ನವದೆಹಲಿ 17: ಭಾರತ ರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ದತ್ತು ಪುತ್ರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಂತಾಪ ಸೂಚಕ ಪತ್ರ ಬರೆದಿದ್ದು, ಅಟಲ್ ನಿಧನ ನಿಮಗೆ ವೈಯಕ್ತಿಕ ನಷ್ಟ ಎಂದು ಹೇಳಿದ್ದಾರೆ.
ಈ ದುಃಖದ ಗಳಿಗೆಯಲ್ಲಿ ನನ್ನ ಹೃತ್ಪೂರ್ವಕ ಭಾವನೆಗಳು ನಿಮ್ಮ ಮತ್ತು ನಿಮ್ಮ ಕುಟುಂದ ಇತರರೊಂದಿಗೆ ಇರುತ್ತವೆ. ಅಟಲ್ ಜೀ ಸಾವಿನಿಂದ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ವೈಯಕ್ತಿಕ ನಷ್ಟವಾಗಿದೆ ಎಂದು ರಾಷ್ಟ್ರಪತಿಗಳು ತಮ್ಮ ಪತ್ರದ ಮೂಲಕ ಸಂತಾಪ ಸೂಚಿಸಿದ್ದಾರೆ.
ವಾಜಪೇಯಿ ಅವರು ಒಬ್ಬ ಅಪರೂಪದ ಮತ್ತು ಆಧುನಿಕ ಭಾರತದ ರಾಷ್ಟ್ರೀಯ ರಾಜಕಾರಣಿಯಾಗಿದ್ದರು ಎಂದು ರಾಷ್ಟ್ರಪತಿಗಳು ಹೇಳಿದ್ದಾರೆ.