನ್ನು ಭಯಬೀತರನ್ನಾಗಿಸಿದ್ದಾರೆ ಎಂದು ಆರೋಪಿಸಿದರು.  

ಕಲ್ಲೋಳಿಯ ಈರಪ್ಪ ಬೆಳಕೂಡ  ಮುಖಂಡರಾದ ಭೀಮಪ್ಪ ಗಡಾದ, ಪ್ರಕಾಶ ಸೋನವಾಲ್ಕರ, ಪುರಸಭೆ ಸದಸ್ಯ ಈರಣ್ಣ ಕೂಣ್ಣೂರ ಮಾತನಾಡಿದರು. ತಹಶೀಲ್ದಾರರಿಗೆ ನೀಡಿದ ಮನವಿಯಲ್ಲಿ  ಕೊರೊನಾ ಸೊಂಕಿತರಿಗೆ  ಸಮರ್ಪಕವಾಗಿ ಅಂಬ್ಯುಲೇನ್ಸ್,  ಕ್ವಾರೆಂಟೈನ್ ಸಿಗುತ್ತಿಲ್ಲ,  ಶವ ಸಂಸ್ಕಾರ ಅಮಾನವಿಯವಾಗಿ ಮಾಡುತ್ತಿರುವದು ಖಂಡಿನಿಯ,  ರೈತರಿಗೆ ಹಲವಾರು ಧನ ಸಹಾಯ ನೀಡುವದಾಗಿ ಘೋಷಿಸಿದ ಸಕರ್ಾರ ರೈತರಿಗೆ ಯಾವದೇ ಧನ ಸಾಹಾಯ ನೀಡದೆ ಸತಾಯಿಸುತ್ತಿರುವದು, ದಿನದಿಂದ ದಿನಕ್ಕೆ ಏರುತ್ತಿರುವ  ತೈಲ ಬೆಲೆ, ಪ್ರವಾಹ ಸಂತ್ರಸ್ಥರಿಗೆ ಸವರ್ೆ ಕಾರ್ಯ ಹಾಗೂ ಪರಿಹಾರ ವಿಳಂಬ,  ಭೂ ಸ್ವಾದಿನ ಕಾಯ್ದೆ ತಿದ್ದು ಪಡಿ ವಿರೋದ ಮತ್ತು ಕೂಲಿ ಕಾಮರ್ಿಕರಿಗೆ, ನೇಕಾರರಿಗೆ, ಕ್ಷೌರಿಕರಿಗೆ, ಟೆಂಪೋ ಚಾಲಕರಿಗೆ, ಅಟೋ ರಿಕ್ಷಾ ಚಾಲಕರಿಗೆ, ಸಣ್ಣ ಹೊಟೇಲ ಉದ್ದಿಮೇದಾದರು, ಬೀದಿ ವ್ಯಾಪಾರಸ್ಥರಿಗೆ ಸಹಾಯ ಧನ ಘೋಶಿಸಿದರೂ ಸರಿಯಾದ ಸಮಯಕ್ಕೆ ವಿತರಿಸುತ್ತಿಲ್ಲಾ, ಬಿಪಿಎಲ್ ಕಾರ್ಡ ಹೊಂದಿದವರಿಗೆ ನೀಡುತ್ತಿರುವ ಸೌಲಬ್ಯಗಳನ್ನು ಎಪಿಎಲ್ ಕಾರ್ಡದಾರರಿಗೂ ಸಹ ಧಾನ್ಯಗಳನ್ನು ವಿತರಿಸಲು ಆಗ್ರಸಿದ್ದಾರೆ.

ಈ ಸಮಯದಲ್ಲಿ ಜೆಡಿಎಸ್ ಅರಭಾಂವಿ ಬ್ಲಾಕ ಅಧ್ಯಕ್ಷ ಚನ್ನಪ್ಪ ವಗ್ಗನವರ, ಮಲ್ಲಪ್ಪ ಮದಗುಣಕಿ, ಪುರಸಭೆ ಸದಸ್ಯರಾದ ಪರಪ್ಪ ಮುನ್ಯಾಳ, ಶಿವಾನಂದ ಸಣ್ಣಕ್ಕಿ, ಮತ್ತು ಮಲ್ಲಪ್ಪ ತೇರದಾಳ, ಚನ್ನಪ್ಪ ಅಥಣಿ, ಚೇತನ ಹೊಸಕೋಟಿ ಮತ್ತು ವಿವಿಧ ಗ್ರಾಮಗಳ  ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.