ವಿವಿಧ ಕ್ರೀಡಾಕೂಟಗಳಲ್ಲಿ ಸಾಧನೆ


ಲೋಕದರ್ಶನ ವರದಿ

ಶಿರಹಟ್ಟಿ 14: ಪಟ್ಟಣದ ಎಸ್.ಎಫ್.ಸಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾಥರ್ಿಗಳು ಭಾಗವಹಿಸಿ ವಿವಿಧ ಹಂತದ ಕ್ರೀಡೆಗಳಲ್ಲಿ  ಬಹುಮಾನವನ್ನು ಪಡೆದು ಸಾಧನೆ ಮಾಡಿದ್ದಾರೆ.

ಇತ್ತೀಚೆಗೆ ಚಾಮುಂಡಿ ವಿಹಾರ್ ಕ್ರಿಡಾಂಗಣದಲ್ಲಿ ಅಭಿವೃದ್ದಿ ಪೌಂಡೆಷನ್ ಇವರ ಸಹಯೊಗದಲ್ಲಿ ನಡೆದ  ಕ್ರೀಡಾಕೂಟದಲ್ಲಿ ವಯಕ್ತಿಕ ವಿಭಾಗದಲ್ಲಿ ಆನಂದ ಚೌಹಾಣ 17 ವರ್ಷದೊಳಗಿನ ವಿಭಾಗದ 9ನೇ ತರಗತಿ ವಿಧ್ಯಾಥರ್ಿ 800 ಮೀಟರ್ ಓಟದಲ್ಲಿ ಚಿನ್ನದ ಪದಕವನ್ನು ಪಡೆದಿರುತ್ತಾನೆ, ಅಫತಾಬ ಮುಜಾವರ 17 ವರ್ಷದೊಳಗಿನ 10 ನೇತರಗತಿಯ ವಿಧ್ಯಾಥರ್ಿ 400 ಮೀಟರ್ ಓಟದಲ್ಲಿ ಬೆಳ್ಳಿಯ ಪದಕವನ್ನು ಪಡೆದಿರುತ್ತಾನೆ ಹಾಗೂ 17 ವರ್ಷದೊಳಗಿನ ವಿಭಾಗದ ವಿಧ್ಯಾಥರ್ಿಗಳ ಥ್ರೋಬಾಲ್ ವಿಭಾಗದಲ್ಲಿ ಶಾಲೆಯ ವಿಧ್ಯಾಥರ್ಿಗಳು ಪ್ರಥಮ ಸ್ಥಾನವನ್ನು ಪಡೆದು ಚಿನ್ನದ ಪದಕಗಳನ್ನು ತಮ್ಮ ಕೊರಳಿಗೆ ಹಾಕಿಕೊಂಡಿದ್ದಾರೆ.

  14 ವರ್ಷದೊಳಗಿನ ವಿಧ್ಯಾರ್ಥಿಗಳ ಕಬ್ಬಡ್ಡಿಯಲ್ಲಿ ಬೆಳ್ಳಿಯ ಪದಕವನ್ನು ಪಡೆದಿರುತ್ತಾರೆ, ಎಲ್ಲಾ ವಿಜೇತರಿಗೆ ಸಂಸ್ಥೆಯ ಸಂಸ್ಥಾಪಕ ಚಂದ್ರಕಾಂತ ನೂರಶೆಟ್ಟರ ಅಭಿನಂದನೆಗಳನ್ನು ಸಲ್ಲಿಸಿದರು ಹಾಗೂ ವಿಜೇತರನ್ನು ಕುರಿತು ಕ್ರೀಡಾಕೂಟದಲ್ಲಿ  ಭಾಗವಹಿಸಿ ನಮ್ಮ ಸಂಸ್ಥೆಗೆ ಬಹುಮಾನವನ್ನು ತಂದಿರುವ ಎಲ್ಲಾ ವಿಧ್ಯಾಥರ್ಿಗಳು ಮುಂದಿನ ಹಂತದ ಕ್ರೀಡೆಗಳಲ್ಲಿ ಭಾಗವಹಿಸಿ ಇದೇ ರೀತಿ ಬಹುಮಾನವನ್ನು ಪಡೆದುಕೊಂಡು ಬರಲಿ ಎಂದು ತಿಳಿಸಿದರು ಹಾಗೂ ದೈಹಿಕ ಶಿಕ್ಷಕರಾದ ಪ್ರವೀಣ.ಎಸ್ ಹಾಗೂ  ವಿಜ್ಞಾನ ಶಿಕ್ಷಕರಾದ ಏಕಾಂತ್ ಸಿ. ಇವರ ಮಾರ್ಗದರ್ಶನದಲ್ಲಿ ವಿಧ್ಯಾರ್ಥಿಗಳು  ಸಾಧನೆ ಮಾಡಿರುವದಕ್ಕೆ ಅಭಿನಂದನೆಗಳನ್ನು ತಿಳಿಸಿದರು ಮತ್ತು    ಮುಖ್ಯೋಪಾದ್ಯಾಯರಾದ ಸಂತೋಷಕುಮಾರ ಎಸ್. ಜಿ. ಇವರು ವಿಜೇತರಾದ ಕ್ರಿಡಾಪಟುಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು ಮತ್ತು ಎಲ್ಲಾ ಶಿಕ್ಷಕರು ಮತ್ತು ಶಿಕ್ಷಕಿಯರು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು  ವಿಜೇತರಾದ ಕ್ರಿಡಾಪಟುಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು.