ಕಂಟೋನ್ಮೆಂಟ್ನ ಸಂತ ಮೇರಿ ಶಾಲೆಯ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮನವಿ
ಬಳ್ಳಾರಿ 24: ಸಂತ ಮೇರಿ ಶಾಲೆ ಮುಂದಿರುವ ಸಿ.ಸಿ ರಸ್ತೆಯಲ್ಲಿ ಮೊದಲಿನಿಂದಲೂ ವಾಹನ ಸಂಚಾರ ದಟ್ಟವಾಗಿದೆ. ಅದು ಅಲ್ಲದೆ ಸುಧಾಕ್ರಾಸ್ ಮೇಲ್ಸೇತುವೆ ನಿರ್ಮಾಣ ಕಾರ್ಯ ಪ್ರಾರಂಭವಾದಾಗಿನಿಂದ, ವಾಹನ ದಟ್ಟನೆ ಇನ್ನೂ ಹೆಚ್ಚಾಗಿದೆ. ಕಂಟೋನ್ಮೆಂಟ್ ರೈಲ್ವೆ ಗೇಟ್ ಮೂಲಕ ಹೊಸಪೇಟೆ ರಸ್ತೆಯನ್ನು ತಲುಪಲು, ಭಾರಿ ವಾಹನಗಳು ಸೇರಿದಂತೆ ಎಲ್ಲಾ ರೀತಿಯ ವಾಹನಗಳು ಇದೇ ರಸ್ತೆಯ ಮೂಲಕ ಹಾದು ಹೋಗುತ್ತವೆ. ಇದರಿಂದಾಗಿ ಶಾಲೆಯ ಮಕ್ಕಳಿಗೆ ಹಾಗೂ ಪೋಷಕರು ಅತೀವ ತೊಂದರೆ ಅನುಭವಿಸುವಂತಾಗಿದೆ. ಕೆಲವೊಮ್ಮೆ ಅಪಘಾತಗಳ ಅಪಾಯ ಕೂಡ ಎದುರಾಗುವ ಸಂದರ್ಭಗಳು ಇರುತ್ತವೆ. ಕೆಲ ಮಕ್ಕಳು ಬಿದ್ದು ಗಾಯಗೊಂಡಿದ್ದಾರೆ. ಈ ಸಮಸ್ಯೆ ಬಗ್ಗೆ ಈ ಹಿಂದೆ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದ್ದರೂ, ಸಮಸ್ಯೆಗೆ ಪರಿಹಾರ ಮಾತ್ರ ದೊರೆತಿಲ್ಲ. ಮೂರು ತಿಂಗಳ ಹಿಂದೆ ನವೆಂಬರ್ 12ರಂದು ಬಳ್ಳಾರಿ ನಾಗರಿಕ ಹೋರಾಟ ಸಮಿತಿಯಿಂದ ಪಾಲಿಕೆಯ ಹಾಗೂ ಸಂಚಾರಿ ಪೋಲಿಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ, ಯಾವುದೇ ರೀತಿಯಲ್ಲೂ ಸಮಸ್ಯೆಗೆ ಉತ್ತರ ಸಿಕ್ಕಿಲ್ಲ. ಈ ಹಿನ್ನಲೆಯಲ್ಲಿ ಈ ಕೆಳಗಿನ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಯಿತು. ನಿಯೋಗದಲ್ಲಿ ಃಓಊಖ ಸಂಚಾಲಕರಾದ ಸೋಮಶೇಖರ ಗೌಡ, ಸದಸ್ಯರಾದ ಡಾ.ಪ್ರಮೋದ್, ಶಾಂತಾ, ಸುರೇಶ್, ಪೋಷಕರಾದ ಉಮೇಶ್, ಗೋವಿಂದರಾಜು, ಶಂಕರ್, ತಿಪ್ಪೇಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. ಬೇಡಿಕೆಗಳು 1.ಕಂಟೋನ್ಮೆಂಟ್ನ ಸಂತ ಮೇರಿ ಶಾಲೆ ಮುಂದಿರುವ ಸಿ.ಸಿ ರಸ್ತೆಯಲ್ಲಿ ಸ್ಪೀಡ್ ಬ್ರೇರ್ಸ್ ತುರ್ತಾಗಿ ನಿರ್ಮಿಸಬೇಕು.2.ನಗರದಲ್ಲಿ ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಬೇಕು.3. ವಾಹನ ದಟ್ಟನೆ ನಿಭಾಯಿಸಲು ಸಂಚಾರ ಪೋಲಿಸರನ್ನು (ಟ್ರಾಫಿಕ್ ಪೋಲಿಸ್) ನಿಯೋಜಿಸಲು ಸೂಕ್ತ ಕ್ರಮಕೈಗೊಳ್ಳಬೇಕು.