ಲೋಕದರ್ಶನ ವರದಿ
ರಾಣೇಬೆನ್ನೂರು: ಮಹಾತ್ಮಾಗಾಂಧೀಜಿಯವರ ಕನಸಿನಂತೆ ಎನ್ ಎಸ್ ಎಸ್ ಸ್ವಯಂ ಸೇವಕರು ಶಿಕ್ಷಣದ ಜೊತೆಗೆ ವಿದ್ಯಾಥರ್ಿಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವ ಜೊತೆಯಲ್ಲಿ ದೇಶ ಭಕ್ತಿಯನ್ನು ಮೂಡಿಸುವ ಕೆಲಸವನ್ನು ಎನ್ ಎಸ್ ಎಸ್ ಮಾಡುತ್ತ ಬರುತ್ತಿದೆ ಎಂದು ಹಾವೇರಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್ ಕೆ ಕರಿಯಣ್ಣವರ್ ಹೇಳಿದರು.
ತಾಲ್ಲೂಕಿನ ಸುಣಕಲ್ಲಬಿದರಿ ಗ್ರಾಮದ ಸದ್ಗುರು ಶಿವಾನಂದ ಸಂ ಪ ಪೂ ಕಾಲೇಜಿನ 2019-20 ನೇ ಸಾಲಿನ ರಾಷ್ಟ್ರೀಯ ಸೇವಾಯೋಜನೆಯ ವಿಶೇಷ ವಾಷರ್ಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಬರೀ ವಿದ್ಯಾಭ್ಯಾಸ ವ್ಯಕ್ತಿತ್ವವನ್ನು ರೂಪಿಸುವುದಿಲ್ಲ
ಅದು ಹಣ ಅಧಿಕಾರವವನ್ನು ಗಳಿಸಿಕೊಡಬಹುದು ಆದರೆ ಇಂತಹ ಶಿಬಿರಗಳಿಂದ ವ್ಯಕ್ತಿತ್ವ ರೂಪಗೊಳ್ಳುವುದರ ಜೊತೆಗೆ ನಾಯಕತ್ವ ಗುಣ ಬೆಳೆಸಿಕೊಳ್ಳಲು ಇದು ಸಹಕಾರಿಯಾಗಿದೆ ಎಂದು ಅಭಿಪ್ರಾಯ ಪಟ್ಟರು.
ಹಿರೇಕೆರೂರು ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಪ್ರಾಚಾರ್ಯ ಡಾ. ಎಸ್ ಪಿ ಗೌಡರ ಮಾತನಾಡಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಬೇಕು ನಮ್ಮ ನೆಲ ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಮತ್ತು ಆರೋಗ್ಯವಂತರಾಗಿ ಬಾಳಲು ಪರಿಸರ ಮುಖ್ಯವಾಗಿದೆ ವಿದ್ಯಾಥರ್ಿಗಳು ಶಿಬಿರದ ಸದುಪಯೋಗ ಪಡೆದುಕೊಂಡು ಜೀವನದಲ್ಲಿ ಆದರ್ಶವನ್ನು ಬೆಳೆಸಿಕೊಳ್ಳಲು ಮುಂದಾಗಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ ಪಂ ಆಧ್ಯಕ್ಷರಾದ ಅನ್ನಪೂರ್ಣಮ್ಮ ಎಸ್ ಕುಸಗೂರು ವಹಿಸಿಕೊಂಡಿದ್ದರು, ವೇದಿಕೆಯಲ್ಲಿ ಕರಿಬಸಮ್ಮ ಎಸ್ ಹೆಡಿಯಾಲ, ವಿ ಪಿ ಪೋಲೀಸ ಗೌಡ್ರು , ರಾಮನ ಗೌಡ ಪಾಟೀಲ,ದ್ಯಾಮಪ್ಪ ಜೋಗೆಮ್ಮನವರು, ಬಿ ಎಸ್ ಜಾಪಾಳಿ, ಯೋಗೇಶಪ್ಪ ನಾಡಿಗೆರ, ಹನುಮಂತಗೌಡ ಗಂಗಾಳಿ, ಶಿವಪುತ್ರಪ್ಪ ಸಣ್ಣಮನಿ, ಪಿ ಮುನಿಯಪ್ಪ, ಎಂ ಶಿವಕುಮಾರ, ಬಿ ವಿ ಕುಡುಪಲಿ, ಎಂ ಸಿ ಲಿಂಗದಹಳ್ಳಿ ಮತ್ತಿತರರು ಉಪಸ್ಥಿತರಿದ್ದರು. ಶಭಿರದ ವಿದ್ಯಾಥರ್ಿಗಳು ಪ್ರಾಥರ್ಿಸಿದರು. ಯೋಜನಾಧಿಕಾರಿ ಎಚ್.ಶಿವಾನಂದ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂದಿನಿಂದ ಆರಂಭಗೊಂಡಿರುವ ಶಿಬಿರವು ವಾರಗಳ ಕಾಲ ನಡೆಯಲಿದೆ.