ಹುಬ್ಬಳ್ಳಿ 18: ವಿಭಾಗೀಯ ರೈಲ್ವೇ ವತಿಯಿಂದ ಇಂದು ರೈಲ್ವೇ ಆಫೀಸರ ಕ್ಲಬ್ ನಲ್ಲಿ ಅಖಿಲ ಭಾರತ ಪಿಂಚಣಿ ಅದಾಲತ್ -2024 ಆಯೋಜಿಸಲಾಗಿತ್ತು.
ಮುಖ್ಯ ಕಾರ್ಮಿಕ ಅಧಿಕಾರಿ ಕೆ. ಆಸೀಫ್ ಹಫೀಜ್ ಮಾತನಾಡಿ, ರೈಲ್ವೆ ಇಲಾಖೆಯ ಉನ್ನತೀಕರಣದಲ್ಲಿ ನಿವೃತ್ತ ನೌಕರರ ಶ್ರಮ ಅಧಿಕವಾಗಿದೆ. ಇಲಾಖೆಯು ನಿವೃತ್ತ ನೌಕರರ ಹಿತ ಕಾಯುತ್ತದೆ. ಪ್ರತಿ ಪಿಂಚಣಿದಾರರ ಸಮಸ್ಯೆ ಪರಿಹರಿಸಲು ಇಂದು ರೈಲ್ವೆ ಇಲಾಖೆ ದೇಶದಲ್ಲಿ ರಾಷ್ಟ್ರೀಯ ಪಿಂಚಣಿ ಅದಾಲತ್ ಆಯೋಜನೆ ಮಾಡಲಾಗಿದ್ದು, ಇಲ್ಲಿ ನಿವೃತ್ತರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಿ ಅವರ ಹಿತ ಕಾಯಲಾಗುತ್ತದೆ ಎಂದರು. ನಿವೃತ್ತಿ ಸಂದರ್ಭದಲ್ಲಿ ಸೇವಾ ದಾಖಲೆ, ಪಿಪಿಓ (ನಿವೃತ್ತ ಸೇವಾ ಪ್ರಮಾಣ ಪತ್ರ ), ಸೆಟ್ಟಲ್ಮೆಂಟ್ ಶಿಟ್, ಪೆನ್ಷನ್ ವಿವರಣಾ ಪತ್ರ, ಕೌಟುಂಬಿಕ ಪೆನ್ಷನ್ ಸದಸ್ಯರ ವಿವರ ಸೇರಿದಂತೆ ಅನೇಕ ದಾಖಲೆಗಳ ಮುದ್ರಿತ ಪ್ರತಿಗಳನ್ನು ನೀಡಲಾಗುವುದು ಎಂದರು. ಕೌಟುಂಬಿಕ ಪೆನ್ಷನ್ ಪಡೆಯುವಲ್ಲಿ ಆ ಪಿಂಚಣಿದಾರರ ಕುಟುಂಬದಲ್ಲಿ ಕೆಲವೊಂದು ಸಮಸ್ಯೆ ಇರುವುದರಿಂದ ಆಗ ಪಿಂಚಣಿ ಪಡೆಯುವಲ್ಲಿ ಅಡೆತಡೆ ಆಗುವುದು, ಸೂಕ್ತ ದಾಖಲೆ ನೀಡಿದರೆ ಇದನ್ನು ಶೀಘ್ರದಲ್ಲಿ ಪರಿಹಾರ ಮಾಡಲಾಗುತ್ತದೆ ಎಂದರು.
ವಿಭಾಗೀಯ ರೈಲ್ವೆ ಹಿರಿಯ ಆರ್ಥಿಕ ವ್ಯವಸ್ಥಾಪಕರಾದ ಡಾ. ಅನೂಪ್ ಮಾತನಾಡಿ, ಆರ್ಥಿಕ ಮತ್ತು ಕಾರ್ಮಿಕ ಕಲ್ಯಾಣ ವಿಭಾಗಗಳ ಸಮನ್ವಯ ಕಾರ್ಯದ ಮೂಲಕ ಪಿಂಚಣಿದಾರ ಸಮಸ್ಯೆಗಳನ್ನು ಪರಿಹರಿಸಿ, ವ್ಯರ್ಥ ಅಲೆದಾಟ, ಅನಗತ್ಯ ದಾಖಲೆ ಪಡೆಯುವುದನ್ನು ತಪ್ಪಿಸಲಾಗುತ್ತದೆ ಎಂದರು.
ನಿವೃತ್ತ ರೈಲ್ವೆ ನೌಕರರ ಸಂಘದ ಕಾರ್ಯದರ್ಶಿ ಎಸ್.ಎಸ್. ಬಳ್ಳಾರಿ ಮಾತನಾಡಿ, ಕೌಂಟುಬಿಕ ಪಿಂಚಣಿ ಸಮಸ್ಯೆಗಳ ಪರಿಹಾರಕ್ಕೆ ಮನವಿ ಸಲ್ಲಿಸಿದ್ದರು. ಈ ಅದಾಲತ್ ನಲ್ಲಿ ಸಹಾಯಕ ಕಾರ್ಮಿಕ ಅಧಿಕಾರ ತಿರುಮಲ ರೆಡ್ಡಿ ಭಾಗವಹಿಸಿದ್ದರು. ಅದಾಲತ್ ನಲ್ಲಿ ಒಟ್ಟು 13 ಕೇಸಗಳನ್ನು ಪರಿಹಾರ ಮಾಡಲಾಗಿದ್ದು, ಹೊಸದಾಗಿ 03 ಕೇಸಗಳನ್ನು ದಾಖಲಾತಿ ಮಾಡಲಾಗಿದೆ.