ಪ್ರಯೋಗಾತ್ಮಕ ವಿಜ್ಞಾನದ ಕಲಿಕೆಯಿಂದ ಕಾರ್ಯ ಸಾಧನೆ: ಕೊಳ್ಳಿ

ಲೋಕದರ್ಶನವರದಿ

ಹಾವೇರಿ25: ಅಭಿವೃದ್ಧಿಗೊಳ್ಳುತ್ತಿರುವ ವಿಜ್ಞಾನ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಉಂಟಾಗುತ್ತಿದ್ದು, ಈ ನಿಟ್ಟಿನಲ್ಲಿ ಪ್ರಯೋಗಾತ್ಮಕ ವಿಜ್ಞಾನದ ಕಲಿಕೆಯಿಂದ ಕಾರ್ಯ ಸಾಧನೆ ಸುಲಭವಾಗುತ್ತದೆ ಎಂದು ಕೆ. ಎಲ್. ಇ. ಸಂಸ್ಥೆಯ ಉಪಾಧ್ಯಕ್ಷ ಎಮ್. ಸಿ. ಕೊಳ್ಳಿ ಹೇಳಿದರು.  

ಅವರು ನಗರದ ಪ್ರತಿಷ್ಠಿತ ಕೆ. ಎಲ್. ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯ ರಸಾಯನಶಾಸ್ತ್ರ ಹಾಗೂ ಭೌತಶಾಸ್ತ್ರ ವಿಭಾಗ ಸಹಯೋಗದಲ್ಲಿ 'ಪ್ರಯೋಗದ ಮೂಲಕ ವಿಜ್ಞಾನದ ಕಲಿಕೆ' ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 

ತಾಂತ್ರಿಕ ವಲಯ ಇಂದು ಹೆಚ್ಚು ಗುಣಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಯಾಂತ್ರಿಕವಾಗಿ ಅನೇಕ ಪ್ರಯೋಗಗಳು ಯಶಸ್ವಿಯನ್ನು ಕಾಣುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಸರಳ ಪ್ರಯೋಗಗಳ ಮೂಲಕ ವಿಜ್ಞಾನ ಕಾರ್ಯದಕ್ಷತೆಯನ್ನು ಹೆಚ್ಚಿಸುವಿಕೆ ಸಾಧ್ಯವಾಗಿದೆ ಎಂದರು. 

ಸಂಪನ್ಮೂಲ ವ್ಯಕ್ತಿಗಳಾಗಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಯೋಜಕ ಪ್ರೊ. ಎಮ್. ಎಸ್. ಹೆಗಡೆ ಮಾತನಾಡಿ ವಿಜ್ಞಾನದ ಕಲಿಕೆಯ ಜೊತೆಗೆ ಪ್ರಯೋಗಾತ್ಮಕತೆ ಬೆಳೆದು ಬಂದಾಗ ಏನಾದರೊಂದು ಸಂಶೋಧನೆ ಸುಲಭಗೊಳ್ಳುತ್ತದೆ. ಸರಳ ಮತ್ತು ಸಂಕ್ಷಿಪ್ತ ಪರಿಕರಗಳ ಮೂಲಕ ಬಹುದೊಡ್ಡ ಪ್ರಯೋಗಗೊಳ್ಳಲು ಸಾಧ್ಯ. ಉಪಕರಣಗಳ ಬಳಕೆ,  ಕಡಿಮೆ ವೆಚ್ಚ, ಕಡಿಮೆ ಅವಧಿಯಲ್ಲಿ ಹೆಚ್ಚಿನ ದಕ್ಷತೆಯುಳ್ಳ ಕಾರ್ಯಸಾಧನೆ ಮಾಡಲು ಅನೂಕೂಲವಾಗುತ್ತದೆ ಎಂದ ಅವರು ವಿದ್ಯೂದ್ದೀಪದ ಉರಿಯುವಿಕೆಯ ಹಲವು ಪ್ರಯೋಗಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ವಿವಿಧ ವಿದ್ಯುತ್ ಹರಿವಿನ ಹಂತಗಳನ್ನು ಪ್ರದರ್ಶನಗೊಳಿಸಿದರು. 

 ಶ್ವೇತಾ ಪವಾರ ಪ್ರಾಥರ್ಿಸಿದರು. ಪದವಿ ಪ್ರಾಚಾರ್ಯ ಡಾ|| ಎಮ್. ಎಸ್. ಯರಗೊಪ್ಪ ಸ್ವಾಗತಿಸಿದರು. ಚಂದ್ರಕಲಾ ನಿರ್ವಹಿಸಿದರು. ಡಾ|| ರಾಜೇಶ್ವರಿ ಟಿ. ವಂದಿಸಿದರು. ವಿಚಾರ ಸಂಕಿರಣದಲ್ಲಿ ವಿವಿಧ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳ ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರ ಅಧ್ಯಾಪಕರು ಪಾಲ್ಗೊಂಡಿದ್ದರು. ಡಾ|| ಬಿ. ಎನ್. ವಾಸುದೇವನಾಯಕ, ಪ್ರೊ. ಟಿ. ವಿ. ಚವಾಣ, ಪ್ರೊ. ಕೆ. ಎಚ್. ಬ್ಯಾಡಗಿ, ಡಾ|| ಎಸ್. ವಿ. ಮಡವಾಳೆ, ಪ್ರೊ. ಜಿ. ಎಮ್. ಯಣ್ಣಿ ಇತರರು ಇದ್ದರು.