ಮೂಡಲಗಿ 28: ವ್ಯಕ್ತಿತ್ವ ಸರಿಯಾಗಿದ್ದರೆ ಮಾತ್ರ ಸಾಧನೆ ಸಾಧಿಸಬಹುದು ಇಂದು ವಿಧ್ಯಾಥರ್ಿಗಳು ಮೋಬೈಲದಿಂದ ದೂರವಿದ್ದು ಕ್ಷಣಿಕ ಮೋಜಿನ ಜೀವನಕ್ಕೆ ಆಶೆ ಪಟ್ಟದೆ ನಾವು ಶಾಸ್ವತ ಸುಖದಂತ ಮುಖ ಮಾಡಿದಾಗ ಮಾತ್ರ ಜೀವನದಲ್ಲಿ ಎಲ್ಲ ಸೌಭಾಗ್ಯಗಳನ್ನು ಪಡೆಯಬಹುದು ಎಂದು ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಸಂಗಮೇಶ ಕುಂಬಾರ ಹೇಳಿದರು
ಅವರು ವಿವೇಕಾನಂದ ಕೇರಿಯರ ಅಕಾಡಮಿ ಮತ್ತು ಕರುನಾಡು ಸೈನಿಕ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದ ಶ್ರೀಶೈಲ ದಾಸನ್ನವರ ಇತ್ತಿಚೆಗೆ ಸೈನ್ಯದಲ್ಲಿ ನೌಕರ ಪಡೆದ ಪ್ರಯುಕ್ತ ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು
ರೈತ ಮತ್ತು ಸೈನಿಕ ಈ ದೇಶದ ಎರಡು ಕಣ್ಣು, ಅವರು ದುಡಿದರೆ ಮಾತ್ರ ನಾವು ನೇಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯ. ಆದರಿಂದ ಪ್ರತಿಯೋಬ್ಬರಲ್ಲಿ ದೇಶ ಪ್ರೇಮ ಮೂಡಬೇಕು ಎಂದರು ಕರುನಾಡ ಸೈನಿಕ ತರಬೇತಿ ಕೇಂದ್ರದ ಸಂಸ್ಥಾಪಕ ಶಂಕರ ತುಕ್ಕನ್ನವರ ಅಧ್ಯಕ್ಷತೆ ವಹಿಸಿ ಮಾತನಾಡಿ , ವಿದ್ಯಾಥರ್ಿಗಳು ವಿದ್ಯಾಬ್ಯಾಸದ ಅವಧಿಯಲ್ಲಿ ಕೇವಲ ಶಿಕ್ಷಣದ ಮೇಲೆ ಮಾತ್ರ ಕೇಂದ್ರಿಕೃತರಾಗಬೇಕು. ನಾವು ತಂದೆ ತಾಯಿಯನ್ನು ಎತ್ತರ ಸ್ಥಾನದಲ್ಲಿರು ವ್ಯಕ್ತಿಗಳ ಜೊತೆಗೆ ಹೋಲಿಕೆ ಮಾಡಿಕೊಂಡು ಅವರನ್ನು ಸಮಾಜ ಗೌರವಿಸುವಂತಾ ಕಾರ್ಯ ನಾವು ಮಾಡಿದಾಗ ಮಾತ್ರ ಅವರು ನಿಮಗೆ ಜನ್ಮ ನೀಡಿದ್ದು ಸ್ವಾರ್ಥಕ, ತಂದೆ ತಾಯಿಯ ಕಷ್ಟು ಪಟ್ಟು ದುಡಿದ ಹಣದ ಮೌಲ್ಯ ಅರಿತಾಗ ನಮಗೆ ಸಾಧಿಸುವ ಛಲ ಮೂಡುತ್ತದೆ,
ಭೂಮಿಕಾ ಮುಧೋಳ ಮತ್ತು ವಿಧ್ಯಾಥರ್ಿ ಬೆಳ್ಳಿ ಮಾತನಾಡಿ ಅಕಾಡೆಮಿ ಕುರಿತು ಅನಿಸಿಕೆ ಹಂಚಿಕೊಂಡರು
ವಿವೇಕಾನಂದ ಕೇರಿಯರ ಅಕಾಡಮಿಯ ಸಂಸ್ಥಾಪಕ ನಾಯ್ಯವಾದಿ ಆನಂದ ಗೀರೆನ್ನವರ, ಬಾಗಲಕೋಟದ ಗೋಗ್ಯಾಸ ಕಂಪನಿಯ ರಂಜಿತ ಶೆಟ್ಟಿ, ಪತ್ರಕರ್ತ ಶಿವಾನಂದ ಮುಧೋಳ ವೇದಿಕೆಯ ಮೇಲಿದ್ದರು ಸೋಮು ಕಂಟಿಕಾರ ಸ್ವಾಗತಿಸಿದರು, ಅಪರ್ಿತಾ ಜೇನಕಟ್ಟಿ ನೀರೂಪಿಸಿದರು, ಗಣೇಶ ಯಂಡಿಗೇರ ವಂದಿಸಿದರು,