ಲೋಕದರ್ಶನ ವರದಿ
ಮುಂಡಗೋಡ 07: ತಾಲೂಕಿನ ಸನವಳ್ಳಿ ಗ್ರಾಮದಲ್ಲಿ ದೀಪಾವಳಿ ಪ್ರಯುಕ್ತ ನಡೆದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾವಳಿಯಲ್ಲಿ ಶಿರಸಿಯ ಸಾಯಿ ತಂಡ ಪ್ರಥಮ ಬಹುಮಾನ ಪಡೆದಿದೆ. ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 27 ತಂಡಗಳು ಭಾಗವಹಿಸಿದ್ದವು. ಶಿರಸಿಯ ಸಾಯಿ ತಂಡ ಮತ್ತು ವಡಗಟ್ಟಾ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಶಿರಸಿಯ ಸಾಯಿ ತಂಡಜಯಭೇರಿ ಬಾರಿಸಿ ಪ್ರಥಮ ಬಹುಮಾನವಾಗಿ ಟ್ರೋಫಿಯೊಂದಿಗೆ 10ಸಾವಿರ ರೂ., ದ್ವಿತೀಯ ಸ್ಥಾನ ಪಡೆದ ವಡಗಟ್ಟಾ ತಂಡ ಟ್ರೋಫಿಯೊಂದಿಗೆ 7ಸಾವಿರ ರೂ., ಬಿಳ್ಕಿ ತಂಡತೃತೀಯ ಸ್ಥಾನ ಪಡೆದು 5ಸಾವಿರರೂ. ಟ್ರೋಫಿ ಮತ್ತು ಸನವಳ್ಳಿ ತಂಡವು ಟ್ರೋಫಿಯೊಂದಿಗೆ 3ಸಾವಿರ ಪಡೆದು ಚತುರ್ಥ ಸ್ಥಾನ ತನ್ನದಾಗಿಸಿಕೊಂಡಿವೆ.
ತಾ.ಪಂ.ಸದಸ್ಯ ಗಣಪತಿ ವಡ್ಡರಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿದರು. ಸಾಲಗಾಂವ ಗ್ರಾ.ಪಂ. ಉಪಾಧ್ಯಕ್ಷೆ ಲಕ್ಷ್ಮವ್ವತಿಗಡಿ, ಸದಸ್ಯ ಮಂಜು ಕೋಣನಕೇರಿ, ರಾಜು ಗುಬ್ಬಕ್ಕನವರ, ಸುರೇಶ ಕೆರಿಹೊಲದವರ, ಗುಡದಯ್ಯಾ ಕಳಸಗೇರಿ, ಸಂಪತ್ ಕ್ಯಾಮನ ಕೇರಿ ಹಾಗೂ ಇತರರಿದ್ದರು.