ಬೆಂಗಳೂರು, ಡಿ 19: ಸಂವಿಧಾನ ವಿರೋಧಿ "ಪೌರತ್ವ ತಿದ್ದುಪಡಿ ಕಾಯ್ದೆ'ಯ ವಿರುದ್ಧ ಪ್ರತಿಭಟನೆಯನ್ನು ಹತ್ತಿಕ್ಕುವ ಕ್ರಮವಾಗಿ ರಾಜ್ಯದಾದ್ಯಂತ ಸೆಕ್ಷನ್ 144 ನಿಷೇಧಾಜ್ಞೆ ಹೇರಿರುವುದು ಕೂಡಾ ಸಂವಿಧಾನ ವಿರೋಧಿಯಾಗಿದ್ದು, ಜನರ ಧ್ವನಿಯನ್ನು ಅಡಗಿಸಲು ಬಿಜೆಪಿ ಸರಕಾರದ ಕೈಗೊಂಬೆಯಾಗಿ ಕೆಲಸ ಮಾಡುವ ಕನರ್ಾಟಕ ಪೊಲೀಸ್ ಅಧಿಕಾರಿಗಳ ಪ್ರಯತ್ನ ಎಂದೂ ಸಫಲವಾಗದು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾಟರ್ಿ ಆಫ್ ಇಂಡಿಯಾ (ಎಸ್ಡಿಪಿಐ) ಪ್ರತಿಕ್ರಿಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ, ದೇಶವನ್ನು ಧರ್ಮ-ಜಾತಿಯ ಆಧಾರದಲ್ಲಿ ಒಡೆದು ಆಳುವ ನೀತಿಯನ್ನು ತಮ್ಮದಾಗಿಸಿಕೊಂಡು ರಾಜಕೀಯದ ಮೂಲಕ ಅಧಿಕಾರದಲ್ಲಿರುವ ಬಿಜೆಪಿ ತಮ್ಮ ದಯನೀಯ ವೈಫಲ್ಯ, ಪಾತಾಳಕ್ಕೆ ಕುಸಿದ ಆಥರ್ಿಕತೆ, ಅವ್ಯಾಹತವಾಗಿ ನಡೆಯುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರ ಇತ್ಯಾದಿಗಳನ್ನು ಜನರ ಮನಸ್ಸಿನಿಂದ ಬೇರೆಡೆಗೆ ಸೆಳೆಯಲು ಅನೇಕ ಭಾವನಾತ್ಮಕ ವಿಷಯಗಳನ್ನು ಬಳಕೆ ಮಾಡುತ್ತಿದೆ. ಅದರ ಭಾಗವಾಗಿ ದೇಶದ ಹಿತಾಸಕ್ತಿಗೆ ಕೊಳ್ಳಿ ಇಟ್ಟು ಇಂತಹ ಘೋರ ಪೌರತ್ವ ಕಾಯ್ದೆಯನ್ನು ಜಾರಿಗೆ ತರುತ್ತಿದೆ. ಇಂತಹ ದೇಶ ವಿರೋಧಿ ಹೆಜ್ಜೆಗಳನ್ನು ಖಂಡಿಸುವುದು, ಪ್ರತಿಭಟಿಸುವುದು ಭಾರತದ ಪ್ರಜೆಗಳ ಕರ್ತವ್ಯ ಹಾಗೂ ಮೂಲಭೂತ ಹಕ್ಕಾಗಿರುತ್ತದೆ ಎಂದರು.
ಆದರೆ, ಪ್ರಜೆಗಳ ಸಾಂವಿಧಾನಿಕ ಹಕ್ಕುಗಳನ್ನು ಕಿತ್ತುಕೊಳ್ಳುವ ಅಧಿಕಾರವನ್ನು ದೇಶದ ಸಂವಿಧಾನವಾಗಲೀ ಕಾನೂನಾಗಲೀ ಪೊಲೀಸರಿಗೆ ನೀಡಿಲ್ಲ. ಪ್ರತಿಭಟನೆಗೆ ನಿಷೇಧಾಜ್ಞೆ ಹೇರುವುದರಿಂದ ಪ್ರಜೆಗಳ ಮನಸ್ಸಿನಲ್ಲಿರುವ ಪ್ರತಿಭಟನಾ ಅಭಿಪ್ರಾಯಗಳನ್ನು ಹತ್ತಿಕ್ಕಲಾಗುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಯದೇ ಹೋದರೆ? 'ಪ್ರತಿಭಟಿಸುವವರು ಉತ್ತರ ಭಾರತಕ್ಕೆ ಹೋಗಲಿ' ಎಂದು ಹೇಳಿದ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ರ ಧೋರಣೆಯನ್ನು ಎಸ್ಡಿಪಿಐ ಬಲವಾಗಿ ಖಂಡಿಸುತ್ತದೆ. ಇಂತಹ ದಾಷ್ಟ್ರ್ಯದ ಮಾತುಗಳು ಹಿರಿಯ ಅಧಿಕಾರಿಗಳಿಗೆ ಎಂದೆಂದೂ ಶೋಭಿಸುವುದಿಲ್ಲ. ಅವರ ವರ್ತನೆಗಳು, ಮಾತುಗಳು ಇನ್ನಷ್ಟು ಆತಂಕವನ್ನು ಹುಟ್ಟು ಹಾಕುತ್ತಿದೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಆರೆಸ್ಸೆಸ್ ಮುಖಂಡ ಪ್ರಭಾಕರ ಭಟ್ನ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದ ಬಾಬರಿ ಮಸ್ಜಿದ್ ಧ್ವಂಸ ಅಣುಕು ಪ್ರದರ್ಶನದಲ್ಲಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದರು. ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ ಬೇಡಿ ಕೂಡಾ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಶ್ಲಾಘಿಸಿದ್ದಾರೆ. ಕೋಮುದ್ವೇಷ, ಹಿಂಸೆ, ಹಗೆತನವನ್ನು ಉದ್ದೀಪಿಸುವ ಇಂತಹ ಕೃತ್ಯಗಳು ಎಳೆಯ ವಿದ್ಯಾಥರ್ಿಗಳ ಮನಸ್ಸಿನಲ್ಲಿ ಕೋಮು ವಿಷವನ್ನು ತುಂಬಿಸುತ್ತದೆ. ಇಂತಹ ಕಾರ್ಯಕ್ರಮಗಳಿಗೆ ಪೊಲೀಸರು ಅನುಮತಿ ನೀಡಿರುವುದು ಅತ್ಯಂತ ಆಶ್ಚರ್ಯಕರ ಹಾಗೂ ಪೊಲೀಸರು ಶಾಮೀಲಾಗಿರುವುದು ಬೇಲಿಯೇ ಹೊಲ ಮೇಯ್ದಂತಾಗಿದೆ ಎಂದು ಟೀಕಿಸಿದರು.
ಡಿ.6ರಂದು ಅದೇ ಕಲ್ಲಡ್ಕದಲ್ಲಿ ಕರಸೇವಕರಿಗೆ ಸನ್ಮಾನ ಕಾರ್ಯಕ್ರಮ ನಡೆಸಿರುವುದು ಕೂಡಾ ಪೊಲೀಸರ ಸುಪದರ್ಿಯಲ್ಲಿ. ಅದೇ ದಿನ ಮಂಗಳೂರು ನಗರದಲ್ಲಿ ಎಸ್ಡಿಪಿಐ ಪಕ್ಷಕ್ಕೆ ಪತ್ರಿಕಾಗೋಷ್ಠಿ ನಡೆಸಲು ಬಿಡದಿರುವುದು ಕೂಡಾ ಹೇಗೆ ಪೊಲೀಸ್ ಇಲಾಖೆಯಲ್ಲಿ ಧಮರ್ಾಧಾರಿತ ತಾರತಮ್ಯ ನಡೆಯುತ್ತಿದೆ ಎಂದು ಸ್ಪಷ್ಟವಾಗುತ್ತಿದೆ ಎಂದು ಹೇಳಿದರು.
ಸಂವಿಧಾನ ವಿರೋಧಿ, ಜನವಿರೋಧಿ ಹಾಗೂ ಜಾತ್ಯಾತೀತ ವಿರೋಧಿ ಧೋರಣೆ- ಕ್ರಮಗಳನ್ನು ಕೈಗೊಳ್ಳುವ ಬಿಜೆಪಿ ಸರಕಾರಗಳು ಹಾಗೂ ಜನರ ಧ್ವನಿಯನ್ನು ಮತ್ತು ಹಕ್ಕನ್ನು ಹತ್ತಿಕ್ಕುವ ಪೊಲೀಸ್ ಅಧಿಕಾರಗಳ ವಿರುದ್ಧ ಎಸ್ಡಿಪಿಐ ತನ್ನ ಹೋರಾಟವನ್ನು ಮುಂದುವರಿಸುತ್ತದೆ ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದಶರ್ಿ ಅಬ್ದುಲ್ ಹನ್ನಾನ್, ರಾಜ್ಯ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ಉಪಾಧ್ಯಕ್ಷರು, ಹೆಚ್. ಗಂಗಪ್ಪ, ಬೆಂಗಳೂರು ಜಿಲ್ಲಾಧ್ಯಕ್ಷ ಶರೀಫ್ ಮತ್ತಿತರರು ಪಾಲ್ಗೊಂಡಿದ್ದರು.