ಪರಿಪೂರ್ಣ ರಂಗಕೃತಿ ಭರತನ ನಾಟ್ಯಶಾಸ್ತ್ರ: ತಲ್ಲೂರ

ಬಾಗಲಕೋಟ೨೪: ನಾಟ್ಯಶಾಸ್ತ್ರವು ಆಧ್ಯಾತ್ಮ ದರ್ಶನ, ಯೋಗ, ಇತಿಹಾಸ, ಮಲ್ಲಯುದ್ಧ, ಧರ್ಮವಿದ್ಯೆ, ಅಭಿನಯ, ಅಲಂಕಾರ, ಛಂದಸ್ಸು ಶಾಸ್ತ್ರ, ಮನೋವಿಜ್ಞಾನ  ಮೊದಲಾದವುಗಳನ್ನು ಒಳಗೊಂಡಿದೆ ಎಂದು ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯದಶರ್ಿಗಳಾದ ಜಿ.ಸಿ. ತಲ್ಲೂರ ಹೇಳಿದರು.   

ನಗರದ ಬಿ.ವ್ಹಿ.ವ್ಹಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಸಭಾಭವನದಲ್ಲಿ ಮಂಗಳವಾರ ಕನ್ನಡ ಸ್ನಾತಕೋತ್ತರ ವಿಭಾಗ, ನುಡಿ ವೇದಿಕೆ ಹಾಗೂ ಹಳೆಯ ವಿದ್ಯಾರ್ಥಿ ಗಳ ಸಂಘದ ಸಹಯೋಗದಲ್ಲಿ ಆಯೋಜಿಸಲಾದ " ಭರತನ ನಾಟ್ಯಶಾಸ್ತ್ರ ಎಂಬ ಅದ್ಭುತ ಗ್ರಂಥ ಹಾಗೂ ಅನ್ವೇಷಣೆಯಿಂದ ಪ್ರಕಾಶನದವರೆಗಿನ ರೋಚಕ ಕತೆ ವಿಶೇಷ ಉಪನ್ಯಾಸ" ಕಾರ್ಯಕ್ರಮದಲ್ಲಿ ಅವರು  ಮಾತನಾಡಿದರು.

ನಾಟ್ಯಶಾಸ್ತ್ರ ಕೃತಿಯನ್ನು ಓದಿದ ಮೇಲೆ ನಾವು ಯಾವುದೋ ದೀರ್ಘ ದಾರಿ ಕ್ರಮಿಸಿ, ಎಷ್ಟೋ ದೇಶಗಳನ್ನು ದಾಟಿ, ದೇವ- ದೇವತೆಗಳನ್ನು, ರಾಜ- ರಾಣಿಯರನ್ನು ಸಂಧಿಸಿದ, ಹಲವು ಭಾಷೆಗಳ ಕೇಳುವಿಕೆಯಿಂದ ಪುಳಕಿತಗೊಳ್ಳುವಂತಹ ಅನುಭವ ನೀಡುತ್ತದೆ. ಈ ಕೃತಿ ನಟನೆ, ನಾಟ್ಯ, ರಂಗ, ಬೆಳಕು, ವಾದ್ಯ, ಉಡುಗೆ- ತೊಡುಗೆ, ರಸ, ಧ್ವನಿ, ಲಯ ಹೀಗೆ 36 ಅಧ್ಯಾಯಗಳಲ್ಲಿ ಸಂಪೂರ್ಣ ವಿವರಣೆಯನ್ನು ಒಳಗೊಂಡಿದೆ ಎಂದು ಅವರು ವಿವರಿಸಿದರು.

ನಾಟ್ಯಶಾಸ್ತ್ರ ಕೃತಿಯ ರಚನೆಯ ದಾರಿ ಅತ್ಯಂತ ರೋಚಕವಾದ್ದು. ಇದೊಂದು ಅಪರಿಮಿತ ವ್ಯಾಪ್ತಿ ಒಳಗೊಂಡಿದೆ. ಈ ಕೃತಿ ರಾಮಾಯಣ ಮತ್ತು ಮಹಾಭಾರತಕ್ಕಿಂತಲೂ ಪ್ರಾಚೀನವಾದದ್ದು. ನಾಟ್ಯಶಾಸ್ತ್ರ ಹರಪ್ಪ, ಮೆಹೆಂಜೋದಾರೊ ನಾಗರಿಕತೆಗಳಿಗಿಂತ ಹಿಂದಿನದು. ಇದರ ಕುರಿತು ಕೆಲವು ವರ್ಷಗಳಿಂದೀಚೆಗೆ ಅನ್ವೇಷಣ, ಸಂಗ್ರಹ, ಸಂಕಲನ, ಸಂಶೋಧನ, ಕ್ರೋಢಿಕರಣ, ಪರಿಷ್ಕರಣಗೊಂಡಿದೆ. ಪ್ರಾರಂಭದಲ್ಲಿ ಈ ಕೃತಿ ಅಧ್ಯಾಯಗಳ ಬಿಡಿ- ಬಿಡಿ ಲೇಖನವಾಗಿ ಸಂಗ್ರಹವಾಗಿತ್ತು. ವಿಲ್ಸ್ನ್, ರೆನ್ಯೋ, ಹಮರ್್ನ್ರಂತಹ ಪಾಶ್ಚಾತ್ಯ ತಜ್ಞರ ಮೂಲಕ ಪ್ರಕಟಣೆಗೆ ಪ್ರೇರಣೆ ದೊರೆಯಿತು. ನಂತರದಲ್ಲಿ ಭಾರತೀಯ ವಿದ್ವಾಂಸರಾದ ಪಂ.ಶಿವದತ್ತ, ಕಾಶೀನಾಥ ಪಾಂಡುರಂಗ, ಪಂ.ಕೇದಾರನಾಥ, ಬಡಕ್ನಾಥ ಶಮರ್ಾ, ಬಲದೇವ ಉಪಾಧ್ಯಾಯ ಅವರ ಶ್ರಮದಿಂದ ಮೊದಲ ಬಾರಿಗೆ ನಾಟ್ಯಶಾಸ್ತ್ರ ಕೃತಿ ಪ್ರಕಟಗೊಂಡಿತು ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ವ್ಹಿ.ವ್ಹಿ ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಕಾಯರ್ಾಧ್ಯಕ್ಷರಾದ ಅಶೋಕ ಎಂ ಸಜ್ಜನ ವಹಿಸಿದ್ದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವ್ಹಿ.ಎಸ್. ಕಟಗಿಹಳ್ಳಿಮಠ ಸ್ವಾಗತಿಸಿ, ಪರಿಚಯಿಸಿದರು. ಡಾ. ವಿ.ಎಮ್. ಕಲ್ಮಠ ವಂದಿಸಿದರು. ಡಾ.ಬಿ.ವಿ. ಖೋತ  ನಿರೂಪಿಸಿದರು. ಎಲ್ಲ ಮಹಾವಿದ್ಯಾಲಯಗಳ ಪ್ರಾಚಾರ್ಯರು, ಪ್ರಾಧ್ಯಾಪಕರು ವಿದ್ಯಾಥರ್ಿ, ವಿದ್ಯಾಥರ್ಿನಿಯರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಅತಿಥಿಗಳೊಂದಿಗೆ ಸಂವಾದ ಏರ್ಪಡಿಸಲಾಗಿತ್ತು.