ಲೋಕದರ್ಶನ ವರದಿ
ಬ್ಯಾಡಗಿ01: ಪಟ್ಟಣದ ವಾಲ್ಮೀಕಿ ನಗರದ ವಿವಾಹಿತನೊಬ್ಬ ಶಿಶುನಾಳದ ಗ್ರಾಮಕ್ಕೆ ಹೋಗಿ ಬರುವುದಾಗಿ ತನ್ನ ಮನೆಯಿಂದ ಹೊರ ಹೋದವನು ಇಲ್ಲಿಯವರೆಗೂ ತನ್ನ ಮನೆಗೆ ತಿರುಗಿ ಬಾರದೇ ಕಾಣೆಯಾದ ಘಟನೆ ಜರುಗಿದೆ.
ಕಾಣೆಯಾಗಿರುವನನ್ನು ದುಗ್ಗಪ್ಪ ಈರಪ್ಪ ಒದ್ದಟ್ಟಿ(48) ಎಂದು ಗುತರ್ಿಸಲಾಗಿದೆ. ಇವರು ಜೂ.10 ರಂದು ಮುಂಜಾನೆ 10 ಘಂಟೆಯ ಸುಮಾರಿಗೆ ತನ್ನ ಮನೆಯಿಂದ ಪ್ರತಿ ಅಮವಾಸ್ಯೆಗೆ ಶಿಶುನಾಳ ಗ್ರಾಮಕ್ಕೆ ಹೋಗುವ ರೂಢಿಯಂತೆ ಹೊರ ಹೋದವನು ಇಲ್ಲಿಯವರೆಗೂ ತನ್ನ ಮನೆಗೆ ಬಾರದೇ ಕಾಣೆಯಾಗಿದ್ದಾನೆ, ಅಲ್ಲದೇ ಈತನಿಗೆ ಗಾಂಜಾ ಸೇದುವ ಅಭ್ಯಾಸವಿತ್ತೆಂದು ಅವನ ಹೆಂಡತಿ ಬ್ಯಾಡಗಿ ಪೋಲಿಸ್ ಠಾಣೆಯಲ್ಲಿ, ದೂರು ಸಲ್ಲಿಸಿ ತನ್ನ ಗಂಡನನ್ನು ಹುಡಿಕಿ ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಸ್ಥಳೀಯ ಪೋಲಿಸ್ರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದಾರೆ.
ಕಾಣೆಯಾಗಿರುವ ದುಗ್ಗಪ್ಪ ಈರಪ್ಪ ಒದ್ದಟ್ಟಿ ಮನೆ ಬಿಡುವಾಗ ಬಿಳಿ ಬಣ್ಣದ ತುಂಬು ತೋಳಿನ ಶರ್ಟ, ಬಿಳಿ ಬಣ್ಣದ ಲುಂಗಿಯನ್ನು ಧರಿಸಿರುತ್ತಾನೆ. ಕನ್ನಡ ಭಾಷೆ ಮಾತನಾಡುತ್ತಾನೆ. 5 ಪುಟ 3 ಇಂಚು ಎತ್ತರವಿದ್ದು, ಸಾದಗಪ್ಪು ಮೈಬಣ್ಣ, ಕೋಲುಮುಖ, ಉದ್ದನೇ ಮೂಗು, ದಪ್ಪ ಮೀಸೆ ಸಪೂರ ಮೈಕಟ್ಟು, 2 ಇಂಚು ಉದ್ದನೇ ಕಪ್ಪು ಬಿಳಿ ಮಿಶ್ರೀತ ಬಣ್ಣದ ಕೂದಲು ಹೊಂದಿದ್ದಾನೆ. ಈ ವ್ಯಕ್ತಿ ಯಾರಿಗಾದರೂ ಕಂಡು ಬಂದಲ್ಲಿ ಬ್ಯಾಡಗಿ ಪೋಲಿಸ್ ಠಾಣೆ ನಂಬರ 08375-226633 ಇಲ್ಲವೆ ಹಾವೇರಿಯ ಕಂಟ್ರೋಲ್ ರೂಂ. ನಂಬರ 08375-100 ನಂಬರಿಗೆ ಸಂಪಕರ್ಿಸುವಂತೆ ಕೋರಿದ್ದಾರೆ.