ಧಾರವಾಡ 16: ರಾಜಸ್ಥಾನದ ಅಲವಾರದಲ್ಲಿ ನಡೆದ ರಾಷ್ಟ್ರೀಯ ಮಟ್ಟದ 65ನೇ ಟೈಕೊಂಡ ಸ್ಪರ್ಧೆ ಯಲ್ಲಿ ಕ್ಯಾರಕೊಪ್ಪದ ನವೋದಯ ಶಾಲೆಯ 7ನೇ ವರ್ಗದ ವಿದ್ಯಾರ್ಥಿ ಗಳಾದ ವಿನಯ (18 ಕೆ.ಜಿ.) ಬಂಗಾರ ಪದಕ, ಫಕ್ಕೀರೇಶ (21 ಕೆ.ಜಿ ) ಕಂಚಿನ ಪದಕ, ವಿರೇಶ (23 ಕೆ.ಜಿ ) ಕಂಚಿನ ಪದಕ ಪಡೆದು ಮತ್ತು 9ನೇ ವರ್ಗದ ವಿದ್ಯಾರ್ಥಿ ಸುಜಯ (25 ಕೆ.ಜಿ ) ಕಂಚಿನ ಪದಕ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ದೈಹಿಕ ಶಿಕ್ಷಣ ಬೋಧಕ ಮಾರುತಿ ಕುರಗುಂದ ಹಾಗೂ ಅಂಜಲಿ ಪರಪ್ಪ ವಿದ್ಯಾರ್ಥಿ ಗಳಿಗೆ ಟೈಕೊಂಡ ತರಬೇತಿ ಮತ್ತು ಮಾರ್ಗದರ್ಶನ ನೀಡಿದ್ದಾರೆ. ವಿದ್ಯಾರ್ಥಿ ಗಳ ಈ ಸಾಧನೆಗೆ ಶಾಲೆಯ ಪ್ರಾಚರ್ಾಯ ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರು ಪ್ರಶಂಸಿಸಿದ್ದಾರೆ.