ಹಗಲು 10 ಗಂಟೆ ವಿದ್ಯುತ್ ನೀಡುವಂತೆ ಆಗ್ರಹಿಸಿ ಮನವಿ
Petition demanding 10 hours of electricity during the day
ತಾಳಿಕೋಟಿ 17 : ತಾಲೂಕಿನ ಬೊಮ್ಮನಹಳ್ಳಿ, ಗುಡ್ನಾಳ, ಬೋಳವಾಡ, ಪತ್ತೇಪೂರ, ಹೊಸಳ್ಳಿ ಹಾಗೂ ತುಂಬಗಿ ಸೇರಿದಂತೆ ವಿವಿಧ ಗ್ರಾಮಗಳ ರೈತರಿಗೆ ವಿದ್ಯುತ್ ಸರಬರಾಜು ಸರಿಯಾಗಿ ಆಗದೇ ಇರುವದರಿಂದ ತುಂಬಾ ತೊಂದರೆಯಾಗುತ್ತಿದ್ದು ಇದನ್ನು ತಪ್ಪಿಸಲು ಹಗಲು ಹೊತ್ತಿನಲ್ಲಿ10 ಗಂಟೆಗಳ ಕಾಲ ನಿರಂತರವಾಗಿವಿದ್ಯುತ್ ಸರಬರಾಜು ಮಾಡಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘ ತಾಲೂಕ ಘಟಕದ ಪದಾಧಿಕಾರಿಗಳು ಹೆಸ್ಕಾಂ ಸಹಾಯಕ ಅಭಿಯಂತರ ಶಿವನಗೌಡ ಪಾಟೀಲ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಈ ವೇಳೆ ಅಖಂಡ ಕರ್ನಾಟಕ ರೈತ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಅವರು ಮಾತನಾಡಿ ರೈತರ ಕೃಷಿ ಪಂಪ್ ಸಟ್ಟುಗಳಿಗೆ ದಿನಕ್ಕೆ 7 ತಾಸುಗಳವರೆಗೆ ವಿದ್ಯುತ್ ನೀಡುವುದಾಗಿ ಹೇಳಿದ ಹೆಸ್ಕಾಂ ಇಲಾಖೆಯು ಕೇವಲ 2 ತಾಸು ಮಾತ್ರ ವಿದ್ಯುತ್ ಸರಬರಾಜು ಮಾಡುತ್ತಿದೆ ಇದರಿಂದ ರೈತರಿಗೆ ತುಂಬಾ ತೊಂದರೆ ಆಗುತ್ತಿದ್ದು ಅಲ್ಪ-ಸ್ವಲ್ಪ ಬೆಳೆದು ನಿಂತ ಬೆಳೆಗಳು ನೀರಿಲ್ಲದೆ ಒಣಗಿ ಹೋಗುತ್ತಿದ್ದು ರೈತರು ಕಂಗಾಲಾಗಿ ಸಾಲದ ಸುಳಿಗೆ ಸಿಲುಕಿಕೊಂಡಿದ್ದಾರೆ. ನಮ್ಮ ಜಿಲ್ಲೆಯಲ್ಲಿಯೇ ಉಷ್ಣ ಸ್ಥಾವರ ವಿದ್ಯುತ್ ಘಟಕ ಇದ್ದರೂ ಅದರಿಂದ ಉತ್ಪಾದಿಸಿದ ವಿದ್ಯುತ್ ರೈತರಿಗೆ ನೀಡದೇ ಕೈಗಾರಿಕೆಗಳಿಗೆ ಕೊಡಲಾಗುತ್ತಿದೆ, ಯಾವ ಸರ್ಕಾರಗಳಿಂದಲೂ ರೈತರಿಗೆ ನ್ಯಾಯ ಸಿಗುತ್ತಿಲ್ಲ ಎಂದ ಅವರು ಇನ್ನು ಮುಂದೆ ಅಧಿಕಾರಿಗಳು ತಾಲೂಕಿನ ಈ ಎಲ್ಲ ಗ್ರಾಮಗಳ ರೈತರ ಪಂಪ್ ಸಟ್ಟುಗಳಿಗೆ ಹಗಲು ಹೊತ್ತಿನಲ್ಲಿ ಹತ್ತು ಗಂಟೆಗಳ ಕಾಲ ನಿರಂತರವಾಗಿ ವಿದ್ಯುತ್ತನ್ನು ಸರಬರಾಜು ಮಾಡಬೇಕು ಈ ಗಂಭೀರ ಸಮಸ್ಯೆಯನ್ನು ಒಂದೆರಡು ದಿನಗಳಲ್ಲಿ ಪರಿಹರಿಸದೆ ಹೋದಲ್ಲಿ ಸಂಘಟನೆ ವತಿಯಿಂದ ಉಗ್ರವಾದ ಹೋರಾಟವನ್ನು ನಡೆಸುವುದು ಅನಿವಾರ್ಯವಾಗುತ್ತದೆ ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ತಿಳಿಸಿದರು.
ಈ ಸಮಯದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ತಾಲೂಕ ಅಧ್ಯಕ್ಷ ಬಾಳಪ್ಪಗೌಡ ಲಿಂಗದಳ್ಳಿ, ಉಪಾಧ್ಯಕ್ಷ ರಾಮನಗೌಡ ಹಾದಿಮನಿ, ಪದಾಧಿಕಾರಿಗಳಾದ ಬಸವರಾಜ ಮಸರಕಲ್ಲ, ಶರಣಪ್ಪ ಕಲ್ಬುರ್ಗಿ, ಭೀಮಣ್ಣ ಕಲ್ಲದೇವನಹಳ್ಳಿ, ನಿಂಗಪ್ಪ ಕಲಬುರ್ಗಿ, ಜಗದೀಶ ದೇಸಾಯಿ, ಶಿವಪುತ್ರ್ಪ ಕಟ್ಟಿಮನಿ, ಪರಶುರಾಮ ದೋರನಹಳ್ಳಿ, ನಿಂಗನಗೌಡ ಕೋಳೂರ, ಶರಣಬಸಪ್ಪ ಚಿಂಚೋಳಿ, ನಿಂಗಪ್ಪ ರಸ್ಕಸಗಿ, ಗುರುರಾಜ ಕಲಬುರ್ಗಿ ಮತ್ತಿತರರು ಇದ್ದರು.
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ 