ಕೊಪ್ಪಳ 23: ಮುನಿರಾಬಾದ್ ಠಾಣಾ ವ್ಯಾಪ್ತಿಯಲ್ಲಿ ಶೆಟ್ಟಿ ನಾಯ್ಕ (55) ಎಂಬ ವ್ಯಕ್ತಿ ಡಿ. 27 ರಂದು ಕಾಣೆಯಾಗಿದ್ದು ಈ ಕುರಿತು ಮುನಿರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ವ್ಯಕ್ತಿ ಪತ್ತೆಗೆ ಸಹಕರಿಸುವಂತೆ ಮುನಿರಾಬಾದ್ ಪೊಲೀಸ್ ಅಧಿಕಾರಿ ಕೋರಿದ್ದಾರೆ.
ಹೊಸಪೇಟೆ ತಾಲ್ಲೂಕಿನ ಕಡ್ಡಿ ರಾಂಪೂರ ಗ್ರಾಮದ ನಿವಾಸಿ ಶೆಟ್ಟಿ ನಾಯ್ಕ ತಂದೆ ನಾರಾಯಣ ನಾಯ್ಕ (55) ಇತನು ಡಿಸೆಂಬರ್. 27 ರಂದು ತನ್ನ ಅಣ್ಣನ ಊರಾದ ಬಸಾಪುರ ಗ್ರಾಮಕ್ಕೆ ಹೋಗಿದ್ದು ಇದುವರೆಗೂ ಪತ್ತೆಯಾಗಿರುವುದಿಲ್ಲ. ಕಾಣೆಯಾದ ವ್ಯಕ್ತಿಯ ಚಹರೆ ಎತ್ತರ 5.2 ಅಡಿ, ಸಾದಾಗೆಂಪು ಮೈಬಣ್ಣ, ಸಾಧಾರಣಾ ಮೈಕಟ್ಟು, ಕೋಲು ಮುಖ, ಉದ್ದ ಮೂಗು ಹೊಂದಿರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ. ಬಿಳಿ ಲುಂಗಿ ಮತ್ತು ಬಿಳಿ ಅಂಗಿ ಧರಿಸಿರುತ್ತಾರೆ.
ಕಾಣೆಯಾದ ವ್ಯಕ್ತಿಯ ಗುರುತು ಸಿಕ್ಕಲ್ಲಿ ಮುನಿರಾಬಾದ ಪೊಲೀಸ್ ಠಾಣೆಗೆ ಅಥವಾ ಕೊಪ್ಪಳ ಜಿಲ್ಲಾ ಪೊಲೀಸ್ ಅಧೀಕ್ಷಕರು ದೂ. ಸಂ :08539-230111, ಕೊಪ್ಪಳ ಡಿಎಸ್ಪಿ ದೂ.ಸಂ : 08539-230432, 9480803720, ಕೊಪ್ಪಳ ಸಿ.ಪಿ.ಐ ಗ್ರಾಮೀಣ ವೃತ್ತ ದೂ.ಸಂ: 08539-222433, 9480803731, ಪಿ.ಎಸ್.ಐ ಮುನಿರಾಬಾದ್ ಠಾಣೆ ದೂ.ಸಂ:08539-270333, 9480803748 ಕ್ಕೆ ಸಂರ್ಪಕಿಸಬಹುದು ಎಂದು ಮುನಿರಾಬಾದ ಪಿ.ಎಸ್.ಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.