ಕೇಂದ್ರದ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆ : ಶೈಲಜಾ ಹಿರೇಮಠ
ಕೊಪ್ಪಳ 15: ಕೇಂದ್ರದ ಬೆಲೆ ಏರಿಕೆಯಿಂದ ದೇಶದ ಜನತೆ ತತ್ತರಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರರಾದ ಶೈಲಜಾ ಹಿರೇಮಠ ಹೇಳಿದರು.ಅವರು ಮಂಗಳವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ, ಉದ್ದೇಶಿಸಿ ಮಾತನಾಡಿ ದೇಶದ ರೈತರು, ಕೂಲಿಕಾರ್ಮಿಕರು ಮತ್ತು ಜನಸಾಮಾನ್ಯರು ಉಪಯೋಗಿಸುವ ಬೆಣ್ಣೆ, ಹಾಲು ಮತ್ತು ಮೊಸರಿನ ಇನ್ನಿತರ ವಸ್ತುಗಳ ಮೇಲೆ 18ಅ ಜಿಎಸ್ ಟಿ ಹಾಕಿ ಕೊಳ್ಳೆ ಹೊಡೆಯುತ್ತಿದೆ ಕೇಂದ್ರ ಸರ್ಕಾರ,ದೇಶದ ಆರ್ಥಿಕತೆಯನ್ನು ಹೆಚ್ಚಿಸುವ ಬದಲು ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಜನರಿಂದ ಹಣವನ್ನು ಕಿತ್ತು ತಿನ್ನುತ್ತಿರುವ ಕೇಂದ್ರ ಬಿಜೆಪಿ ಸರ್ಕಾರ,ಕೇಂದ್ರದ ಬೆಲೆಯೇರಿಕೆಯಿಂದ ತತ್ತರಿಸುತ್ತಿರುವ ಜನರಿಗೆ ಆರ್ಥಿಕವಾಗಿ ಬಲಪಡಿಸಲು ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ತಂದಿದೆ,
ಈಗಾಗಲೇ ದೇಶದ ಜನರ ಖರೀದಿಸುವ ಸಾಮರ್ಥ್ಯ ಕುಗ್ಗಿದೆ ಹಿಗಿದ್ದರು ಪ್ರತಿದಿನ ಬಳಸುವ ಐಕಉ ಸಿಲಿಂಡರ್ ಬೆಲೆಯನ್ನು 50 ರೂ. ಹೆಚ್ಚಿಸಿ ಜನರಿಗೆ ಗಾಯದ ಮೇಲೆ ಬರೆ ಎಳೆದ ಕೇಂದ್ರ ಸರ್ಕಾರ,ಐಕಉ ಸಿಲಿಂಡರ್ ಮಾತ್ರವಲ್ಲ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ 2 ರೂ. ಹೆಚ್ಚಿಸಿ ದೇಶದ ಜನರ ಬದುಕನ್ನೇ ನರಕ ತಳ್ಳಿದೆ ಎಂದ ಅವರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೇರಿಸಿ ಜನರ ಜೇಬಿಗೆ ಕತ್ತರಿ ಹಾಕಿದ ಕೇಂದ್ರ ಬಿಜೆಪಿ ಸರ್ಕಾರ.
ಕಳೆದ 6 ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಏರಿಕೆ ಮಾಡಿ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ,2014ರಲ್ಲಿ ಮೋದಿ ಅಧಿಕಾರಕ್ಕೆ ಬಂದರೆ ಒಂದು ಡಾಲರ್ ಬೆಲೆಯನ್ನು 1 ರೂಪಾಯಿಗೆ ತರುವುದಾಗಿ ಹೇಳಿ ಸತತ 7 ವರ್ಷಗಳ ಕಾಲ ಭಾರತೀಯ ರೂಪಾಯಿ ಮೌಲ್ಯವನ್ನು ಕಳೆದುಕೊಂಡು ಈ ವರ್ಷವೂ ಡಾಲರ್ಗೆ 86.35 ರೂ. ಕುಸಿದಿದೆ,ಸಾಲ ಮಾಡಿಯಾದರು ತುಪ್ಪ ತಿನ್ನು ಎನ್ನುವಂತೆ ಮೋದಿ ಸರ್ಕಾರ 2014ರಲ್ಲಿ 55 ಲಕ್ಷ ಕೋಟಿ ಇದ್ದ ದೇಶದ ಸಾಲವನ್ನು 205 ಲಕ್ಷ ಕೋಟಿಗೆ ಹೆಚ್ಚಿಸಿ ಪ್ರತಿಯೊಬ್ಬ ಪ್ರಜೆಯ ಮೇಲೆ ಸರಾಸರಿ 1.5 ಲಕ್ಷ ರೂ ಸಾಲವನ್ನು ಹೊರಿಸಿದೆ,ಒಂದು ಕಡೆ ಬೆಲೆ ಏರಿಕೆಯಾದರೆ ಇನ್ನೊಂದು ಕಡೆಯ ನಿರುದ್ಯೋಗವು ತಾಂಡವಾಡುತ್ತಿದೆ ಸೆಪ್ಟೆಂಬರ್ 2024ರಲ್ಲಿ ಭಾರತದ ನಿರುದ್ಯೋಗ ದರವು 7.8ಅ ಸಾಮಾನ್ಯ ಜನರಿಗೆ ಕೆಲಸ ಸಿಗುತ್ತಿಲ್ಲಾ ಇದರಿಂದ ದೇಶದ ಜನತೆ ತತ್ತರಿಸಿ ಹೋಗಿದ್ದಾರೆ ಎಂದರು.