ಮೋಳೆ 29: ಹೆತ್ತ ತಂದೆ ತಾಯಿ ಜನ್ಮಕೊಟ್ಟು, ಶಿಕ್ಷಣ ಕಲಿಸಿ ದೊಡ್ಡವನನ್ನಾಗಿ ಮಾಡಿದರೆ, ಆರ್.ಎಸ್.ಎಸ್ ದೇಶ ಪ್ರೇಮ, ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಸಿಕೊಟ್ಟಿದೆ, ಅಂಥ ರಾಷ್ಟ್ರೀಯ ಸ್ವಯಂ ಸೇವಾ ಸಂಘದಲ್ಲಿ ಕೆಲಸ ಮಾಡಿದ್ದು, ನನ್ನ ಕಾರ್ಯವೈಖರಿಯನ್ನು ಕಂಡು ನನಗೆ ಗೊತ್ತಿಲ್ಲದೆ ಕರ್ನಾಟಕ ಲೋಕಸೆವಾ ಆಯೋಗದ(ಕೆಪಿಎಸ್.ಸಿ) ಸದಸ್ಯನನ್ನಾಗಿ ನೇಮಕ ಮಾಡಿದ್ದಾರೆ. ಅವರ ವಿಶ್ವಾಸಕ್ಕೆ ಚ್ಯೂತಿ ಬಾರದ ಹಾಗೆ ಕಾರ್ಯನಿರ್ವಹಿಸುವುದಾಗಿ ವಿಜಯಕುಮಾರ ಕುಚನೂರೆ ಹೇಳಿದರು.
ರವಿವಾರ ದಿ. 29 ರಂದು ಐನಾಪುರ ಪಟ್ಟಣದಲ್ಲಿ ಬೆಳಗವಾವಿ ವಿಭಾಗೀಯ 8 ನೇ ಜೈನ ಶಿಕ್ಷಕರ ಸಮಾವೇಶ 2019 ಮತ್ತು ಶ್ರೀ ಜ್ಞಾನೇಶ್ವರ ಆದರ್ಶ ಶಿಕ್ಷಕ ಪ್ರಶಸ್ತಿ, ವೃಷಭಶ್ರೀ ಮತ್ತು ಬ್ರಾಹ್ಮಿಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿಜಯಕುಮಾರ ಕುಚನೂರೆಯವರು ವೃಷಭಶ್ರೀ ಸ್ವೀಕರಿಸಿ ಮಾತನಾಡುತ್ತ ಮನಸ್ಸಿನಲ್ಲಿ ಕಲ್ಮಶ ತುಂಬಿದ ಮನುಷ್ಯನ ಮುಖದಲ್ಲಿ ಸದಾ ದ್ವೇಷ,ಅಸೂಯೆ, ಕೋಪ ತುಂಬಿರುತ್ತದೆ. ಆದರೆ ಹೃದಯವಂತನ ಮುಖದಲ್ಲಿ ನಗು, ತಾಳ್ಮೆ, ಕರುಣೆ, ಪ್ರೀತಿ, ತುಂಬಿರುತ್ತದೆ. ಜೀವಿಥಾವದಿಯಲ್ಲಿ ಉತ್ತಮ ಕಾರ್ಯ ಮಾಡುವ ಮೂಲಕ ಪರಮಾತ್ಮನ ಅನುಗ್ರಹ ಪಡೆದುಕೊಂಡು ಪುನಿತರಾಗಬೇಕೆಂದ ಅವರು ಹುಟ್ಟುರಿನಲ್ಲಿ ನನಗೆ ಸನ್ಮಾನ ಮಾಡುತ್ತಿರುವುದು ಖುಷಿ ತಂದಿದೆ ಎಂದರು. ಕರೆ ನೀಡಿದರು
ಕಾಗವಾಡ ಕ್ಷೇತ್ರಶಿಕ್ಷಣಾಧಿಕಾರಿ ಎ.ಎಸ್.ಜೋಡಗೇರಿ ಮಾತನಾಡಿ ಜಗತ್ತಿನ ಎಲ್ಲ ವೃತ್ತಿಗಳಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿ. ಅದಕ್ಕಾಗಿ ಶಿಕ್ಷಕರನ್ನು ಗುರುವಿಗೆ ಹೋಲಿಸಿದ್ದಾರೆ. ಇಂಥ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು. ಅಹಿಂಸಾ ಪರಮೋಚ ಧರ್ಮ ಎಂಬ ಜೈನ ಮುನಿಗಳ ಸಂದೇಶ ಇಡೀ ವಿಶ್ವಕ್ಕೆ ಮಾದರಿಯಾಗಿದ್ದು, ತಾವುಗಳೆಲ್ಲ ಅಹಿಂಸಾ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಕೊಂಡು ಪುನಿತರಾಗುವಂತೆ ಕರೆ ನೀಡಿದರು.
ಪ್ರಶಸ್ತಿ ಪ್ರಧಾನ: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಸದಸ್ಯರಾರ ವಿಜಯಕುಮಾರ ಕುಚನೂರೆಯವರಿಗೆ ವೃಷಭಶ್ರೀ ಪ್ರಶಸ್ತಿ ಪ್ರಧಾನ, ನಿವೃತ್ ಪ್ರಾಚಾರ್ಯ ಬ್ರಾಹ್ಮಿಲಾ ಮದನ್ ಇವರಿಗೆ ಬ್ರಾಹ್ಮಿಶ್ರೀ ಪ್ರಶಸ್ತಿ ಪ್ರಧಾನ, ಕಾಗವಾಡ ಹಾಗೂ ಚಿಕ್ಖೋಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಎಸ್.ಜೋಡಗೇರಿ ಹಾಗೂ ಬಿ.ಎ.ಮೇಕನಮರಡಿ ಇವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ, ಆದರ್ಶ ಶಿಕ್ಷಕ ದಂಪತಿ ಪ್ರಶಸ್ತಿಗಳನ್ನು ನಿವೃತ್ ಶಿಕ್ಷಣಾಧಿಕಾರಿ ಮಹಾವೀರ ಮಾಲಗಾಂವೆ, ಹಾಗೂ ಡಯಟ್ನ ಉಪನ್ಯಾಸಕ ರಾಜೇಂದ್ರ ತೇರದಾಳ, ಅಶೋಕ ಚೌಗುಲಾ, ಎಸ್.ಎ.ಪಾಟೀಲ, ಎಸ್.ಬಿ.ಕರವ, ಸಿ.ಪಿ.ಹಚ್ಚಿಬಟ್ಟಿ, ಬಾಬಾಸಾಬ ಗಣಿ, ಹಣಮಂತ ಶಿರಹಟ್ಟಿ, ನೇಹಾ ಪಾಟೀಲ, ಇವರಿಗೆ ಪ್ರಧಾನ ಹಾಗೂ ಸತ್ಕರಿಸಲಾಯಿತು. ಬೆಳಗಾವಿ ವಿಭಾಗದಲ್ಲಿ 24 ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಈದೇ ವೇಳೆ ಜರುಗಿತು.
ಪಾವನ ಸಾನಿದ್ಯವನ್ನು 108 ಜ್ಞಾನೇಶ್ವರ ಮುನಿ ಮಹಾರಾಜರು ವಹಿಸಿ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಸುನೀಲ ಪಾಟೀಲ ವಹಿಸುವರು, ಮುಖ್ಯ ಅತಿಥಗಳಾಗಿ ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ, ಸಿದ್ದು ಆಗೂರ, ಕರ್ನಾಟಕ ಜೈನ ಅಸೋಸಿಯನ್ನ ಸದಸ್ಯರಾದ ಎ,ಸಿ.ಪಾಟೀಲ, ರಾಜ್ಯ ಎಂಜನೀಯರ ಸಂಘದ ಉಪಾದ್ಯಕ್ಷ ಅರುಣಕುಮಾರ ಯಲಗುದ್ರಿ, ಅಶೋಕ ಜೈನ, ಸಿ.ಎಂ.ಸಾಂಗಲಿ, ಕುಂತಿನಾಥ ಕಲಮನಿ, ಪ್ರಾ. ಕುಮಾರ ಮಾಲಗಾಂವೆ, ಶಾಂತಿನಾಥ ಮೆಳವಂಕಿ, ಭರತ ಶಿರಹಟ್ಟಿ, ಉಪಸ್ಥಿತರಿದ್ದರು. ಸಂಘಟಕರಾದ ಸಂಜಯ ಕುಚನೂರೆ, ಯಶವಂತ ಪಾಟೀಲ ಶಾಂತಿನಾಥ ಉಗಾರೆ, ಶಾಂತಿನಾಥ ಮಾನಗಾಂವೆ, ಮಹಾವೀರ ಶಿರಗಾಂವೆ, ದಾದಾ ಪಾಟೀಲ ಸೇರಿದಂತೆ ಅನೇಕರು ಇದ್ದರು.