ರಾಯಬಾಗ 31: ಮಹಾರಾಷ್ಟ್ರದ ಪುಣೆಯ ಅಝಮ್ ಕ್ಯಾಂಪಸ್‌ದಲ್ಲಿ ಇತ್ತೀಚಿಗೆ ಜರುಗಿದ ಆಲ್ ಇಂಡಿಯಾ ಪಿ.ಎ.ಐ ರೊಬೊ ಚಾಂಪಿಯನಶಿಪ್ ದಲ್ಲಿ ರಾಯಬಾಗ ಪಟ್ಟಣದ ಇಕ್ರಾ ಉರ್ದು ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳಾದ ಮುಂತೆಜೀಮ್ ಮೊಮಿನ, ಜಾಸ್ಮೀನ ಡೊಂಗರೆ, ಆಸಿಫಾ ಮೊಮಿನ, ಮುನೇಜಾ ಮುಜಾವರ, ಆರ್ಫಿಯಾ ಅಂಕಲೆ ಭಾಗವಹಿಸಿದ್ದರು. ಪುಣೆಯ ಎಮ್.ಸಿ.ಇ.ಸೊಸೈಟಿಯ ಅಧ್ಯಕ್ಷ ಡಾ.ಪಿ.ಎ.ಇನಾಮದಾರ ಪ್ರಶಸ್ತಿ ವಿತರಿಸಿದರು.
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಸುನಂದಾ ಭೋಸಲೆ, ಅಬೇದಾ ಇನಾಮದಾರ, ಇಕ್ರಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಜಿ ಮುಲ್ಲಾ, ರೇವತಿರಾಜ್, ಅಜಮಲಖಾನ ಪಠಾಣ, ಪರ್ವೇಜ ಪಠಾಣ, ಸನಾ ಪಿರಜಾದೆ, ಆದಿಲ್ ಮುಲ್ಲಾ, ಕೈಫ್ ಖಾಜಿ ಇದ್ದರು.