ಶಿಕ್ಷಣ-ಮಾನವತೆ-ಸಂಸ್ಕೃತಿ ಉಳಿಸಿ ಘೋಷಣೆಯೊಂದಿಗೆ ಎರಡನೇ ದಿನಕ್ಕೆ ಕಾಲಿಟ್ಟ ವ್ಯಕ್ತಿತ್ವ ವಿಕಸನ ಶಿಬಿರ
ಬಳ್ಳಾರಿ 06: ಸಮಾಜದಲ್ಲಿ ವಿದ್ಯಾರ್ಥಿಗಳ ಪಾತ್ರ ಏನು ಎಂಬ ಚರ್ಚೆಯನ್ನು ಉದ್ದೇಶಿಸಿ ಮಾತನಾಡಿದ ಂಋಖಓ ರಾಜ್ಯ ಖಜಾಂಚಿಗಳಾದ ಸುಭಾಷ್ ಬೆಟ್ಟದಕೊಪ್ಪ ರವರು, “ಇಂದು ಸಮಾಜದಲ್ಲಿ ಉನ್ನತ ಸಂಸ್ಕೃತಿ- ಮೌಲ್ಯಗಳ ಕೊರತೆ ಇರುವುದಷ್ಟೇ ಅಲ್ಲದೆ, ನಮ್ಮ ಮುಂದೆ ಆದರ್ಶಗಳೇ ಇಲ್ಲದಂತೆ ಸರ್ಕಾರಗಳು ಹುನ್ನಾರ ನಡೆಸುತ್ತಿದೆ. ಸಮಾಜದಲ್ಲಿ ನಾವು ಅನುಭವಿಸುವ ಪ್ರತಿಯೊಂದು ಸೌಲಭ್ಯವು ಈ ಸಮಾಜದಲ್ಲಿನ ಕಾರ್ಮಿಕರ ಶ್ರಮ. ಈ ಸಮಾಜದ ಜವಾಬ್ದಾರಿ ನಮ್ಮ ಹೊಣೆಯಾಗಬೇಕು” ಎಂಬ ಕರೆ ನೀಡಿದರು.
ನಂತರ, ಜಿಲ್ಲಾ ಅಧ್ಯಕ್ಷರಾದ ಕೆ ಈರಣ್ಣ ರವರು ವಿದ್ಯಾರ್ಥಿಗಳ ಉದ್ದೇಶಿಸಿ ಮಾತನಾಡುತ್ತ, “ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವ ಸರ್ಕಾರದ ನಿರ್ಧಾರವನ್ನು ಖಂಡಿಸಿ 50 ಲಕ್ಷ ಸಹಿ ಸಂಗ್ರಹಣೆ ಅಭಿಯಾನಕ್ಕೆ ಕರೆ ನೀಡಿದ್ದು, ಸಾರ್ವಜನಿಕ ಶಿಕ್ಷಣ ಉಳಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಕರೆಯನ್ನು ವಿದ್ಯಾರ್ಥಿಗಳಿಗೆ ನೀಡಿದರು.”
ಈ ಮೂಲಕ ಎರಡು ದಿನದ ಶಿಬಿರವನ್ನು ಮುಕ್ತಾಯಗೊಳಿಸಲಾಯಿತು. ಶಿಬಿರದಲ್ಲಿ ಜಿಲ್ಲಾ ಅಧ್ಯಕ್ಷರಾದ ಕೆ ಈರಣ್ಣ, ಜಿಲ್ಲಾ ಕಾರ್ಯದರ್ಶಿಗಳಾದ ಕಂಬಳಿ ಮಂಜುನಾಥ, ಜಿಲ್ಲಾ ಉಪಧ್ಯಕ್ಷರಾದ ಶಾಂತಿ, ಉಮಾ, ಜಿಲ್ಲಾ ಕಛೇರಿ ಕಾರ್ಯದರ್ಶಿ ಅರ್.ನಿಹಾರಿಕ, ಸದಸ್ಯರು ಸಮೀರ್, ಮೋಹನ್, ಕಾಸಿಮ್, ನವೀನ್ ಹಾಗೂ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಪ್ರತಿನಿಧಿಸಿ ವಿದ್ಯಾರ್ಥಿಗಳು ಶಿಬಿರದಲ್ಲಿ ಉಪಸ್ಥಿತರಿದ್ದರು.