ಲೋಕದರ್ಶನವರದಿ
ಮಹಾಲಿಂಗಪುರ : ಸಮೀಪದ ರನ್ನಬೆಳಗಲಿಯ ಸಿದ್ಧಾರೂಢ ಸರಕಾರಿ ಪ್ರೌಢ ಶಾಲೆಯಲ್ಲಿ ಜೀವಾನಂದ ಜ್ಯೋತಿ ಶ್ರೀಗಳಿಂದ ವ್ಯಕ್ತಿತ್ವ ವಿಕಸನ ಶಿಬಿರ ನಡೆಸಲಾಯಿತು.
ಶ್ರೀಗಳು ಮೂಲತಃ ಕೇರಳದವರಾಗಿದ್ದು ಬಿಎಸ್ಸಿ, ಎಂಬಿಎ, ಎಂಬಿಬಿಎಸ್, ಎಂಎ ಪದವೀಧರರಾಗಿದ್ದಾರೆ, ನವದೆಹಲಿಯ ಎನ್ ಸಿ ಎ ಆರ್ ಟಿ ಮತ್ತು ಕಲ್ಕತ್ತಾ ರಾಮಕೃಷ್ಣಾಶ್ರಮದ ಸದಸ್ಯತ್ವ ಹಾಗೂ ಕೇಂದ್ರ ಪಠ್ಯಪುಸ್ತಕ ಸಮಿತಿಯ ಆಜೀವ ಸದಸ್ಯತ್ವ ಹೊಂದಿದ್ದು 37 ವರ್ಷ 1 ತಿಂಗಳು 14 ದಿನಗಳ ಪಾದಯಾತ್ರೆ ಮಾಡಿದ ಮಹಾನುಭಾವ ಶ್ರೀಗಳು ನಮ್ಮ ಶಾಲೆಗೆ ಬಂದು ಮಕ್ಕಳಿಗೆ ಮಾರ್ಗದರ್ಶನ ಮಾಡಿದ್ದು ನಮ್ಮ ಶಾಲೆಯ ಮಕ್ಕಳ ಮಹಾಭಾಗ್ಯ ಎಂದು ಚಿತ್ರಕಲಾ ಶಿಕ್ಷಕ ಬಿ. ಪಿ. ಚೋಪಡೆ ಹೇಳಿದರು.
ಪ್ರಭಾರಿ ಮುಖ್ಯೋಪಾಧ್ಯಾಯ ಐ. ಎಚ್. ಗಸ್ತಿ ಅಧ್ಯಕ್ಷತೆ ವಹಿಸಿದ್ದರು. ಅನ್ನಪೂರ್ಣ ಹಾರೂಗೇರಿ ಮತ್ತು ಸಂಗಡಿಗರು ಪ್ರಾಥರ್ಿಸಿ, ಶಿಕ್ಷಕ ಚೋಪಡೆ ಸ್ವಾಗತಿಸಿ, ವಂದಿಸಿದರು. ಶಿಕ್ಷಕರಾದ ಎಂ. ಬಿ. ಮುರಗೋಡ, ಎ. ಡಿ. ಏಳೆಮ್ಮಿ, ರವೀಂದ್ರ ಜೋಶಿ, ಎಂ. ಆರ್. ಕುಲಕಣರ್ಿ ಇತರರು ಮತ್ತು ಮಕ್ಕಳು ಇದ್ದರು.