ನವದೆಹಲಿ, ಮೇ ೨,ಈ ತಿಂಗಳ ನಾಲ್ಕರಿಂದ ಆರಂಭಗೊಳ್ಳಲಿರುವ ಮೂರನೇ ಹಂತದ ಲಾಕ್ ಡೌನ್ ಅವಧಿಯಲ್ಲಿ ಮತ್ತಷ್ಟು ಚಟುವಟಿಕೆ ನಡೆಸಲು ಕೇಂದ್ರ ಗೃಹ ಸಚಿವಾಲಯ ಅವಕಾಶ ಕಲ್ಪಿಸಿದೆ. ದೇಶಾದ್ಯಂತ ಕೆಂಪು ಪ್ರದೇಶಗಳನ್ನು ಹೊರತುಪಡಿಸಿ ಹಸಿರು ಹಾಗೂ ಕಿತ್ತಳೆ ಪ್ರದೇಶಗಳಲ್ಲಿ ಕ್ಷೌರದ ಅಂಗಡಿ, ಸೆಲೂನ್ ತೆರೆಯಬಹುದು ಎಂದು ಶನಿವಾರ ಪ್ರಕಟಿಸಿದೆ. ಇದರೊಂದಿಗೆ ಈ- ವಾಣಿಜ್ಯ ವೇದಿಕೆಗಳ ಮೂಲಕ ಎಲ್ಲ ರೀತಿಯ ವಸ್ತುಗಳ ಮಾರಾಟಕ್ಕೂ ಹಸಿರು ನಿಶಾನೆ ತೋರಿಸಿದೆ.ದೇಶಾದ್ಯಂತ ಲಾಕ್ ಡೌನ್ ಈ ತಿಂಗಳ ೧೭ರವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿತ್ತು. ಇದರೊಂದಿಗೆ ಕಿತ್ತಳೆ ಹಾಗೂ ಹಸಿರು ವಲಯಗಳಲ್ಲಿ ಮತ್ತಷ್ಟು ಚಟುವಟಿಕೆ ನಡೆಸಲು ಅನುಮತಿ ನೀಡಿದೆ.
ಗ್ರೀನ್ ಜೋನ್ ನಲ್ಲಿ....
*೫೦ ಸೀಟು ಸಾಮರ್ಥ್ಯದ ಬಸ್ಸುಗಳ ಸಂಚಾರಕ್ಕೆ ಅವಕಾಶ. ಶೇ. ೫೦ ರಷ್ಟು ಸಿಬ್ಬಂದಿಯೊಂದಿಗೆ ಬಸ್ ಡಿಪೋಗಳು ಕಾರ್ಯನಿರ್ವಹಿಸಬಹುದು.
* ದೇಶಾದ್ಯಂತ ನಿಷೇಧಿಸಿದ ಚಟುವಟಿಕೆ ಹೊರತುಪಡಿಸಿ ಎಲ್ಲ ರೀತಿಯ ಚಟುವಟಿಕೆ ನಡೆಸಲು ಅವಕಾಶ ಕಲ್ಪಿಸಲಾಗಿದೆ.
* ವೈರಸ್ ಹರಡುವುದನ್ನು ನಿಯಂತ್ರಿಸಲು ಈ ವಲಯಗಳಲ್ಲಿ ಆಯ್ದ ಚಟುವಟಿಕೆಗಳಿಗೆ ಅನುಮತಿಸಲು, ಸ್ಥಳೀಯ ಪರಿಸ್ಥಿತಿಗಳನ್ನು ನಿಯಂತ್ರಿಸಲು ರಾಜ್ಯಗಳು ಪೂರ್ಣ ಅಧಿಕಾರ ಹೊಂದಿವೆ.
ಕಿತ್ತಳೆ ವಲಯಗಳಲ್ಲಿ ..
(ನಿರ್ಬಂಧ ವಲಯಗಳ ಹೊರಗೆ)
* ಜಿಲ್ಲೆಯ ಒಳಗಡೆ, ಜಿಲ್ಲೆಗಳ ನಡುವೆ ಬಸ್ ಗಳ ಸಂಚಾರ ಅವಕಾಶವಿಲ್ಲ.
* ಟ್ಯಾಕ್ಸಿಗಳು, ಕ್ಯಾಬ್‌ಗಳಲ್ಲಿ ಒಬ್ಬ ಚಾಲಕ ಮತ್ತು ಇಬ್ಬರು ಪ್ರಯಾಣಿಕರಿಗೆ ಮಾತ್ರ ಅವಕಾಶವಿದೆ.
* ಅನುಮತಿಸಿದ ಚಟುವಟಿಕೆಗಳಿಗಾಗಿ ಖಾಸಗಿ ವಾಹನಗಳು ಜಿಲ್ಲೆಗಳ ನಡುವೆ ಸಂಚರಿಸಬಹುದು.