ಹುಕ್ಕೇರಿ ಜುಲೈ 11: ಬಂಗಾರಪೇಟೆ ತಹಶೀಲ್ದಾರ್ ಚಂದ್ರಮೌಳೇಶ್ವರ ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವುದು ಇಡಿ ರಾಜ್ಯವನ್ನೆ ಬೆಚ್ಚಿ ಬೀಳಿಸಿದೆ. ಕರ್ತವ್ಯ ನಿರತ ತಹಶೀಲ್ದಾರ್ ಹತ್ಯೆ ಮಾಡಿರುವುದನ್ನು ಸರ್ಕಾರರಿ ನೌಕರರ ಸಂಘ ಖಂಡಿಸಿ ಇಂದು ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸರ್ಕಾರರಿ ನೌಕರರ ಸಂಘದ ಅದ್ಯಕ್ಷ ಎಂ ಬಿ ನಾಯಿಕ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಎಂ.ಬಿ. ನಾಯಿಕ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದೊಡ್ಡ ಕಲವಂಚಿ ಗ್ರಾಮದಲ್ಲಿ ಜಮೀನು ಸವರ್ೆಗೆ ತೆರಳಿದ್ದ ವೇಳೆ ನಿವೃತ್ತ ಶಿಕ್ಷಕ ವೆಂಕಟಾಚಲಪತಿ ಎಂಬಾತ ಎದೆಗೆ ಚಾಕುವಿನಿಂದ ಇರಿದು ತಹಶೀಲ್ದಾರ್ ಚಂದ್ರಮೌಳೇಶ್ವರ ಅವರನ್ನು ಕೊಲೆ ಮಾಡಿದ್ದಾನೆ. ವೆಂಕಟಾಪತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಆದರೆ ಉನ್ನತ ಮಟ್ಟದ ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಿಸಲು ಮುಕ್ತ ವಾತಾವರಣ ಇಲ್ಲ. ಕೇಳ ಹಂತದ ಅಧಿಕಾರಿಗಳ ಗತಿ ಏನು ? ಇಬ್ಬರೂ ಕಠಿಣ ಶಿಕ್ಷೆಯಾಗಬೇಕು. ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಸರ್ಕಾರರ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ನಂತರ ತಹಸಿಲ್ದಾರ ಅಶೋಕ ಗುರಾಣಿ ಮುಖಾಂತರ ಸರ್ಕಾರರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಘಟಕ ಅದ್ಯಕ್ಷ ಎನ್ ಆರ್ ಪಾಟೀಲ, ವಿವಿಧ ಘಟಕಗಳ ಅದ್ಯಕ್ಷರಾದ ಎಸ್ ಎಸ್ ಕರಿಗಾರ, ಹಿತವನಿ, ಕಾರ್ಯದಶರ್ಿ ಭಿಮಪ್ಪಾ ಖೇಮಾಳೆ, ಖಜಾಂಚಿ ಅವಿನಾಶ ಹೋಳೆಪ್ಪಗೋಳ, ಎನ್ ಬಿ ಗುಡಸಿ, ಎಚ್ ಎಲ್ ಪೂಜಾರ ಮೊದಲಾದವರು ಉಪಸ್ಥಿತರಿದ್ದರು