ಲೋಕದರ್ಶನ ವರದಿ
ರಾಮದುರ್ಗ 7: ಇತ್ತೀಚೆಗೆ (ದಿ:5/1/2019 ಮತ್ತು 6-1-2019ವರೆಗೆ) ಬಾಗಲಕೋಟೆಯಲ್ಲಿ ನಡೆದ ರಾಜ್ಯ ಮಟ್ಟದ ಟ್ಯ್ರಾಕ್ ಸೈಕ್ಲಿಂಗ್ ಚಾಂಪಿಯನ್ಶಿಫ್ನಲ್ಲಿ ತಾಲೂಕಿನ ಚಂದರಗಿಯ ಕ್ರೀಡಾ ಶಾಲೆಯ ಸೈಕ್ಲಿಂಗ್ ಕ್ರೀಡಾಪಟುಗಳು ಭಾಗವಹಿಸಿದ್ದರು.
16 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಲಾಯಪ್ಪ ಮುಧೋಳ ಈತನು 4 ಕಿ.ಮಿ, ವಿಭಾಗದಲ್ಲಿ 7ನಿಮಿಷ 2ಸೆಕೆಂಡ್ಗಳಲ್ಲಿ ಗುರಿ ತಲುಪಿ ಬಂಗಾರ ಪದಕವನ್ನು ಜಯಿಸಿದ್ದಾನೆ. 18 ವರ್ಷದೊಳಗಿನ ವಿಭಾಗದಲ್ಲಿ ಶಾಲೆಯ ಮತ್ತೋರ್ವ ವಿದ್ಯಾಥರ್ಿ ಯಶವಂತ ಬಿರಾದಾರನು 1 ಕಿ.ಮಿ ವಿಭಾಗದಲ್ಲಿ 1ನಿಮಿಷ 29ಸೆಕೆಂಡ್ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಜಯಿಸಿದ್ದಾನೆ.
14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಸಂಗನಗೌಡ ಬಿರಾದರ ಈತನು ಕಂಚಿನ(2 ಕಿ.ಮಿ, ಕಾಲ - 3ನಿ.1ಸೆಕೆಂಡುಗಳು) ಪದಕವನ್ನು ಹಾಗೂ 16 ವರ್ಷದೊಳಗಿನ ಬಾಲಕರ ವಿಭಾಗದಲ್ಲಿಯೂ ಸಹ ಬೆಳ್ಳಿ ಪದಕ(4ಕಿ.ಮಿ, ಕಾಲ-7ನಿ.3ಸೆಕೆಂಡು) ಜಯಿಸಿದ್ದಾನೆ. ಕನರ್ಾಟಕ ಸೈಕ್ಲಿಂಗ್ ಅಶೋಸಿಯೇಶನ್ ಇವರು ಕ್ರೀಡಾಕೂಟವನ್ನು ಸಂಘಟಿಸಿದ್ದರು. ಸಾಧನೆಗೈದ ವಿದ್ಯಾಥರ್ಿಗಳನ್ನು ಹಾಗೂ ತರಬೇತಿ ನೀಡಿದ ಎನ್. ಕೆ. ಮರಡಿ ಅವರನ್ನು ಸಂಸ್ಥೆಯ ಸಂಸ್ಥಾಪಕರು, ಅಧ್ಯಕ್ಷರು, ಉಪಾಧ್ಯಕ್ಷರು, ನಿದರ್ೇಶಕರು, ಪ್ರಾಚಾರ್ಯರು, ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ