ಯಲಬುರ್ಗಾ 25: ಪ್ರತಿಯೊಬ್ಬ ವ್ಯಕ್ತಿಯಲ್ಲಿ ಒಂದೊಂದು ಛಲ ಎನ್ನುವದು ಇರುತ್ತದೆ ಆದ್ದರಿಂದ ಅಚಲ ನಿಷ್ಠೆ, ಪರಿಶ್ರಮದಿಂದ ಕಷ್ಟಪಟ್ಟು ಓದಿದಾಗ ಮಾತ್ರ ನಾವು ಜೀವನದಲ್ಲಿ ಇಂತಹ ಉನ್ನತ ಹುದ್ದೆಯನ್ನು ಅಲಂಕರಿಸಲು ಸಾದ್ಯವಾಗುತ್ತದೆ ಎಂದು ಛಲವಾದಿ ಮಹಾಸಭಾದ ತಾಲೂಕಾದ್ಯಕ್ಷ ಬಾಲರಾಜ ಛಲವಾದಿ ಮಂಗಳೂರು ಹೇಳಿದರು,
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಛಲವಾದಿ ಮಹಾಸಭಾದಿಂದ ಕೆಎಎಸ್ ಪಾಸಾಗಿ ತಹಸೀಲ್ದಾರ ಹುದ್ದೆಗೆ ನೇಮಕವಾದ ಗುರುರಾಜ ಛಲವಾದಿ ಅವರಿಗೆ ಸನ್ಮಾನಿಸಿ ಅವರು ಮಾತನಾಡಿದರು.
ದಲಿತ ಕುಟುಂಬದಲ್ಲಿ ಜನಿಸಿ ಹಲವಾರು ಸರಕಾರಿ ಹುದ್ದೆಗೆ ನೆಮಕವಾಗಿ ಕೊನೆಗೆ ಕೆಎಎಸ್ ಪಾಸಾಗಿರುವ ಗುರುರಾಜ ಅವರು ನಮ್ಮೆಲ್ಲರಿಗೂ ಪ್ರೇರಣೆಯಾಗಿದ್ದಾರೆ, ಅವರಂತೆ ಇನ್ನೂ ನಮ್ಮ ಜನಾಂಗದಲ್ಲಿ ಹಲವಾರು ಯುವಕರು ಉನ್ನತ ಹುದ್ದೆಯನ್ನು ಪಡೆಯಬೇಕು ಅದರ ಜೊತೆಗೆ ಎಲ್ಲರೂ ನಿಮ್ಮ ನಿಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡಿ ಅವರು ಮುಂದೆ ಬರುವಂತೆ ಪ್ರೇರೆಪಣೆ ನೀಡಬೇಕು, ಗುರುರಾಜ ಅವರು ಮುಂದಿನ ದಿನಗಳಲ್ಲಿ ಇನ್ನೂ ಉನ್ನತ ಹುದ್ದೆಯನ್ನು ಪಡೆಯುವಂತಾಗಲಿ ಅದರ ಜೊತೆಗೆ ನಮ್ಮ ಸಮುದಾಯದ ಏಳಿಗೆಗಾಗಿ ಅವರು ಶ್ರಮಿಸಲಿ ನಮ್ಮ ಜನಾಂಗದಲ್ಲಿ ಉನ್ನತ ಶಿಕ್ಷಣವನ್ನು ಪಡೆದ ಇನ್ನೀತರ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ ಎಂದರು,
ಸನ್ಮಾನ ಸ್ವೀಕರಿಸಿ ಮಾತನಾಡಿದ ಗುರುರಾಜ ಛಲವಾದಿ ನನ್ನ ಸತತ ಪರಿಶ್ರಮ ಹಾಗೂ ನಮ್ಮ ಕುಟುಂಬಸ್ಥರ ಸಹಕಾರದಿಂದ ನಾನು ಇಂದು ಇಂತಹ ಹುದ್ದೆಗೆ ನೆಮಕವಾಗುವದಕ್ಕೆ ಸಾದ್ಯವಾಯಿತು ಸಮಾಜದಲ್ಲಿ ಉತ್ತಮ ಅಧಿಕಾರಿಯಾಗಿ ಕೆಲಸ ನಿರ್ವಹಿಸಿ ಎಲ್ಲರಿಗೂ ಕೀತರ್ಿ ತರುವ ಕೆಲಸವನ್ನು ಮಾಡುತ್ತೇನೆ ಎಂದರು,
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಛತ್ರಪ್ಪ ಛಲವಾದಿ, ತಿಪ್ಪಣ್ಣ ಛಲವಾದಿ, ಕನಕೇಶ ಛಲವಾದಿ, ರಮೇಶ ಛಲವಾದಿ, ಡಿ ಎಚ್ ಶಶೀಧರ ಛಲವಾದಿ, ಗದ್ದೇಪ್ಪ ಕುಡಗುಂಟಿ, ಶರಣಪ್ಪ ಛಲವಾದಿ ಇಟಗಿ, ಶಂಕರಪ್ಪ ಜಕ್ಕಲಿ, ಲಕ್ಷ್ಮಣ್ಣ ಕಾಳಿ ಕುಕನೂರ, ರಾಘು ಕಲ್ಮನಿ, ಮಹಾತೇಶ ಛಲವಾದಿ, ರವಿಕುಮಾರ ಛಲವಾದಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.