ಲೋಕದರ್ಶನ ವರದಿ
ರಾಮದುರ್ಗ: ತಾಲೂಕಿನ ಚಂದರಗಿಯ ಕ್ರೀಡಾ ವಸತಿ ಶಾಲೆಯ ಆಟ್ಯಾ ಪಾಟ್ಯಾ ತಂಡವು ಗದಗ ಜಿಲ್ಲೆ ರೋಣ ತಾಲೂಕಿನ ಅಬ್ಬೀಗೇರಿಯಲ್ಲಿ ನಡೆದ ರಾಜ್ಯ ಮಟ್ಟದ ಆಟ್ಯಾ ಪಾಟ್ಯಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಉತ್ತಮ ಸಾಧನೆ ತೋರಿ ಸಬ್ ಜೂನೀಯರ್ ಮತ್ತು ಜ್ಯೂನೀಯರ್ ಎರಡೂ ವಿಭಾಗಗಳಲ್ಲಿ ಸತತ 7ನೇ ಬಾರಿಗೆ ಬಂಗಾರದ ಪದಕವನ್ನು ಜಯಿಸಿದ್ದಾರೆ. ರಾಜ್ಯ ಆಟ್ಯಾ ಪಾಟ್ಯಾ ಅಶೋಸಿಯೇಶ್ನ ಈ ಕ್ರೀಡಾಕೂಟವನ್ನು ಸಂಘಟಿಸಿತ್ತು.
ಉತ್ತಮ ಸಾಧನೆಗೈದ ಸಬ್ ಜೂನೀಯರ್ ವಿದ್ಯಾಥರ್ಿಗಳಾದ ಶಿವಾನಂದ ಮಾಳಿ, ಸತೀಶ ಲಮಾಣಿ, ಸಂವೇಗ ಗಿರಿಗೌಡ್ರ, ರಾಘವೇಂದ್ರ ಕುಂಟೀರಪ್ಪಗೋಳ, ಪವನ ಮಾಯನ್ನವರ, ಮಂಜುನಾಥ ಹಿರೇಹೊಳಿ, ಸೃಜನ ಬಿರಾದಾರ, ಅಭಿಲಾಶ ಹಿರೇಮಠ, ಸಂಗಮೇಶ ಅಂಗಡಿ, ಅಜಿತ ಪುಂಜಗ, ಆದಿನಾಥ ಪಾಟೀಲ ಹಾಗೂ ಜೂನೀಯರ್ ವಿಭಾಗದ ವಿದ್ಯಾಥರ್ಿಗಳಾದ ಪ್ರದೀಪಗೌಡ ಪಾಟೀಲ, ರಾಜು ಲಮಾಣಿ, ಯಾಶೀನ ಅಕ್ಕೀವಾಟ, ರಮೇಶ ಹುಲಮನಿ, ಧನರಾಜ ಯರಗಟ್ಟಿ, ಹರೀಶ ಚಲವಾದಿ, ಆದಿತ್ಯ ಸಿಂಗಿ, ಅಭಿಷೇಕ ಲಮಾಣಿ, ಶಿವರಾಜ ಚನ್ನಾ, ರಾಜಶೇಖರ ಚಲವಾದಿ, ರಾಮಕೃಷ್ಣ ಪತ್ತಾರ, ಸೋಮಶೇಖರ ಮೇಲಿನಕೇರಿ ಹಾಗೂ ತರಬೇತಿ ನೀಡಿದ ಎಲ್ ಸಿ ಲಮಾಣಿ ಅವರನ್ನು ಸಂಸ್ಥೆಯ ಸಂಸ್ಥಾಪಕರು, ಅಧ್ಯಕ್ಷರು, ಉಪಾಧ್ಯಕ್ಷರು, ನಿದರ್ೇಶಕರು, ಪ್ರಾಚಾರ್ಯರು, ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.